ಇದನ್ನೇ ತುಘಲಕ್ ದರ್ಬಾರ್ ಅನ್ನುವುದು; ಡಿಕೆ ಶಿವಕುಮಾರ್ ಸ್ಪರ್ಧೆ ಬಗ್ಗೆ ಶಾಸಕ ಸುರೇಶ್​ ಕುಮಾರ್ ಆಕ್ಷೇಪ

ಡಿಕೆ ಶಿವಕುಮಾರ್ ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆ ಬಗ್ಗೆ ಶಾಸಕ ಸುರೇಶ್​ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಅನಗತ್ಯ ಪ್ರಹಸನ. ಇದಕ್ಕೆ ಏನು ಹೇಳಬೇಕು? ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗೆ ವೆಚ್ಚವಾಗುತ್ತೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಇದನ್ನೇ ತುಘಲಕ್ ದರ್ಬಾರ್ ಅನ್ನುವುದು; ಡಿಕೆ ಶಿವಕುಮಾರ್ ಸ್ಪರ್ಧೆ ಬಗ್ಗೆ ಶಾಸಕ ಸುರೇಶ್​ ಕುಮಾರ್ ಆಕ್ಷೇಪ
ಡಿಕೆ ಶಿವಕುಮಾರ್, ಸುರೇಶ್​ ಕುಮಾರ್
Follow us
ಕಿರಣ್​ ಹನಿಯಡ್ಕ
| Updated By: ಆಯೇಷಾ ಬಾನು

Updated on:Jun 20, 2024 | 12:21 PM

ಬೆಂಗಳೂರು, ಜೂನ್.20: ಚನ್ನಪಟ್ಟಣ ನನಗೆ ಜೀವ ಕೊಟ್ಟ ತಾಲೂಕು. ಮತದಾರರು ಹೇಳಿದ್ರೆ ಸ್ಪರ್ಧೇ ಖಚಿತ, ವಿಧಿನೇ ಇಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್​ ಕುಮಾರ್​ (Suresh Kumar) ಪೋಸ್ಟ್​​​ ಹಂಚಿಕೊಂಡಿದ್ದು ಇದು ತುಘಲಕ್ ದರ್ಬಾರ್ ಎಂದು ಕಿಡಿಕಾರಿದ್ದಾರೆ.

ಇತಿಹಾಸದಲ್ಲಿ ಓರ್ವ ವ್ಯಕ್ತಿ ರಾಜಧಾನಿಯನ್ನು ಬದಲಾಯಿಸಿದ್ದ. ರಾಜಧಾನಿಯನ್ನ ದೆಹಲಿಯಿಂದ ದೌಲತಾಬಾದ್​ಗೆ ಬದಲಾಯಿಸಿದ್ದ. ನಂತರ ರಾಜಧಾನಿಯನ್ನ ದೌಲತಾಬಾದ್​​​ನಿಂದ ದೆಹಲಿಗೆ ವಾಸಪ್ ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು. ಡಿ.ಕೆ.ಶಿವಕುಮಾರ್​​ ಕನಕಪುರದಿಂದ ಆಯ್ಕೆ ಆಗಿ 2028ರವರೆಗೆ ಶಾಸಕರಾಗಿ ಕರ್ತವ್ಯ ನಿರ್ವಹಿಸುವ ಅವಕಾಶವಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಅನಗತ್ಯ ಪ್ರಹಸನ. ಇದಕ್ಕೆ ಏನು ಹೇಳಬೇಕು? ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗೆ ವೆಚ್ಚವಾಗುತ್ತೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಡಿ.ಕೆ.ಶಿವಕುಮಾರ್​​​​​ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ ಎಂದೆನಿಸದು. ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪುತ್ತಾರೆಯೇ? ಎಂದು ಶಾಸಕ ಸುರೇಶ್​ ಕುಮಾರ್​ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಡಿಕೆ ಶಿವಕುಮಾರ್ ಪಣ: ಚನ್ನಪಟ್ಟಣದಲ್ಲಿ ಸೋಲಿನಲ್ಲೂ ಗೆಲುವು ಹುಡುಕಿದ ಡಿಸಿಎಂ‌

ಲೋಕಸಭೆ ಚುನಾವಣೆಯಲ್ಲಿ ತಮ್ಮ ಡಿಕೆ.ಸುರೇಶ್​ ಸೋಲಿನಿಂದ ಡಿಕೆ ಬ್ರದರ್ಸ್​ಗೆ ಹಿನ್ನಡೆಯಾಗಿದೆ. ಇದೀಗ ಇದನ್ನೇ ಸವಾಲು ಆಗಿ ಸ್ವಕರಿಸೋಕೆ ಡಿಸಿಎಂ ಡಿಕೆ ಮುಂದಾದಂತಿದೆ. ಒಕ್ಕಲಿಗ ಸಾಮ್ರಾಜ್ಯಾಧಿಪತಿ ಕಾಳಗದ 2ನೇ ಪರ್ವವೇ ಶುರುವಾದಂತಿದೆ. ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾಜಿ ಸಂಸದ ಡಿ.ಕೆಸುರೇಶ್ ಸ್ಪರ್ಧೆ ಮಾಡ್ತಾರೆ ಅಂತಾ ಇತ್ತು. ಆದ್ರೆ ಡಿ.ಕೆ.ಶಿವಕುಮಾರ್ ಅವರೇ ನೇರವಾಗಿಯೇ ಕುಮಾರಸ್ವಾಮಿಯ ಸ್ವಕ್ಷೇತ್ರಕ್ಕೆ ಎಂಟ್ರಿ ಕೊಡ್ತಾರೆ ಅಂತಾ ಹೇಳಲಾಗ್ತಿದೆ. ಯಾಕೆಂದ್ರೆ ಲೋಕಸಭೆ ಚುನಾವಣೆಯಲ್ಲಿ ಆದ ಅವಮಾನವನ್ನ ಅದೇ ನೆಲದಿಂದ ಮತ್ತೆ ತೀರಿಸಿಕೊಳ್ಳೋಕೆ ರಣತಂತ್ರ ಮಾಡಿದಂತಿದೆ.

ಡಿ.ಕೆ.ಸುರೇಶ್​​ರನ್ನ ಚನ್ನಪಟ್ಟಣದಿಂದ ಕಣಕ್ಕೆ ಇಳಿಸಲಾಗುತ್ತದೆ ಎಂಬ ಮಾತಿನ ನಡುವೆಯೇ ಡಿಕೆಶಿವಕುಮಾರ್ ತಾವೇ ವಿಧಾನಸಭೆ ಉಪ ಚುನಾವಣೆಗೆ ಚನ್ನಪಟ್ಟಣದಿಂದ ನಿಂತ್ರೆ ಹೇಗೆ ಎಂಬ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.‌ ಯೋಚನೆ ಬಂದಿದ್ದೇ ತಡ ಸ್ವತಃ ಡಿ.ಕೆ.ಶಿವಕುಮಾರ್ ತಾವೇ ಚನ್ನಪಟ್ಟಣದ ಮೇಲೆ ಪ್ರೀತಿ ಬೆಳೆಸಿಕೊಂಡು ಐ ಲವ್ ಇಟ್ ಅಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:20 pm, Thu, 20 June 24