ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನ; ಲೈ ವ್ ವಿಡಿಯೋದಲ್ಲಿ ವಿಷ ಸೇವನೆ

ಬೇರೆ ಗುಂಪಿನವರ ಕಿರುಕುಳದಿಂದ ಮನನೊಂದ ಕುಟುಂಬ ವಿಷ ಸೇವನೆ ಮಾಡಿದ್ದಾರೆ. ಸದ್ಯ ವಿಷ ಕುಡಿದಿದ್ದ ಕುಟುಂಬಸ್ಥರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಕುಟುಂಬದ ಮೂವರಿಂದ ಆತ್ಮಹತ್ಯೆಗೆ ಯತ್ನ; ಲೈ ವ್ ವಿಡಿಯೋದಲ್ಲಿ ವಿಷ ಸೇವನೆ
ಪ್ರಾತಿನಿಧಿಕ ಚಿತ್ರ

Updated on: Mar 27, 2021 | 4:21 PM

ದೇವನಹಳ್ಳಿ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಸಮಿಪ ನಡೆದಿದೆ.  ಅನ್ಯ ಗುಂಪೊಂದರ ಕಿರುಕುಳದಿಂದ ಮನನೊಂದ ಕುಟುಂಬ ವಿಷ ಸೇವನೆ ಮಾಡಿದ್ದಾರೆ. ಸದ್ಯ ವಿಷ ಕುಡಿದಿದ್ದ ಕುಟುಂಬಸ್ಥರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲೈವ್ ವಿಡಿಯೋ ಮಾಡಿ ಕಿರುಕುಳದ ಬಗ್ಗೆ ಹೇಳಿರುವ ಕುಟುಂಬಸ್ಥರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ಕುಟುಂಬಸ್ಥರ ಆತ್ಮಹತ್ಯೆ ಯತ್ನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಚಿನ್ನ ವಶ:
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಚಿನ್ನ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಲಗೇಜ್ ಬ್ಯಾಗ್​ನ ವ್ಹೀಲ್​ನಲ್ಲಿ 11 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಸದ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದೇವನಹಳ್ಳಿ ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಚಿನ್ನ ವಶ

ಇದನ್ನೂ ಓದಿ:

ಚಿನ್ನದ ಅಂಗಡಿ ಮಾಲೀಕನಿಗೆ ಖಾರದ ಪುಡಿ ಎರಚಿ ಕಳ್ಳತನ; ಆರೋಪಿಗಾಗಿ ಪೊಲೀಸರ ಕಾರ್ಯಾಚರಣೆ

ಸಂಸಾರಕ್ಕೆ ಹುಳಿ ಹಿಂಡಿದ ಕೊರೊನಾ.. ಸೌದಿಗೆ ವಾಪಸ್ ಹೋಗದಿದ್ದಕ್ಕೆ ಗಂಡನ ಜೊತೆ ಪತ್ನಿಯ ನಿರಂತರ ಫೈಟಿಂಗ್, ಆತ್ಮಹತ್ಯೆಗೆ ಯತ್ನಿಸಿ ಪತಿ ಆಸ್ಪತ್ರೆ ಪಾಲು