ತೀವ್ರ ಹಲ್ಲೆಗೊಳಗಾದ ಸರಗಳ್ಳ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

ಬೆಂಗಳೂರಿನಲ್ಲಿ ತೀವ್ರ ಹಲ್ಲೆಗೊಳಗಾಗಿದ್ದರಿಂದ ಸರಗಳ್ಳ ಮಹೇಶ್​ನನ್ನು ನಿಮಾನ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹೇಶ್​ ಸಾವಿಗೀಡಾಗಿದ್ದಾರೆ.

ತೀವ್ರ ಹಲ್ಲೆಗೊಳಗಾದ ಸರಗಳ್ಳ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು
ಆಸ್ಪತ್ರೆಗೆ ದಾಖಲಾಗಿದ್ದ ಕಳ್ಳ ಸಾವು

Updated on: Apr 19, 2021 | 12:06 PM

ನೆಲಮಂಗಲ: ಮಾಚೋಹಳ್ಳಿ ಬಳಿ ಆಕ್ಟೀವಾ ಬೈಕ್​ನಲ್ಲಿ ತೆರಳುತ್ತಿದ್ದ ಶಾಂತಮ್ಮರ ಚೈನ್ ಎಗರಿಸಿ ಆಡುಗೋಡಿ ನಿವಾಸಿ ಮಹೇಶ್​ ಪರಾರಿಯಾಗುತ್ತಿದ್ದರು. ಮಹೇಶ್​ 40 ಗ್ರಾಂ ಮೌಲ್ಯದ ಸರ ಎಗರಿಸಿದ್ದನು. ವಿಷಯ ತಿಳಿದ ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದನು. ತೀವ್ರ ಗಾಯವಾದ್ದರಿಂದ ನಿಮಾನ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹೇಶ್​ ಸಾವಿಗೀಡಾಗಿದ್ದಾರೆ. ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸರಗಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಮಹೇಶ್​ನ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಗೊಳಗಾಗಿದ್ದರಿಂದ ಸರಗಳ್ಳ ಮಹೇಶ್​ನನ್ನು ನಿಮಾನ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹೇಶ್​ ಸಾವಿಗೀಡಾಗಿದ್ದಾರೆ.

ಮೈಸೂರು; ಮಹಿಳೆಯ ಚಿನ್ನದ ಸರ ಎಗರಿಸಿದ್ದ ಆರೋಪಿ ಬಂಧನ
ನಂಜನಗೂಡು ಪೊಲೀಸರ ಕಾರ್ಯಾಚರಣೆಯಿಂದ ಐನಾತಿ ಕಳ್ಳನ ಬಂಧನವಾಗಿದೆ. ಬಂಧಿತನಿಂದ 95 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕೃಷ್ಣಪ್ಪ (65) ಬಂಧಿತ ಆರೋಪಿಯಾಗಿದ್ದು, ಕೃಷ್ಣಪ್ಪ ಮಹಿಳೆಯರ ಮಾಂಗಲ್ಯ ಸರ ಹಾಗೂ ಚಿನ್ನಾಭರಣ ಕದಿಯುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಸುಲೋಚನಾ ಎಂಬ ಮಹಿಳೆಯ 25 ಗ್ರಾಂ ಮಾಂಗಲ್ಯ ಸರ ಲಪಟಾಯಿಸಿದ್ದನು.

ಆರೋಪಿ ಕೃಷ್ಣಪ್ಪ ಒಂದೂವರೆ ವರ್ಷದ ಹಿಂದೆ ರೇಖಾ ಎಂಬುವರ ಚಿನ್ನಾಭರಣ ಲಪಟಾಯಿಸಿದ್ದರು. 25 ಗ್ರಾಂ ತೂಕದ ಚಿನ್ನದ ಸರ, 55 ಗ್ರಾಂ ತೂಕದ ಕರಿಮಣಿ ಸರ, 8 ಗ್ರಾಂ ತೂಕದ ಎರಡು ಉಂಗುರ ಹಾಗೂ 7 ಗ್ರಾಂ ತೂಕದ ಓಲೆಗಳು ವಶಕ್ಕೆ ಪಡೆಯಲಾಗಿತ್ತು. ನಂಜನಗೂಡು ಪೊಲೀಸರು ಮಾಂಗಲ್ಯ ಸರ ಗಿರವಿ ಇಡಲು ಯತ್ನಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಮಂಡ್ಯ: ಕಾಶಿವಿಶ್ವನಾಥ ದೇವಾಲಯದ ಬೀಗ ಮುರಿದು ಶಿವಲಿಂಗ ಕಳ್ಳತನ

ಚಿಕ್ಕಬಳ್ಳಾಪುರದ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಕಳ್ಳತನ; ನಂದಿ ವಿಗ್ರಹದ ಬಲಗಾಲು ಮುರಿದು ಪರಾರಿಯಾದ ಕಳ್ಳರು