ದಾವಣಗೆರೆ: ಖಾಲಿ ಸೈಟ್ ಜಾಗದಲ್ಲಿ ಒಟ್ಟುಗೂಡಿದ್ದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಎಸ್.ಎಸ್ ಆಸ್ಪತ್ರೆಯ ವಿನಾಯಕ ರೈಸ್ ಮಿಲ್ ಪಕ್ಕದಲ್ಲಿ ನಡೆದಿದೆ.
ಶಶಿ ಸೋಪ್ ಫ್ಯಾಕ್ಟರಿಗೆ ಸೇರಿದ ಖಾಲಿ ಸೈಟ್ ನಲ್ಲಿ ಸುತ್ತಮುತ್ತಲಿನ ಜನರು ತ್ಯಾಜ್ಯವನ್ನು ಪ್ರತಿನಿತ್ಯ ಬಿಸಾಡುತ್ತಿದ್ದರು. ಕಸದ ರಾಶಿ ನೋಡಿದ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರಿದ ತ್ಯಾಜ್ಯದಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಹೊಗೆ ಮುತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ಆರಿಸಿದ್ದಾರೆ.
ಪ್ರಕರಣ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಗುಡಿಸಲಿಗೆ ಬೆಂಕಿ: ಅಗ್ನಿ ಅವಘಡದಲ್ಲಿ ಸೂರು ಕಳೆದುಕೊಂಡ ವೃದ್ಧೆ ಬೀದಿಪಾಲು..