ಗಾಯತ್ರಿ ಸೋಲಿಗೆ ಯಾರು ಕಾರಣವೆಂದು ರಾಜ್ಯಕ್ಕೆ ಗೊತ್ತಿದೆ: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಿದ್ದೇಶ್ವರ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2024 | 4:06 PM

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾಡಿದ್ದಾರೆ. ಪತ್ನಿ ಗಾಯತ್ರಿ ಸೋಲಿಗೆ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಗಾಯತ್ರಿ ಸೋಲಿಗೆ ಯಾರು ಕಾರಣವೆಂದು ರಾಜ್ಯಕ್ಕೆ ಗೊತ್ತಿದೆ: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಿದ್ದೇಶ್ವರ ಕಿಡಿ
ಗಾಯತ್ರಿ ಸೋಲಿಗೆ ಯಾರು ಕಾರಣವೆಂದು ರಾಜ್ಯಕ್ಕೆ ಗೊತ್ತಿದೆ: ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಿದ್ದೇಶ್ವರ ಕಿಡಿ
Follow us on

ದಾವಣಗೆರೆ, ಜುಲೈ 27: ಪತ್ನಿ ಗಾಯತ್ರಿ ಸೋಲಿಗೆ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಪರೋಕ್ಷವಾಗಿ ಬಿಎಸ್​ ಯಡಿಯೂರಪ್ಪ (BS Yediyurappa) ಮತ್ತು ವಿಜಯೇಂದ್ರ ವಿರುದ್ಧ ಮಾಜಿ ಸಂಸದ ಜಿಎಂ ಸಿದ್ದೇಶ್ವರ (GM Siddeshwara) ಕಿಡಿ ಕಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿದೆ, ಇದು ಸತ್ಯವಾದ ಮಾತು ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ರಾಜ್ಯ ನಾಯಕರು ಬಂದು ನಾಟಕ ಮಾಡಿ ಹೋದರು. ಎಷ್ಟು ನಾಟಕವಾಡಿದರೂ ಅಂದರೆ ನಮಗೆ ಮಾತನಾಡಲು ಕೂಡ ಬಿಡಲಿಲ್ಲ. ಒಂದು ಕಡೆಯ ಮಾತು ಕೇಳಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಪತ್ನಿ ಮತ ತಾವೇ ಹಾಕಿದ ಸಿದ್ದೇಶ್ವರ್, ಮತ ಹಾಕಲು ಬರಲ್ಲ ಅಂದ್ರೆ ಆಡಳಿತ ಹೇಗೆ ನಡೆಸ್ತಾರೆ ಎಂದ ಜನ

ನನ್ನ ಬರ್ತ್​​ಡೇಗೆ ಬರಲಿಲ್ಲ, ಮತದಾರರಿಗೆ ಕೃತಜ್ಞತಾ ಸಮಾರಂಭಕ್ಕೂ ಬರಲಿಲ್ಲ. ಕೃತಜ್ಞತಾ ಸಮಾರಂಭಕ್ಕೆ ಯಾರು ಬಂದಿಲ್ವೋ ಅವರೇ ಸೋಲಿಗೆ ಕಾರಣ. ಎಲ್ಲಾ ಸಮಾರಂಭಕ್ಕೂ ನಾವು ಅವರನ್ನು ಆಹ್ವಾನ ಮಾಡಿದ್ದರೂ ಬಂದಿಲ್ಲ. ಎಂಪಿಆರ್​ ​ಮತ್ತು​ ಟೀಮ್​ನಿಂದಲೇ ಸೋಲು ಅನುಭವಿಸಿದ್ವಿ ಎಂದು ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.

ಕೇಂದ್ರ ಬಜೆಟ್​ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಳ್ಳೆಯ ಬಜೆಟ್​ ನೀಡಿದ್ದಾರೆ. ಯುವಕ, ಯುವತಿಯರು, ಮಹಿಳೆಯರು, ರೈತರು ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಬಜೆಟ್​ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಯಿ ಮಾಂಸ ಮಾರಾಟ ಆರೋಪ: ಅಬ್ದುಲ್ ರಜಾಕ್​ಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ಶ್ರೀನಿವಾಸ್

ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್​ ಕೂಡ ಲೋಕಾ ಟಿಕೆಟ್​ ಆಕಾಂಕ್ಷಿ ಆಗಿದ್ದರು. ಅವರಿಗೆ ಟಿಕೆಟ್​ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್​ ನಿವಾಸದ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.