ಸರ್​ಎಂ ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್​ ಮಂಡಳಿ ಆಸ್ತಿಯಂತೆ

ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಭೂಮಿ ವಿವಾದ ತೀವ್ರಗೊಂಡಿದೆ. ಅನೇಕ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ. ಚಿಕ್ಕಬಳ್ಳಾಪುರದ ಸರ್ ಎಂ ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್​ಎಂ ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್​ ಮಂಡಳಿ ಆಸ್ತಿಯಂತೆ
ಸರ್​ಎಂ ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್​ ಮಂಡಳಿ ಆಸ್ತಿಯಂತೆ
Edited By:

Updated on: Nov 07, 2024 | 5:16 PM

ಚಿಕ್ಕಬಳ್ಳಾಪುರ, ನವೆಂಬರ್​ 07: ವಕ್ಫ್ ಬೋರ್ಡ್ ಆಸ್ತಿ ವಿವಾದ ಕರ್ನಾಟಕದಲ್ಲಿ ಧಗಧಗಿಸುತ್ತಿದೆ. ಜಿಲ್ಲೆ ಜಿಲ್ಲೆಯಲ್ಲೂ ಒಂದರ ಮೇಲೊಂದು ನೋಟಿಸ್ ಜಾರಿ ಆಗುತ್ತಿದ್ದರು, ಮಾಲೀಕರಿಗೆ ನಡುಕ ಶುರುವಾಗಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಕೂಡ ನೋಟಿಸ್ ಬಂದಿತ್ತು. ಇದೀಗ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ (sir m visvesvaraya) ಓದಿದ ಶಾಲೆಯನ್ನು ಈಗ ವಕ್ಫ್​​ ಮಂಡಳಿಗೆ ಸೇರಿಸಲಾಗಿದೆ.

ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಓದಿದ ಸರ್ಕಾರಿ ಶಾಲೆ ಇದೆ. ಗ್ರಾಮದ ಸರ್ವೆ ನಂಬರ್​ 1 ರಲ್ಲಿ 19 ಗುಂಟೆ ಜಮೀನು ಇದೆ. ಈ ಜಮೀನಿನಲ್ಲೇ ನೂರಾರು ವರ್ಷಗಳಿಂದ ಶಾಲೆ ಇದೆ. ಆದರೆ 2018ರಿಂದ ಇತ್ತಿಚಿಗೆ ವಕ್ಫ್​ ಆಸ್ತಿ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ: ವಕ್ಫ್​ ವಿವಾದ: ಕರ್ನಾಟಕಕ್ಕೆ ಬಂದ ಜಂಟಿ ಸದನ ಸಮಿತಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​ ನಾಯಕರು

ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್​ ಆಸ್ತಿ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ವಕ್ಫ್​ ಆಸ್ತಿಗೆ ಸಂಬಂಧಪಟ್ಟಿಲ್ಲವಾದರೂ ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಸದ್ಯ ವಕ್ಫ್​ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದಾಖಲೆ ಸರಿಪಡಿಸುವಂತೆ ಒತ್ತಾಯಿಸಲಾಗಿದೆ. ಕಂದಾಯ ಹಾಗೂ ವಕ್ಫ್​ ಅಧಿಕಾರಿಗಳ ವಿರುದ್ಧ ‌ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಹಾಸನದಲ್ಲಿ ಮತ್ತೊಂದು ವಕ್ಫ್ ಆಸ್ತಿ ಅವಾಂತರ ಬೆಳಕಿಗೆ

ಹಾಸನದಲ್ಲಿ ಮತ್ತೊಂದು ವಕ್ಫ್​ ಆಸ್ತಿ ಅವಾಂತರ ಬೆಳಕಿಗೆ ಬಂದಿದೆ. ಚನ್ನರಾಯಪಟ್ಟಣ ತಾಲೂಕಿನ ಗೂರನಹಳ್ಳಿ‌ಯ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಸರ್ವೆ ನಂಬರ್​ 19ರ 1.19 ಎಕರೆ ಸ್ಮಶಾನದ ಮೇಲೆ ವಕ್ಫ್​ ಕಣ್ಣು ಬಿದ್ದಿದೆ.

ಹಿಂದೂ ರುದ್ರಭೂಮಿ ಏಕಾಏಕಿ ವಕ್ಫ್​ ಆಸ್ತಿ ಎಂದು ಬದಲಾಗಿದ್ದು, ಹಿಂದೂಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲೋಪ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು

ಇನ್ನು ಚಾಮರಾಜನಗರದಲ್ಲೂ ವಕ್ಫ್ ಆಸ್ತಿ ಕಿಚ್ಚು ಹೊತ್ತಿಕೊಂಡಿದೆ. ವಿ.ಸಿ.ಹೊಸೂರು ಗ್ರಾಮದ ಶಾಂತಪ್ಪ, ಗಿರಿಮಲ್ಲು, ನಾಗರಾಜು ಎಂಬ ರೈತರು 2 ಎಕರೆ 9 ಗುಂಟೆ ಜಮೀನು ಕಳೆದುಕೊಳ್ಳುವ ಆತಂಕ ಎದುರಾಗಿದೆ. 2022ರಲ್ಲಿ ವಕ್ಫ್ ಸಲಹಾ ಸಮಿತಿ ತಹಶೀಲ್ದಾರ್​ಗೆ ಹರದನಹಳ್ಳಿಯ ಜಾಮಿಯಾ ಮಸೀದಿ ವಕ್ಫ್ ಆಸ್ತಿ ಎಂದು ಖಾತೆ ಬದಲಿಸುವಂತೆ ಪತ್ರ ಬರೆದಿರುವುದು ವೈರಲ್ ಆಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:43 pm, Thu, 7 November 24