ಸರ್ಕಾರವೇ ಜನರ ಕೊಲೆ ಮಾಡುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
18 ವರ್ಷ ಮೇಲ್ಪಟವರಿಗೆ 6.5 ಕೋಟಿ ವ್ಯಾಕ್ಸಿನ್ ಬೇಕು. ಆದರೆ ಸರ್ಕಾರದ ಬಳಿ ಲಸಿಕೆಯೇ ಇಲ್ಲ. ಇಷ್ಟು ನಿಧಾನವಾಗಿ ಲಸಿಕೆ ಹಾಕಿದ್ರೆ ಸಂಪೂರ್ಣ ಲಸಿಕೆ ಹಾಕಿ ಮುಗಿಸಲು 2-3 ವರ್ಷ ಬೇಕು. ಸದ್ಯ ಐಸಿಯು ಬೆಡ್, ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸಿ ಎಂದು ಅವರು ಆಗ್ರಹಿಸಿದರು.
ಬೆಂಗಳೂರು: ಒಂದೆಡೆ ಆಕ್ಸಿಜನ್ ಇಲ್ಲದೆ ಜನ ಜೀವಕಳೆದುಕೊಳ್ತಿದ್ದಾರೆ. ಇನ್ನೊಂದೆಡೆ ಜನಸಾಮಾನ್ಯರ ಬಳಿ ಆಹಾರ ಇಲ್ಲದೇ ಹಾಹಾಕಾರ ಶುರುವಾಗಿದೆ. ತೋರಿಕೆಗೆ ಬೆಡ್ ಕೊಡೋದು, ಲಸಿಕೆ ಹಾಕುವುದು ಆಗುತ್ತಿದೆ. ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ಜನರನ್ನು ಸಾಯಿಸುತ್ತಿದೆ. ಸರ್ಕಾರವೇ ಜನರನ್ನು ಕೊಲೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ದೇಶದಲ್ಲಿ ಜನರು ಆಕ್ಸಿಜನ್ ಇಲ್ಲದೇ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಜನರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡವರಿಗೆ ಈ ಸರ್ಕಾರ ಏನೂ ನೀಡಿಲ್ಲ. ಏನೂ ನೀಡದಿದ್ದರೆ ವಲಸೆ ಕಾರ್ಮಿಕರು ಬದುಕೋದು ಹೇಗೆ? ತಜ್ಞರ ಸಲಹೆಯನ್ನು ಸರ್ಕಾರ ಸರಿಯಾಗಿ ಕೇಳುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರ, ರಾಜ್ಯ ಸರ್ಕಾರಕ್ಕೆ 2ನೇ ಅಲೆ ಬಗ್ಗೆ ಮಾಹಿತಿ ಇತ್ತು. ಕೊರೊನಾ 2ನೇ ಅಲೆ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರು ಆದರೆ ಸರ್ಕಾರ ತಜ್ಞರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದೆ. ಎರಡನೇ ಅಲೆಯಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ. ಈ ಸಾವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎರಡೂ ಸತ್ತು ಹೋಗಿವೆ. 18 ವರ್ಷ ಮೇಲ್ಪಟವರಿಗೆ 6.5 ಕೋಟಿ ವ್ಯಾಕ್ಸಿನ್ ಬೇಕು. ಆದರೆ ಸರ್ಕಾರದ ಬಳಿ ಲಸಿಕೆಯೇ ಇಲ್ಲ. ಇಷ್ಟು ನಿಧಾನವಾಗಿ ಲಸಿಕೆ ಹಾಕಿದ್ರೆ ಸಂಪೂರ್ಣ ಲಸಿಕೆ ಹಾಕಿ ಮುಗಿಸಲು 2-3 ವರ್ಷ ಬೇಕು. ಸದ್ಯ ಐಸಿಯು ಬೆಡ್, ಲಸಿಕೆ ಕೊಟ್ಟು ಜನರ ಪ್ರಾಣ ಉಳಿಸಿ ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಏರ್ ಫೋರ್ಸ್ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ
(The government is killing people says former Karnatak CM Siddaramaiah about Covid 19 management)
Published On - 7:23 pm, Wed, 12 May 21