UK, ಜರ್ಮನಿಯಲ್ಲಿ ಲಾಕ್‌ಡೌನ್ ಮಾಡಿದ್ದಾರೆ.. ಹಾಗಂತ ಅವರು ಯಾರಿಗೂ ಬುದ್ಧಿ ಇಲ್ವಾ? -ಸುಧಾಕರ್ ಪ್ರಶ್ನೆ
ನಾವು ಅವಿವೇಕತನದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಯುಕೆ, ಜರ್ಮನಿಯಲ್ಲಿ ಲಾಕ್‌ಡೌನ್ ಮಾಡಿದ್ದಾರೆ. ಹಾಗಂತ ಅವಱರಿಗೂ ಬುದ್ಧಿ ಇಲ್ವಾ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿ ನಾವು ಅವಿವೇಕತನದಿಂದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಕರ್ಫ್ಯೂ ವಾಪಸ್ ಪಡೆದ ವಿಚಾರಕ್ಕೆ ಮಾಧ್ಯಮಗಳು ಏನ್ ಹೇಳ್ತಾ ಇದ್ದಾವೆ ಅಂತಾ ನಾನು ರಾತ್ರಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾವು ಅವಿವೇಕತನದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಯುಕೆ, ಜರ್ಮನಿಯಲ್ಲಿ ಲಾಕ್‌ಡೌನ್ ಮಾಡಿದ್ದಾರೆ. ಹಾಗಂತ ಅವಱರಿಗೂ ಬುದ್ಧಿ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಎಲ್ಲವೂ ಯೋಚನೆ ಮಾಡಿ ನಿರ್ಧಾರ ಮಾಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಅನುಭವ ಇರುವ ಜೊತೆಗೆ ನಾವು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ರಾಜಕೀಯ ತೀರ್ಮಾನ ತೆಗೆದುಕೊಂಡಿಲ್ಲ. ದಸರಾ, ದೀಪಾವಳಿ ಸರಳವಾಗಿ ಆಚರಣೆ ಮಾಡಿದ್ದೀವಿ. ಆದ್ರೆ ಹೊಸವರ್ಷ ಆಚರಣೆ ಬಹಳ ಮುಖ್ಯ ಎನ್ನುತ್ತಿದ್ದಾರೆ. ಯುವಕರು ಹೊಸವರ್ಷ ಆಚರಣೆ ಮಾಡುತ್ತಾರೆ. ಮೋಜು ಮಸ್ತಿ ಮಾಡಬೇಕೆಂದು ವಿಪಕ್ಷದವರು ಹೇಳ್ತಾರೆ. ಮುಂದೆ ಏನಾದ್ರೂ ಹೆಚ್ಚುಕಡಿಮೆಯಾದ್ರೆ ವಿಪಕ್ಷದವರೇ ಹೊಣೆಗಾರರು ಎಂದ ಸಚಿವ ಸುಧಾಕರ್ ಹೇಳಿದ್ರು.
ಕನಕಪುರದ ಬಂಡೆ ವಾಗ್ದಾಳಿಗೆ ಸುಧಾಕರ್ ತಿರುಗೇಟು ಕೊವಿಡ್ನಲ್ಲಿ ಸರ್ಕಾರ ಲೂಟಿ ಮಾಡಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ. ಲೂಟಿ ಮಾಡೋರ ಕಾಲೇಜ್ಗೆ ಡಿ.ಕೆ.ಶಿವಕುಮಾರೇ ಪ್ರಿನ್ಸಿಪಲ್, ಓನರ್. ಸಂಸದ ಡಿ.ಕೆ.ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ.
ಬೇಲ್ ಮೇಲೆ ಹೊರಬಂದವರ ಸರ್ಟಿಫಿಕೇಟ್ ಬೇಕು. ಮೋಜು ಮಸ್ತಿ ಭ್ರಷ್ಟಾಚಾರ ಎಲ್ಲವನ್ನೂ ಹೊತ್ತುಕೊಂಡು. ಯಾರು ಬೇಲ್ ಮೇಲೆ ಹೊರಗಡೆ ಬಂದಿದ್ದಾರೆಂದು ಗೊತ್ತು. ಇಡೀ ದೇಶ, ರಾಜ್ಯದಲ್ಲಿರುವ ಎಲ್ಲ ಜನರಿಗೂ ಗೊತ್ತಿದೆ ಎಂದು ಕೆ.ಸುಧಾಕರ್ ಹೇಳಿಕೆ ವಾಗ್ದಾಳಿ ನಡೆಸಿದ್ದಾರೆ.
‘BSY ಯಾಕೆ ಇಷ್ಟು ವೀಕ್ ಆಗಿದ್ದಾರೆಂದು ಚಿಂತೆ.. ಅವನೊಬ್ಬ ಹೇಳಿದ ಅಂತಾ ನೈಟ್ ಕರ್ಫ್ಯೂಗೆ ಸಹಿ ಹಾಕಿದ್ರು’
Published On - 12:48 pm, Fri, 25 December 20