ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದೆ. ಪಾದಯಾತ್ರೆಗೂ ಮೊದಲು ಕಾಂಗ್ರೆಸ್ (Congress) ಯೋಚಿಸ ಬೇಕಿತ್ತು. ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿನಾ ಅಥವಾ ಕಾಂಗ್ರೆಸ್ ಹೋರಾಟ ಸುಪ್ರೀಂಕೋರ್ಟ್ ವಿರುದ್ಧವಾ ಎಂದು ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕಾಂಗ್ರೆಸ್ನವರು ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಸುರ್ಜೆವಾಲಾ ಕರೆಸಿ ಉದ್ಘಾಟನೆ ಮಾಡಿಸಿದ್ದು, ವಿಶೇಷ. 2013ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಮಾಡಿದರು. ಜನರಿಗೆ 2008-2013 ರವರೆಗೂ ಬಿಜೆಪಿ ಅಧಿಕಾರದಲ್ಲಿತ್ತು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ 5.94 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಮಾಡುತ್ತೇವೆ ಅಂತ ಹೇಳಿದ್ದರು. ಅಧಿಕಾರಕ್ಕೆ ಬಂದ್ರು ಕಾಂಗ್ರೆಸ್ನವರು 2013-2014 ರವರೆಗೂ ಕಾಂಗ್ರೆಸ್ ಖರ್ಚು ಮಾಡಿದ್ದು 7,228 ಕೋಟಿ ಮಾತ್ರ. ಐದು ವರ್ಷದಲ್ಲಿ ಯುಕೆಪಿ ಮೂರನೇ ಹಂತಕ್ಕೆ 2300 ಕೋಟಿ ಮಾತ್ರ ಖರ್ಚು ಮಾಡಿದ್ರು,
ಕೃಷ್ಣ ಕೊಳ್ಳ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಕಾರಜೋಳ ಸುಳ್ಳು ಹೇಳಿದ್ದಾನೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಯಾವತ್ತೂ ಸುಳ್ಳು ಹೇಳಿಲ್ಲ ಹೇಳೋದೂ ಇಲ್ಲ. ನಾನು ಸತ್ಯ ಹೇಳಿದರೆ ಕಾಂಗ್ರೆಸ್ನವರಿಗೆ ಮೂಗಿನ ಮೇಲೆ ಸಿಟ್ಟು ಬರುತ್ತದೆ. ಸಿಂಧಗಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಅವರು ಏನು ಆರೋಪ ಮಾಡಿದ್ರು? ಹೊಟ್ಟೆಪಾಡಿಗೆ ಬಿಜೆಪಿ ಹೋಗಿದಿನಿ ಅಂದ್ರು. ನಾನು ಬಡವ ಇರಬಹುದು, ಆದ್ರೆ ನಾನೂ ನೀವು ಒಂದೇ ಪಕ್ಷದಲ್ಲಿ ಇದ್ದವರು ಸಿದ್ರಾಮಣ್ಣ ಎಂದು ಹೇಳಿದರು.
ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣವನ್ನ ಬಿಡಬೇಕು. ಬ್ರಿಟಿಷರ ಆಡಳಿತಕ್ಕಿಂತ ಕಾಂಗ್ರೆಸ್ ಆಡಳಿತ ಕೆಟ್ಟದ್ದು. ಕಾಂಗ್ರೆಸ್ ಈಗಾಗಲೇ ವಾರಸುದಾರರಿಲ್ಲದ ಮನೆಯಾಗಿದೆ. 2023ರ ಬಳಿಕ ಕಾಂಗ್ರೆಸ್ ಅಡ್ರೆಸ್ ಇರೋದಿಲ್ಲ. 2023ರ ಬಳಿಕ ಕಾಂಗ್ರೆಸ್ ಕೆಳಮಟ್ಟಕ್ಕೆ ಹೋಗಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ನಾಲ್ಕನೇ ತಾರೀಖಿಗೆ ಬಜೆಟ್ ಮಂಡಿಸ್ತಿದ್ದೇವೆ. ಸಿಎಂ 2022ನೇ ಸಾಲಿನ ಬಜೆಟ್ ಮಂಡಿಸುತ್ತಾರೆ. ಪೂರ್ವಭಾವಿ ಸಭೆಯಲ್ಲಿ ನಾನು ಸಿಎಂಗೆ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಕೊಡುವಂತೆ ಮನವಿ ಮಾಡಿದ್ದೇನೆ. ನೀರಾವರಿ ಯೋಜನೆಗೆ ತ್ವರಿತಗತಿಯಲ್ಲಿ ಕೆಲಸ ಆಗುವಂತೆ ಆದ್ಯತೆ ನೀಡಬೇಕು ಅಂತ ಕೂಡ ಹೇಳಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:
Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ