AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಬೆಂಗಳೂರಿನಿಂದ ಬಂದಿದ್ದ ಯುವತಿ ಕಿಲ್ಲರ್ ಕೊರೊನಾಗೆ ಬಲಿ, 3 ದಿನ ಐಸಿಯುನಲ್ಲಿದ್ದು ಪ್ರಾಣ ಬಿಟ್ಳು

ಬೆಂಗಳೂರಿನಿಂದ ಬಂದಿದ್ದ ಯುವತಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಜ್ವರದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಯುವತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೋಂಕು ತಗುಲಿದ್ದ ಕಾರಣ ಯುವತಿಯನ್ನು ಐಸಿಯುಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂರು ದಿನ ಐಸಿಯುನಲ್ಲಿದ್ದು ಯುವತಿ ಪ್ರಾಣ ಬಿಟ್ಟಿದ್ದಾಳೆ.

ಹಾಸನ: ಬೆಂಗಳೂರಿನಿಂದ ಬಂದಿದ್ದ ಯುವತಿ ಕಿಲ್ಲರ್ ಕೊರೊನಾಗೆ ಬಲಿ, 3 ದಿನ ಐಸಿಯುನಲ್ಲಿದ್ದು ಪ್ರಾಣ ಬಿಟ್ಳು
ರಶ್ಮಿ
Follow us
ಆಯೇಷಾ ಬಾನು
|

Updated on: Apr 19, 2021 | 11:26 AM

ಹಾಸನ: ಕೊರೊನಾ ವೈರಸ್​ಗೆ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನದಲ್ಲೂ ಕಿಲ್ಲರ್ ಕೊರೊನಾಗೆ 26 ವರ್ಷದ ಯುವತಿ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಚೌಡನಹಳ್ಳಿಯ ರಶ್ಮಿ(26) ಮೃತ ಯುವತಿ.

ಬೆಂಗಳೂರಿನಿಂದ ಬಂದಿದ್ದ ಯುವತಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಜ್ವರದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಯುವತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೋಂಕು ತಗುಲಿದ್ದ ಕಾರಣ ಯುವತಿಯನ್ನು ಐಸಿಯುಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂರು ದಿನ ಐಸಿಯುನಲ್ಲಿದ್ದು ಯುವತಿ ಪ್ರಾಣ ಬಿಟ್ಟಿದ್ದಾಳೆ. ಯುವತಿ ಸಾವು ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಈಗ ಆತಂಕ ಹೆಚ್ಚಾಗಿದೆ. ಯುವತಿ ಮನೆಯವರು ಸೇರಿ ಇಡೀ ಗ್ರಾಮದ ಜನರಿಗೆ ಕೊವಿಡ್ ಪರೀಕ್ಷೆ ಮಾಡಲು ತಯಾರಿ ನಡೆಸಲಾಗಿದೆ. ವೈದ್ಯರು ಇಂದು ಗ್ರಾಮದ 70 ಜನರಿಗೆ ಕೊರೊನ ಪರೀಕ್ಷೆ ನಡೆಸಲಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 8 ರಿಂದ 9 ಜನ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ನಿನ್ನೆ ಒಟ್ಟು 12,793 ಜನ ಸೋಂಕಿತರು ಪತ್ತೆಯಾಗಿದ್ದು ಪ್ರತಿ ನಿಮಿಷಕ್ಕೆ ಸರಾಸರಿ 8ರಿಂದ 9 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಏಪ್ರಿಲ್ 17 ರಂದು 11,404 ಸೋಂಕಿತರು ಪತ್ತೆ, ಪ್ರತಿ ಒಂದು ನಿಮಿಷಕ್ಕೆ 7ರಿಂದ 8 ಜನ ಸೋಂಕಿತರು ಪತ್ತೆ. ಏಪ್ರಿಲ್ 16 ರಂದು 9,917 ಜನ ಸೋಂಕಿತರು ಪತ್ತೆ, ಪ್ರತಿ ನಿಮಿಷಕ್ಕೆ 7 ಸೋಂಕಿತರು ಪತ್ತೆ. ಏಪ್ರಿಲ್ 15 ರಂದು 10, 497 ಜನ ಸೋಂಕಿತರು ಪತ್ತೆ, ನಿಮಿಷಕ್ಕೆ8 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಗಂಟೆಗೆ ಇಬ್ಬರಿಂದ ಮೂವರು ಸೋಂಕಿತರು ಮೃತಪಡುತ್ತಿದ್ದಾರೆ. ಸದ್ಯ ಈಗ ಬೆಂಗಳೂರಿನ ಸ್ಥಿತಿ ತೀರ ಆತಂಕಕ್ಕೆ ನೂಕಿದೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ ಧರಿಸುವುದು ಕಡ್ಡಾಯವಲ್ಲ; ಅಚ್ಚರಿಯ ನಿಲುವು ತಳೆದ ಇಸ್ರೇಲ್​ ದೇಶ