ವಕ್ಫ್ ಬೋರ್ಡ್ನ ಉದ್ಧಟತನಕ್ಕೆ, ಅತಿಕ್ರಮಣ ನೀತಿಗೆ ಇದು ಮತ್ತೊಂದು ಉದಾಹರಣೆ: ತೇಜಸ್ವಿ ಸೂರ್ಯ
ವಕ್ಫ್ ಆಕ್ರಮಿತ ಆಸ್ತಿಗಳ ಕುರಿತಾಗಿ ಸಚಿವ ಎಂಬಿ ಪಾಟೀಲ್ರ ಗಮನಕ್ಕೆ ಬಂದಿರುವುದು ವಿಜಯಪುರ ಜಿಲ್ಲೆಯ ಕೇವಲ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕೆಲವು ಜಮೀನುಗಳಿಗೆ ಬಂದಿರುವ ನೋಟಿಸ್ಗಳ ಕುರಿತಾಗಿ ಮಾತ್ರ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯತಿಗಳ ರೈತರು, ಸಾರ್ವಜನಿಕರ ಗೋಳು ಕೂಡ ಇದೇ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಬೆಂಗಳೂರು, ಅಕ್ಟೋಬರ್ 20: ವಕ್ಫ್ ಆಸ್ತಿ ಎಂದು ನೋಟಿಸ್ ಬಂದರೆ ಆತಂಕ ಬೇಡ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿಕೆ ವಿಚಾರವಾಗಿ ವಕ್ಫ್ ಬೋರ್ಡ್ನ ಉದ್ಧಟತನಕ್ಕೆ, ಅತಿಕ್ರಮಣ ಮತ್ತು ವಿಸ್ತರಣಾ ನೀತಿಗೆ ಇದು ಮತ್ತೊಂದು ಉದಾಹರಣೆ ಎಂದು ಬಿಜೆಪಿ ಸಂಸದ ತೇಜಸ್ವಿ (Tejasvi Surya) ಸೂರ್ಯ ಕಿಡಿಕಾರಿದ್ದಾರೆ.
ಎಂಬಿ ಪಾಟೀಲ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
ಸದ್ಯ ಈ ವಿಚಾರವಾಗಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ವಕ್ಫ್ ಆಕ್ರಮಿತ ಆಸ್ತಿಗಳ ಕುರಿತಾಗಿ ಸಚಿವ ಎಂಬಿ ಪಾಟೀಲ್ರ ಗಮನಕ್ಕೆ ಬಂದಿರುವುದು ವಿಜಯಪುರ ಜಿಲ್ಲೆಯ ಕೇವಲ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕೆಲವು ಜಮೀನುಗಳಿಗೆ ಬಂದಿರುವ ನೋಟಿಸ್ಗಳ ಕುರಿತಾಗಿ ಮಾತ್ರ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯತಿಗಳ ರೈತರು, ಸಾರ್ವಜನಿಕರ ಗೋಳು ಕೂಡ ಇದೇ ಆಗಿದೆ ಎಂದಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
ವಕ್ಫ್ ಬೋರ್ಡ್ ನ ಉದ್ಧಟತನಕ್ಕೆ, ಅತಿಕ್ರಮಣ & ವಿಸ್ತರಣಾ ನೀತಿಗೆ ಮತ್ತೊಂದು ಉದಾಹರಣೆ ಇದು!
ವಕ್ಫ್ ಆಕ್ರಮಿತ ಆಸ್ತಿಗಳ ಕುರಿತಾಗಿ ಮಾನ್ಯ ಸಚಿವರ ಗಮನಕ್ಕೆ ಬಂದಿರುವುದು ವಿಜಯಪುರ ಜಿಲ್ಲೆಯ ಕೇವಲ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕೆಲವು ಜಮೀನುಗಳಿಗೆ ಬಂದಿರುವ ನೋಟೀಸ್ ಗಳ ಕುರಿತಾಗಿ ಮಾತ್ರ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯತಿಗಳ… https://t.co/yKxZUXaIU3
— Tejasvi Surya (@Tejasvi_Surya) October 20, 2024
ವಿಜಯಪುರ ಜಿಲ್ಲೆಯೊಂದರಲ್ಲಯೇ 12,900 ಎಕರೆಯಷ್ಟು ಭೂಮಿಯನ್ನು ಶೀಘ್ರಗತಿಯಲ್ಲಿ ವಕ್ಫ್ ಹೆಸರಿಗೆ ನೋಂದಾಯಿಸಲು ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದರೂ ಕೂಡ, ನೈಜ ಅಂಕಿ-ಅಂಶಗಳ ಪ್ರಕಾರ 15,900 ಎಕರೆ ಗಳಷ್ಟು ಭೂಮಿ ಅತಿಕ್ರಮಣವಾಗಿರುವ ಅಂದಾಜಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ಜನರದ್ದಾಗಿದೆ ಎಂಬುದು ಗಮನಾರ್ಹ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ವಿಜಯಪುರದಲ್ಲಿ ಅಧಿಕಾರಿಗಳಿಗೆ ಕೇವಲ ಮೌಖಿಕ ಆದೇಶ ನೀಡಿ, 12,900 ಎಕರೆ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ನಮೂದಾಗಿರುವ ಎಲ್ಲ ಆಸ್ತಿಗಳನ್ನು ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರೆ, ತಾವುಗಳು ರೈತರ, ಸಾರ್ವಜನಿಕರ ಪರವಾಗಿ ಸಾಂತ್ವನ ಹೇಳುತ್ತಿರುವುದು ಒಂದಕ್ಕೊಂದು ತದ್ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾಲುಕೆರೆದು ಜಗಳಕ್ಕೆ ಹೋಗುವ ಪ್ರವೃತ್ತಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್
ಕಾಂಗ್ರೆಸ್ ಪಕ್ಷಕ್ಕೆ ವಕ್ಫ್ನ ಅತಿಕ್ರಮಣದ ಬಗ್ಗೆ, ಜನಸಾಮಾನ್ಯರ ಬಗೆಗೆ ನೈಜ ಕಾಳಜಿ ಇದ್ದರೆ, ಪ್ರಸ್ತುತ ಬಿಜೆಪಿ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧಿಸದೇ ಸಹಕಾರ ನೀಡಬೇಕಿದ್ದು, ತಾವುಗಳು ಈ ಕುರಿತು ಧ್ವನಿ ಎತ್ತಿ, ವಿಜಯಪುರದ ಹಿಂದೂಗಳ ಪರವಾಗಿ ನಿಲ್ಲುವಂತೆ ವಿನಂತಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 pm, Sun, 20 October 24