ರಾಜ್ಯದಲ್ಲಿ ಇನ್ನು ಮುಂದೆ No Lockdown -CM BSY ಖಡಕ್ ನಿರ್ಧಾರ
ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇರೋದಿಲ್ಲ. ಈ ಬಗ್ಗೆ ಯೋಚಿಸೋದು ಬಿಟ್ಟು ಕೊರೊನಾ ವಿರುದ್ಧ ಹೋರಾಡಲು ರಚನಾತ್ಮಕವಾಗಿ ಕೆಲಸ ಮಾಡಿ ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಹಾಗೇನೇ ಅಧಿಕಾರಿಗಳಿಗೆ ಲಾಕ್ ಡೌನ್ ಯೋಚನೆ ಬಿಟ್ಟು, ಸಮರ್ಥವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ. ಫೇಸ್‌ಬುಕ್ ಮತ್ತು ಯುಟ್ಯೂಬ್ ಲೈವ್‌ನಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಟೀಕೆ ಮಾಡುವುದನ್ನು ಬಿಟ್ಟು ರಚನಾತ್ಮಕ ಸಲಹೆ ನೀಡಿ ಎಂದು ಇಂದು […]

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇರೋದಿಲ್ಲ. ಈ ಬಗ್ಗೆ ಯೋಚಿಸೋದು ಬಿಟ್ಟು ಕೊರೊನಾ ವಿರುದ್ಧ ಹೋರಾಡಲು ರಚನಾತ್ಮಕವಾಗಿ ಕೆಲಸ ಮಾಡಿ ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಹಾಗೇನೇ ಅಧಿಕಾರಿಗಳಿಗೆ ಲಾಕ್ ಡೌನ್ ಯೋಚನೆ ಬಿಟ್ಟು, ಸಮರ್ಥವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.
ಫೇಸ್‌ಬುಕ್ ಮತ್ತು ಯುಟ್ಯೂಬ್ ಲೈವ್‌ನಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಟೀಕೆ ಮಾಡುವುದನ್ನು ಬಿಟ್ಟು ರಚನಾತ್ಮಕ ಸಲಹೆ ನೀಡಿ ಎಂದು ಇಂದು ಬಿಐಇಸಿ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸೇರಿದಂತೆ ಎಲ್ಲ ವಿಪಕ್ಷನಾಯಕರಿಗೆ ಮನವಿ ಮಾಡಿದರು.
ಲಾಕ್‌ಡೌನ್ ಪರಿಹಾರವಲ್ಲ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಆರಂಭದಲ್ಲಿ ಯಶಸ್ಸು ಸಿಕ್ಕಿತ್ತು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಳವಾಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವಲ್ಲ. ಬದಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಎಂದು ತಿಳಿಸಿದರು. 5 T ಸೂತ್ರ ಪಾಲನೆ ಕೊವಿಡ ತಡೆಗೆ ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ ಸೇರಿದಂತೆ ಹಲವರು ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ತಜ್ಞರ ಸಲಹೆಯಂತೆ ಕೊರೊನಾ ತಡೆಗೆ 5 ‘T’ ಸೂತ್ರ ಅಂದರೆ ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್, ಟೆಕ್ನಾಲಜಿ ಪಾಲಿಸುತ್ತಿದ್ದೇವೆ. ಕೊವಿಡ್ ಇರುವ ವ್ಯಕ್ತಿಯ 42 ಸಂಪರ್ಕಿತರಿಗೆ ಟೆಸ್ಟ್ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಬೆಡ್ ಮಾಹಿತಿಗೆ ಡ್ಯಾಶ್ ಬೇರ್ಡ್ ಬೆಂಗಳೂರಿನಲ್ಲಿ ಕೊವಿಡ್ ಚಿಕಿತ್ಸೆಗೆ ಬೆಡ್ ಮೀಸಲಿಡಲಾಗಿದೆ. ಬೆಡ್ ಹಂಚಿಕೆಗೆ ಅನುಕೂಲವಾಗಲು ಡ್ಯಾಶ್ ಬೋರ್ಡ್ ಅನ್ನು ರಚಿಸಲಾಗುವುದು. ರಾಜ್ಯದ ಜನತೆ ಕೊವಿಡ್ ಬಗ್ಗೆ ಆತಂಕಪಡಬೇಕಿಲ್ಲ ಯಾಕಂದ್ರೆ ಕೊರೊನಾ ಸೋಂಕಿತರ ಪೈಕಿ 100ಕ್ಕೆ 98ರಷ್ಟು ಜನ ಗುಣಮುಖರಾಗಿದ್ದಾರೆ. ಹಾಗಾಗಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಿಎಂ ಮನವಿ ಮಾಡಿದರು.
ಹೊರಗಿನಿಂದ ಬಂದವರಿಂದ ಕೊರೊನಾ ಹೆಚ್ಚಳ ಬೆಂಗಳೂರಿಗೆ ಬೇರೆ ಕಡೆಯಿಂದ ಜನತೆ ಬಂದ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಕೊವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯಲ್ಲೇ ರಿಸಲ್ಟ್ ನೀಡಲು ವ್ಯವಸ್ಥ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಬೆಡ್ ನೀಡಲು ಒಪ್ಪಿವೆ. ಬೆಂಗಳೂರಿನಲ್ಲಿ 8 ವಲಯ ಮಾಡಿ ಉಸ್ತುವಾರಿ ನೇಮಕ ಮಾಡಿ ಕೋವಿಡ್ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ.
ಸಿದ್ದರಾಮಯ್ಯ ಸಹಕರಿಸಬೇಕು ಬಿಐಇಸಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದ ಬಿಎಸ್ವೈ, ಕೋವಿಡ್ ಕೇರ್ ಸೆಂಟರ್ನಲ್ಲಿ ಬೆಡ್ ಬಾಡಿಗೆ ಪಡೆಯುವುದು ಬಿಟ್ಟು ಖರೀದಿಗೆ ನಿರ್ಧರಿಸಿದ್ದೇವೆ ಎಂದರು. ಹಾಗೇನೆ ಹಾಸಿಗೆ ಬೇರೆ ಕಡೆ ಸ್ಥಳಾಂತರ ಬಗ್ಗೆ ಡಿಕೆಶಿ ಆಕ್ಷೇಪಿಸಿದ್ದಾರೆ. ಕೇರ್ ಸೆಂಟರ್ನಲ್ಲಿ ಬಳಸಿದ ಹಾಸಿಗೆಗಳನ್ನು ಸುಡುತ್ತೇವೆ ಎಂದು ಭರವಸೆ ನೀಡಿದರು.
ಯಾವುದೇ ದಾಖಲೆ ಬೇಕಿದ್ದರೂ ಲಭ್ಯ ಕೊವಿಡ್ ಹೆಸರಿನಲ್ಲಿ 1 ರೂ. ದುರುಪಯೋಗವಾಗಲು ಬಿಟ್ಟಿಲ್ಲ, ವಿಪಕ್ಷ ನಾಯಕರು ಯಾವುದೇ ದಾಖಲೆ ಕೇಳಿದರು ಲಭ್ಯ, ತಕ್ಷಣ ದಾಖಲೆ ಒದಗಿಸಲು ನಾವು ಸಿದ್ಧವಾಗಿದ್ದೇವೆ. ಹೀಗಾಗಿ ಸರ್ಕಾರದ ಜತೆ ಪ್ರತಿಪಕ್ಷಗಳು ಮತ್ತಷ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಶಸ್ವಿಯಾಗಿ SSLC ಪರೀಕ್ಷೆ SSLC ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ, ಯಾವುದೇ ವದಂತಿಗೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ, ಕೊರೊನಾ ಸೋಂಕಿತರು ನೆಮ್ಮದಿಯಿಂದಿರಲು ಸಹಕರಿಸಿ ಎಂದು ವಿಪಕ್ಷಗಳಿಗೆ ಮನವಿ ಮಾಡಿದರು.
ನಾಳೆಗೆ ಲಾಕ್‌ಡೌನ್ ಅಂತ್ಯ ನಾಳೆಯಿಂದ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಯಾವುದೇ ಭಾಗದಲ್ಲಿ ಲಾಕ್ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತೊಮ್ಮೆ ಸ್ಪಷ್ಟಪಡಿಸಿದರು. ಹಾಗೇನೆ ಕಂಟೈನ್ಮೆಂಟ್ ಜೋನ್ಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು, ಆರ್ಥಿಕ ಸ್ಥಿತಿ ಸುಧಾರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಹಿರಿಯರು, ಮಕ್ಕಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸೋಂಕಿತರ ಜತೆ ಎಲ್ಲರೂ ಸೌಜನ್ಯದಿಂದ ವರ್ತಿಸಬೇಕು ಎಂದು ಮುಖ್ಯಮಂತ್ರಿಗಳು ಫೇಸ್ಬುಕ್ ಲೈವ್ನಲ್ಲಿ ಮನವಿ ಮಾಡಿದರು.
Published On - 5:52 pm, Tue, 21 July 20



