ಮನೆಯಲ್ಲಿ ಜಿಂಕೆ ಮಾಂಸ ಇದೆ ಎಂದು ಪರಿಶೀಲನೆಗೆ ಬಂದ ಅಧಿಕಾರಿಗಳನ್ನು ಕೂಡಿಹಾಕಿದ ಗ್ರಾಮಸ್ಥರು
ಮನೆಯಲ್ಲಿ ಜಿಂಕೆ ಮಾಂಸ ಇರುವ ಬಗ್ಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಲು ಹೋದ ಅಧಿಕಾರಿಗಳನ್ನೇ ಗ್ರಾಮಸ್ಥರು ಕೂಡಿಹಾಕಿದ್ದಾರೆ. ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಾರವಾರ: ಮನೆಯಲ್ಲಿ ಜಿಂಕೆ ಮಾಂಸ ಇರುವ ಬಗ್ಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಲು ಹೋದ ಅಧಿಕಾರಿಗಳನ್ನೇ ಗ್ರಾಮಸ್ಥರು ಕೂಡಿಹಾಕಿದ್ದಾರೆ. ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯೊಂದರಲ್ಲಿ ಜಿಂಕೆ ಮಾಂಸ ಇರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಅಧಿಕಾರಿಗಳನ್ನು 2 ಗಂಟೆಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದು, ನಮ್ಮ ಗ್ರಾಮದ ಮರ್ಯಾದೆ ತೆಗೆಯುತ್ತಿದ್ದೀರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಂಕೆ ಮಾಂಸ ಮನೆಯಲ್ಲಿದೆ ಎಂಬ ಮಾಹಿತಿ ಮೇರೆಗೆ ಪರಶುರಾಮ ಎನ್ನುವವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ ಪತ್ತೆಯಾಗಲಿಲ್ಲ.ಇದರಿಂದ ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಸುಳ್ಳು ಮಾಹಿತಿಯಿಂದ ದಾಳಿ ಮಾಡಿದ್ದಿರಿ, ಊರಲ್ಲಿ ನಮ್ಮ ಮಾನ ಮರ್ಯಾದೆ ಹಾಳು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ದೂರ ಕೊಟ್ಟವರ ಹೆಸರು ಅಥವಾ ಮೊಬೈಲ್ ನಂಬರ್ ಕೊಡುವಂತೆ ಒತ್ತಾಯಿಸಿದ್ದಾರೆ. ನಂತರ ಗ್ರಾ.ಪಂ ಸದಸ್ಯ ಪರಶುರಾಮ ಕಬ್ಬೇರ ಎಂಬುವವರ ಮನೆಯಲ್ಲಿ ಬಂಧಿಸಲಿಡಲಾಗಿತ್ತು. ದಾಳಿ ನೇತೃತ್ವದ ವಹಿಸಿದ್ದ ಆರ್.ಎಪ್.ಓ ಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗಳ ಮನೆಯಲ್ಲಿ ಕೂಡಿಹಾಕಲಾಗಿತ್ತು.ನಂತರ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಅಧಿಕಾರಿಗಳು ಗ್ರಾಮದಿಂದ ಹೊರಬಂದಿದ್ದಾರೆ.
ಗದಗದಲ್ಲಿ ಪತ್ನಿ ಮೇಲೆ ಹಲ್ಲೆ ಪ್ರಕರಣ: ಗದಗದಲ್ಲಿ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ಪ್ರಕರಣ, ಲವ್ ಜಿಹಾದ್ಗೆ ಉತ್ತಮ ಉದಾಹರಣೆ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. 19 ವರ್ಷದ ಅಪೂರ್ವ ಎಂಬ ಹೆಣ್ಣು ಮಗಳನ್ನು ಮತಾಂತರ ಮಾಡಿದ್ದಾರೆ. ಮದುವೆಯಾಗಿದ್ರು, ಈಕೆಯನ್ನ ಪ್ರೀತಿಸಿ ಬ್ಲ್ಯಾಕ್ ಮೇಲ್ ಮಾಡ್ತಿದ್ದ. ಇದೀಗ 23 ಬಾರಿ ಇರಿದು ಹಲ್ಲೆ ಮಾಡಿದ್ದಾನೆ. ಆರೋಪಿ ಇಜಾಜ್ ಶಿರೂರ ಮೇಲೆ ಕಠಿಣ ಕ್ರಮ ಆಗಬೇಕು. ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬಿಳೋ ಮುಂಚೆ ಅರ್ಪೂವ ಘಟನೆ ನೆನಪಿಸಿಕೊಳ್ಳಬೇಕು. ಆರೋಪಿಯನ್ನ ಒಂದು ದಿನದಲ್ಲಿ ಬಂಧಿಸಿದ್ದಾರೆ. ಆದ್ರೆ ಡಮ್ಮಿ ಕೇಸ್ ಎಂದು ಕೈ ಬಿಡಬಾರದು ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಈ ವೇಳೆ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಅಪೂರ್ವಳ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಸಂಸದೆ ಸುಮಲತಾ ದೂರಿಗೆ ಪ್ರತಿದೂರು ನೀಡಿದ ಜೆಡಿಎಸ್ ಕಾರ್ಯಕರ್ತ ಮಹೇಶ್ ನಾಯಕ್: ಮಂಡ್ಯ ಸಂಸದೆ ಹಾಗೂ ಕೆಆರ್.ನಗರ ಶಾಸಕರ ಬೆಂಬಲಿಗರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಶ್ ದೂರಿಗೆ ಜೆಡಿಎಸ್ ಕಾರ್ಯಕರ್ತರು ಪ್ರತಿದೂರು ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತ ಮಹೇಶ್ ನಾಯಕ್‌ರಿಂದ ಪ್ರತಿದೂರು ದಾಖಲಾಗಿದೆ. ಕಾಂಗ್ರೆಸ್ ಮುಖಂಡ ರವಿಶಂಕರ್, ಕೆ.ಆರ್.ನಗರ ಕುರುಬ ಸಂಘದ ಅಧ್ಯಕ್ಷ ಜೆ.ಶಿವಣ್ಣ ಸುಮಲತಾ ಕಾರು ಚಾಲಕ ಸೇರಿದಂತೆ ಆರು ಮಂದಿ ವಿರುದ್ದ ಕೊಲೆ ಯತ್ನ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಹಿಂದೆ ಕೆ.ಆರ್.ನಗರದ ಮುಂಜನಹಳ್ಳಿಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಯತ್ನ ಮಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರ ವಿರುದ್ದ ಸಂಸದೆ ಸುಮಲತಾ ದೂರು ನೀಡಿದ್ದರು. ಇದೀಗ ಸಾಲಿಗ್ರಾಮ ಠಾಣೆಯಲ್ಲಿ ದೂರು, ಪ್ರತಿದೂರು ಎರಡೂ ದಾಖಲಾಗಿದೆ.
ಇದನ್ನೂ ಓದಿ:
ಕೊಳೆತ ಟೊಮೆಟೊ ವಿಚಾರಕ್ಕೆ ಮಹಿಳೆಯ ಕೊಲೆ; ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ
Published On - 1:10 pm, Sat, 12 March 22