ವ್ಯಕ್ತಿಯ ಕೊಲೆ ಮಾಡಿ ಆಟೋಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಆಟೋದ ಸಮೇತ ಬೆಂಕಿ ಹಚ್ಚಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ: ಬೇರೆಲ್ಲೋ ಕೊಲೆ ಮಾಡಿ ಆಟೋದಲ್ಲಿ ಶವವಿಟ್ಟು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಅಜ್ಜಪ್ಪನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.
ಆಟೋ ಸಮೇತವಾಗಿ ವ್ಯಕ್ತಿಯನ್ನು ಸುಟ್ಟು ಹಾಕಿ ಹತ್ಯೆ ಮಾಡಿದ್ದಾರೆ. ಬೇರೆಲ್ಲೋ ಕೊಲೆ ಮಾಡಿ ಆಟೋದಲ್ಲಿ ಶವವಿಟ್ಟು ಬೆಂಕಿ ಹಚ್ಚಿರುವ ಶಂಕೆ ಮೂಡಿದೆ. ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಬಂಗಾರಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!