ಮ್ಯಾನ್ ಹೋಲ್​ಗೆ ಬಿದ್ದ ವಿದ್ಯಾರ್ಥಿನಿ, ಅದೃಷ್ಟವಶಾತ್ ಅಪಾಯದಿಂದ ಪಾರು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 03, 2022 | 11:29 AM

ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನಲೆ ಮ್ಯಾನ್ ಹೋಲ್ ಓಪನ್ ಕಾಣಸಿಲ್ಲ ವಿದ್ಯಾರ್ಥಿನಿ ಶಾಲೆಗೆ ಬರುವಾಗ ಈ ಘಟನೆ ನಡೆದಿದೆ. ಶಾಲೆ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮವಾಗಿ, ವಿದ್ಯಾರ್ಥಿನಿ ದಿಪೀಕಾ ರಸ್ತೆಯ ಮದ್ಯಭಾಗಕ್ಕೆ ಬಂದಿದ್ದಾಳೆ.

ಮ್ಯಾನ್ ಹೋಲ್​ಗೆ ಬಿದ್ದ ವಿದ್ಯಾರ್ಥಿನಿ, ಅದೃಷ್ಟವಶಾತ್ ಅಪಾಯದಿಂದ ಪಾರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಪ್ಪಿದ ಭಾರಿ ಅನಾಹುತ, ಸ್ಥಳೀಯರ ಸಮಯಪ್ರಜ್ಞೆ ಯಿಂದ ದೊಡ್ಡ ಅನಾಹುತ ತಪ್ಪಿದೆ. ನಾರಾಯಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ಮ್ಯಾನ್ ಹೋಲ್ ನಲ್ಲಿ ಬೀದಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದಿಪೀಕಾ ಎಂದು ಗುರುತಿಸಲಾಗಿದೆ.  ನಿನ್ನೆ ತಡರಾತ್ರಿ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಳೆಯ ಎಫೆಕ್ಟ್​ನಿಂದ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿತ್ತು ಶಾಲೆಯ ಮುಂದೆ ಮ್ಯಾನ್ ಹೋಲ್ ಓಪನ್ ಆಗಿದ್ದು ಕಾಣಿಸಿಲ್ಲ.

ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನಲೆ ಮ್ಯಾನ್ ಹೋಲ್ ಓಪನ್ ಕಾಣಸಿಲ್ಲ ವಿದ್ಯಾರ್ಥಿನಿ ಶಾಲೆಗೆ ಬರುವಾಗ ಈ ಘಟನೆ ನಡೆದಿದೆ. ಶಾಲೆ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮವಾಗಿ, ವಿದ್ಯಾರ್ಥಿನಿ ದಿಪೀಕಾ ರಸ್ತೆಯ ಮದ್ಯಭಾಗಕ್ಕೆ ಬಂದಿದ್ದಾಳೆ. ರಸ್ತೆಯ ಮದ್ಯ ಭಾಗದಲ್ಲಿ ಮ್ಯಾನ್ ಹೋಲ್ ಓಪನ್ ಕಾಣಿಸದೆ ಮ್ಯಾನ್ ಹೋಲ್​ಗೆ ಜಾರಿ ಬಿದ್ದಿದ್ದಾಳೆ.

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಮಗು ಬಿದ್ದು ಚೀರುತ್ತಿದ್ದಂತೆ ಸ್ಥಳೀಯರು ಮಗುವನ್ನ ಮೇಲಕ್ಕೆತ್ತಿದ್ದಾರೆ ಸ್ಥಳೀಯರ ಮಗುವಿಗೆ ಯಾವುದೇ ಅಪಾಯವಾಗಿಲ್ಲ, ಬಟ್ಟೆ ಕೊಳಚೆಯಾದ ಕಾರಣ ಪೋಷಕರು ಬಾಲಾಕಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆಯ ಬಳಿಕ ಎಚ್ಚೆತ್ತ BWSSB ಸ್ಥಳಕ್ಕೆ ಆಗಮಿಸಿದ BWSSB ಜೆಟಿಂಗ್ ಮಷಿನ್ ವೆಹಿಕಲ್, ಮ್ಯಾನ್ ಹೋಲ್ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ. ಓಪನ್ ಆಗಿರುವ ಮ್ಯಾನ್ ಹೋಲ್ BWSSB ಮುಚ್ಚಿ ಸರಿ ಪಡಿಸುತ್ತಿದ್ದಾರೆ.