ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಆನೆಗಳಿಗೆ ದಂತಗಳೇ ಇರುವುದಿಲ್ಲ……!

ಸಾಮಾನ್ಯವಾಗಿ ಆನೆಗಳಲ್ಲಿ ಗಂಡಾನೆ ಗುಂಪಿನಲ್ಲಿ ಇರುವುದಿಲ್ಲ. ಗಂಡಾನೆಗಳು ಮಾತ್ರ ಗುಂಪಿನಿಂದ ಬೇರೆಯಾಗಿ ದೂರ ಸಂಚಾರ ಮಾಡುತ್ತವೆ. ಆನೆಗಳು ತನ್ನ ಪೌಷ್ಟಿಕತೆ ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಈ ರೀತಿ ಸಂಚಾರ ಮಾಡುತ್ತವೆ. ಕರ್ನಾಟಕದಲ್ಲಿರುವ ಆನೆಗಳು ಬೆಂಗಾಲ್​ನಲ್ಲಿರುವ ಆನೆಗಳ ಜೊತೆ ಸೇರಿ ಮರಿ ಮಾಡುವ ಉದಾಹರಣೆಗಳಿವೆ. ಇದರಿಂದ ಆನೆಗಳು ಎಷ್ಟು ದೂರ ಸಂಚಾರ ಮಾಡುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆ.

ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಆನೆಗಳಿಗೆ ದಂತಗಳೇ ಇರುವುದಿಲ್ಲ......!
ದಂತಗಳಿಲ್ಲದ ಆನೆಗಳು
Follow us
preethi shettigar
| Updated By: ರಾಜೇಶ್ ದುಗ್ಗುಮನೆ

Updated on: Dec 25, 2020 | 7:20 PM

ಮೈಸೂರು: ಆನೆಗಳಿಗೆ ತಮ್ಮದೇ ಆದ ಇತಿಹಾಸವಿದೆ. ಆದರೆ ಆನೆಗಳ ಜೀವ ಮನುಷ್ಯನ ಮೋಹಗಳಿಂದ ಬಲಿಯಾಗುತ್ತಿರುವುದು ಮಾತ್ರ ವಿಪರ್ಯಾಸ. ಆನೆಗಳನ್ನ ಅದರ ದಂತದಿಂದಲೇ ವಿಶೇಷವಾಗಿ ಗುರುತು ಮಾಡುತ್ತೇವೆ. ಆದರೆ ನಮ್ಮ ಮುಂದಿನ ಪೀಳಿಗೆಗೆ ಆನೆಗಳಿಗೆ ದಂತಗಳಿತ್ತು ಎಂದು ಚಿತ್ರಗಳಲ್ಲಷ್ಟೇ ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆತಂಕವನ್ನು ವನ್ಯ ಜೀವಿ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದಂತವಿಲ್ಲದ ಆನೆಗಳ ಗುಂಪು ಕಸದ ರಾಶಿಯಲ್ಲಿ ನಿಂತು ತನ್ನ ಆಹಾರವನ್ನ ಹುಡುಕಾಟ ನಡೆಸುತ್ತಿರುವ ಪೋಟೊಗಳು ಹರಿದಾಡುತ್ತಿದ್ದು, ಈ ಆನೆಗಳ ಪೋಟೊಗಳು ಭಾರತದಲ್ಲ ಎಂಬುದು ಸಮಾಧಾನದದ ವಿಚಾರ. ಇಂತಹ ಪರಿಸ್ಥಿತಿ ಭಾರತದಲ್ಲೂ ನಿರ್ಮಾಣವಾಗುವ ಕಾಲ ದೂರ ಇಲ್ಲ ಎನ್ನುವುದು ಅಷ್ಟೇ ಕಹಿ ಸತ್ಯ. ಎಕೆಂದರೆ ಮನುಷ್ಯ ತನ್ನ ವ್ಯಾಮೋಹಕ್ಕೆ ಕಾಡನ್ನೇ ನಾಶ ಮಾಡುತ್ತಿರುವುದು ದೈತ್ಯ ಆನೆಗಳನ್ನ ಬೇಟೆಯಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೆ ಇದೆ. ಅದರಲ್ಲು ದಂತಕ್ಕಾಗಿ ಹಿಂದೆ ರಾಜ ಮಹಾರಾಜರು, ಇತ್ತೀಚೆಗೆ ಹಣದ ಆಸೆಗಾಗಿ ಬೇಟೆಗಾರರು ಸೇರಿದಂತೆ ಹಲವರು ಆನೆಗಳನ್ನ ಕೊಂದಿದ್ದಾರೆ. ಇದರ ಪರಿಣಾಮವೇ ಆನೆಗಳಿಗೆ ದಂತವೆ ಇಲ್ಲದಂತಾಗುವ ಆತಂಕಕ್ಕೆ ಕಾರಣವಾಗಿದೆ.

ಶ್ರೀಲಂಕಾದ ಆನೆಗಳಿಗೆ ದಂತವಿಲ್ಲ! ಭಾರತದಲ್ಲಿರುವ ಏಷ್ಯಾಟಿಕ್ ಆನೆಗಳಿರಬಹುದು, ಆಫ್ರೀಕಾ ದೇಶದಲ್ಲಿರುವ ಆಫ್ರಿಕನ್ ಆನೆಗಳಿಗೆ ದಂತ ಇರುವುದನ್ನು ನೋಡಿದ್ದೇವೆ. ಭಾರತದಲ್ಲಿರುವ ಏಷ್ಯಾಟಿಕ್ ಆನೆಗಳಲ್ಲಿ ಅದರಲ್ಲೂ ಗಂಡು ಆನೆಗಳಲ್ಲಿ ದಂತಗಳು ಕಾಣಸಿಗುತ್ತದೆ. ಆಫ್ರಿಕನ್ ಆನೆಗಳ ವಿಶೇಷತೆ ಎಂದರೆ ಅಲ್ಲಿ ಗಂಡು ಮತ್ತು ಹೆಣ್ಣು ಎರಡು ಆನೆಗಳಿಗೆ ದಂತಗಳಿದೆ. ಆದರೆ ಶ್ರೀಲಂಕಾದ ಆನೆಗಳಿಗೆಕೆ ದಂತಗಳು ಇರುವುದಿಲ್ಲ ಎಂಬುದು ಎಲ್ಲರ ಪ್ರಶ್ನೆ. ಆದರೆ ಈ ಆನೆಗಳಿಗೆ ದಂತಗಳು ಇಲ್ಲದಿರುವುದಕ್ಕೆ ಕಾಡಿನ ಮೇಲೆ ಮಾನವನ ಹಸ್ತಕ್ಷೇಪವೆ ಕಾರಣ.

ಆನೆಗಳ ಬೇಟೆ

ಈ ಹಿಂದೆ ಶ್ರೀಲಂಕಾದ ಆನೆಗಳಲ್ಲು ದಂತಗಳಿದ್ದವು. ಆದರೆ ಕಾಲ ಕ್ರಮೇಣ ಕಾಡಿನ ವಿಸ್ತರಣೆ ಕಡಿಮೆಯಾಗಿದ್ದು. ದೊಡ್ಡದಾದ ದಂತ ಇರುವ ಆನೆಗಳ ಮಾರಣ ಹೋಮಗಳು ನಡೆದಿದ್ದ ಕಾರಣಕ್ಕೆ ಅಲ್ಲಿನ ಆನೆಗಳಿಗೆ ಕ್ರಮೇಣವಾಗಿ ದಂತಗಳು ಇಲ್ಲದಂತಾಗಿದೆ. ಶ್ರೀಲಂಕಾದ ಕಾಡಿನ ವಿಸ್ತರಣೆಯು ಕಡಿಮೆ ಇರುವುದು ಬ್ರೀಡಿಂಗ್ ಒಂದೆ ಸ್ಥಳದಲ್ಲೇ ಮಾಡುತ್ತಿರುವುದು ಜೆನೆಟಿಕಲಿ ವೀಕ್ ಆಗುತ್ತಿವೆ. ಇದರಿಂದ ಇನ್ ಬ್ರೀಡ್ ಕಾರಣದಿಂದ ಅಲ್ಲಿಯ ಆನೆಗಳ ದಂತಗಳು ಕ್ರಮೇಣ ಕಡಿಮೆಯಾಗಿದೆ.

ಆನೆ ಒಡಾಟದಲ್ಲಿರುವ ದೃಶ್ಯ

ಭಾರತದಲ್ಲು ಇನ್ ಬ್ರೀಡ್ ಮಾಡುತ್ತಿರುವ ಆನೆಗಳು: ಸಾಮಾನ್ಯವಾಗಿ ಆನೆಗಳಲ್ಲಿ ಗಂಡಾನೆ ಗುಂಪಿನಲ್ಲಿ ಇರುವುದಿಲ್ಲ. ಗಂಡಾನೆಗಳು ಮಾತ್ರ ಗುಂಪಿನಿಂದ ಬೇರೆಯಾಗಿ ದೂರ ಸಂಚಾರ ಮಾಡುತ್ತವೆ. ಆನೆಗಳು ತನ್ನ ಪೌಷ್ಟಿಕತೆ ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಈ ರೀತಿ ಸಂಚಾರ ಮಾಡುತ್ತವೆ. ಕರ್ನಾಟಕದಲ್ಲಿರುವ ಆನೆಗಳು ಬೆಂಗಾಲ್​ನಲ್ಲಿರುವ ಆನೆಗಳ ಜೊತೆ ಸೇರಿ ಮರಿ ಮಾಡುವ ಉದಾಹರಣೆಗಳಿವೆ. ಇದರಿಂದ ಆನೆಗಳು ಎಷ್ಟು ದೂರ ಸಂಚಾರ ಮಾಡುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆ.

ಅದರಲ್ಲು ಹೆಣ್ಣಾನೆಗಳು ಬಲಿಷ್ಠವಾದ ಗಂಡಾನೆ ಜೊತೆಯೆ ಸಂತಾಭಿವೃದ್ಧಿ ಮಾಡಲು ಮುಂದಾಗುತ್ತವೆ. ಬಲಿಷ್ಠವಾದ ಆನೆಗಳ ಜೊತೆ ಸಂತಾಭಿವೃದ್ಧಿ ಮಾಡಿದರೆ ಅವುಗಳ ಮರಿಗಳು ಸಹ ಆರೋಗ್ಯವಾಗಿರುತ್ತವೆ ಎಂಬುದು ಇದಕ್ಕೆ ಕಾರಣವಾಗಿದೆ. ಇದರಿಂದ ಆನೆಗಳ ಸಂತಾಭಿವೃದ್ಧಿ ಸಂದರ್ಭದಲ್ಲಿ ಬಲಿಷ್ಠವಾದ ಆನೆಗಳನ್ನೇ ಹುಡುಕಾಟ ನಡೆಸುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಆನೆ ಕಾರಿಡಾರ್​ಗಳು ನಾಶವಾಗುತ್ತಿರುವ ಕಾರಣ ಆನೆಗಳು ದೂರ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವುಗಳ ಆಹಾರದ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಒಂದೆ ಗುಂಪಿನಲ್ಲಿ ಅಥವಾ ಆಯಾ ವ್ಯಾಪ್ತಿಯಲ್ಲೇ ಇದ್ದು ಸಂತಾಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಕಾರಣ ಅವುಗಳ ಬಲಿಷ್ಠತೆಯಲ್ಲಿ ಕುಂಠಿತವಾಗುತ್ತಿದೆ.ಈ ರೀತಿ ಇನ್ ಬ್ರೀಡ್ ಕಾರಣದಿಂದಲ್ಲೇ ದಂತಗಳು ಇಲ್ಲದೆ ಇರುವ ಆನೆಗಳ ಮುಂದೆ ಹುಟ್ಟುವ ಆತಂಕ ಇದೆ.

ಆನೆಗಳ ಗುಂಪು

ಆನೆ ಕಾರಿಡಾರ್ ನಾಶದಿಂದ ಜೀವನ ಶೈಲಿ ಬದಲು: ಆನೆಗಳು ಸಂಚಾರ ಮಾಡುವ ಮಾರ್ಗಗಳನ್ನ ಆನೆ ಕಾರಿಡಾರ್(ಆನೆ ಪಥ) ಎಂದು ಕರೆಯುತ್ತೇವೆ. ಆನೆಗಳು ಆಹಾರವನ್ನು ಹುಡುಕಿಕೊಂಡು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಸಂಚಾರ ಮಾಡುತ್ತವೆ. ಈ ರೀತಿ ಸಂಚಾರ ಮಾಡುವುದರಿಂದ ಅವುಗಳ ತಳಿ ಉಳಿಯಲು ಸಾಧ್ಯ. ಆದರೆ ಇತ್ತೀಚಿಗೆ ಪ್ರಕೃತಿಯ ಮೇಲೆ ಮಾನವ ಹಸ್ತಕ್ಷೇಪದಿಂದ ಆನೆಗಳು ಸಂಚಾರ ಮಾಡುವ ದಾರಿಗಳು ಬಂದ್ ಆಗುತ್ತಿವೆ.‌ ಈ‌ ಕಾರಣದಿಂದಲೇ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಬೇರೆ ಆನೆಗಳ ಸಂಪರ್ಕ ಇರುವುದಿಲ್ಲ. ಈ ಕಾರಣದಿಂದ ಇನ್ ಬ್ರೀಡ್​ಗೆ ಕಾರಣವಾಗುತ್ತಿದ್ದು, ಅದೇ ಗುಂಪಿನಲ್ಲಿ ಸಣ್ಣ ಆನೆಗಳ ಜೊತೆ ಸಂತಾಭಿವೃದ್ಧಿ ಮಾಡುವ ಕಾರಣ ಅವುಗಳ ತಳಿಯಲ್ಲಿ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ.

ದಂತವಿರುವ ಆನೆ

ಬೇಟೆ ಪ್ರಕರಣಗಳು ಹೆಚ್ಚಾಗುತ್ತಿವೆ: ಹಿಂದೆ ರಾಜ ಮಹಾರಾಜರು ಕಾಡಿನಲ್ಲಿರುವ ಬಲಿಷ್ಠ ಆನೆಗಳನ್ನ ಗುರುತು ಮಾಡಿ ಅವುಗಳನ್ನ ಕೆಡ್ಡಕ್ಕೆ ಕೆಡವುತ್ತಿದ್ದರು. ಈ ಆನೆಗಳನ್ನ ಪಳಗಿಸಿ ಅದರಿಂದ ಅವರುಗಳು ಕೆಲಸ ಮಾಡಿಸುತ್ತಿದ್ದರು. ಹೀಗೆ ಸಾವಿರಾರು ಬಲಿಷ್ಠ ಆನೆಗಳು ಕೆಡ್ಡಕ್ಕೆ ಬಿದ್ದು ಕಾಡಿನಿಂದ ದೂರವಾಗಿವೆ. ಇದರ ಜೊತೆಗೆ ಆನೆಗಳ ದಂತಗಳನ್ನು ಅಲಂಕಾರ ವಸ್ತುಗಳಿಗೆ ಬಳಸುತ್ತಿದ್ದರಿಂದ ದೊಡ್ಡ ದಂತದ ಆನೆಗಳನ್ನು ಕೊಲ್ಲುತ್ತಿದ್ದರು. ಇದರಿಂದ ಕಾಡಿನಲ್ಲು ಬಲಿಷ್ಠ ಆನೆಗಳು ಅಥವಾ ಆರೋಗ್ಯಯುತ ಆನೆಗಳ ಸಂಖ್ಯೆ ಕಡಿಮೆಯಾಗಿವೆ.‌ಈ ರೀತಿ ಕಾಡಿನಲ್ಲಿ ಗಂಡಾನೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಕಾರಣದಿಂದಲೇ ಇತ್ತೀಚಿನ ದಿನಗಳಲ್ಲಿ ದೊಡ್ಡ ಗಾತ್ರದ ದಂತಗಳಿರುವ ಆನೆಗಳ ನೋಡಲು ಸಿಗುತ್ತಿಲ್ಲ.

ಮಾನವನ ಆಸೆಗೆ ಕಾಡು ಹಾಗೂ ಕಾಡು ಪ್ರಾಣಿಗಳು ನಾಶವಾಗುತ್ತಿದೆ. ಈ ಕಾರಣದಿಂದಲ್ಲೇ ನಮ್ಮ ಭಾರತದ ಆನೆಗಳು ಕೂಡ ಶ್ರೀಲಂಕಾದ ಆನೆಗಳ ರೀತಿ ದಂತಗಳು ಇಲ್ಲದಂತಾಗುತ್ತದೆ ಎಂಬ ಆತಂಕ ಇದೆ. ಕಾಡು ನಾಶವಾಗುತ್ತಿರುವುದರಿಂದ ಪರಿಸರ ಅಸಮತೋಲನ, ಪ್ರಕೃತಿ ವಿಕೋಪಗಳಿಗೂ ಕಾರಣವಾಗಿದೆ ಎಂದು ವನ್ಯಜೀವಿ ತಜ್ಞ ರಾಜ್ ಕುಮಾರ್ ಹೇಳಿದ್ದಾರೆ.

ಹುಲಿಯನ್ನು ಅಟ್ಟಾಡಿಸಿಕೊಂಡು ಓಡಿಸಿದ ಆನೆ: ಪ್ರವಾಸಿಗರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ