ಹೈದರಾಬಾದ್ ಟೆಕ್ಕಿಗೆ ಕೊರೊನಾ, ಬೆಂಗಳೂರಿನಲ್ಲಿ ಕಂಪನಿಗೆ ಬೀಗ, ಇತರೆ ಟೆಕ್ಕಿಗಳಿಗೆ WFH!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮಗಳು ಒಂದೊಂದೇ ಗೋಚರವಾಗತೊಡಗಿವೆ. ಕಳೆದ ವಾರ ಬೆಂಗಳೂರಿನಲ್ಲಿ ನೆಲೆಸಿದ್ದು ಹೈದರಾಬಾದಿಗೆ ತೆರಳಿದ 24 ವರ್ಷದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದೇ ತಡ, ಎಲ್ಲೆಡೆ ಕಟ್ಟೆಚ್ಚರ ಕ್ರಮಗಳು ಜಾರಿಯಾಗತೊಡಗಿವೆ. ಕೊರೊನಾ ಸೋಂಕು ಪೀಡಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಆತ ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಹಾಕಲಾಗಿದೆ. ಆದ್ರೆ ಇತರೆ ಟೆಕ್ಕಿಗಳಿಗೆ ಮುಂಜಾಗರೂಕತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಅಂದ್ರೆ Work From Home ಮಾಡುವಂತೆ ಕಂಪನಿ ಸೂಚನೆ […]

ಹೈದರಾಬಾದ್ ಟೆಕ್ಕಿಗೆ ಕೊರೊನಾ, ಬೆಂಗಳೂರಿನಲ್ಲಿ ಕಂಪನಿಗೆ ಬೀಗ, ಇತರೆ ಟೆಕ್ಕಿಗಳಿಗೆ WFH!
ಸಾಧು ಶ್ರೀನಾಥ್​

Updated on: Mar 03, 2020 | 6:09 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮಗಳು ಒಂದೊಂದೇ ಗೋಚರವಾಗತೊಡಗಿವೆ. ಕಳೆದ ವಾರ ಬೆಂಗಳೂರಿನಲ್ಲಿ ನೆಲೆಸಿದ್ದು ಹೈದರಾಬಾದಿಗೆ ತೆರಳಿದ 24 ವರ್ಷದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದೇ ತಡ, ಎಲ್ಲೆಡೆ ಕಟ್ಟೆಚ್ಚರ ಕ್ರಮಗಳು ಜಾರಿಯಾಗತೊಡಗಿವೆ.

ಕೊರೊನಾ ಸೋಂಕು ಪೀಡಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಆತ ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಹಾಕಲಾಗಿದೆ. ಆದ್ರೆ ಇತರೆ ಟೆಕ್ಕಿಗಳಿಗೆ ಮುಂಜಾಗರೂಕತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಅಂದ್ರೆ Work From Home ಮಾಡುವಂತೆ ಕಂಪನಿ ಸೂಚನೆ ನೀಡಿದೆ.

ನಮ್ಮಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿ ಸಧ್ಯ ಕೊರೊನಾ ವೈರಸ್​ಗೆ ಒಳಗಾಗಿದ್ದಾರೆ. ಹೀಗಾಗಿ ಕಂಪನಿಯನ್ನೇ ತಾತ್ಕಾಲಿಕವಾಗಿ ಕ್ಲೋಸ್ ಮಾಡಿರುವುದಾಗಿ ಕಂಪನಿ ಆಡಳಿತ ಮಂಡಳಿ ತಿಳಿಸಿದೆ.

ಟೆಕ್ಕಿ ವಾಸವಾಗಿದ್ದ ಅಪಾರ್ಟ್​​ಮೆಂಟ್​​ಗೆ ನೋಟಿಸ್:
ತೆಲಂಗಾಣದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಟೆಕ್ಕಿ ವಾಸವಾಗಿದ್ದ ಅಪಾರ್ಟ್​​ಮೆಂಟ್​​ಗೆ ಆರೋಗ್ಯ ಇಲಾಖೆ ನೋಟಿಸ್​ ಜಾರಿ ಮಾಡಿದ್ದು, ಅಪಾರ್ಟ್​​ಮೆಂಟ್​ನಲ್ಲಿ ತಪಾಸಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Published On - 5:47 pm, Tue, 3 March 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us