ಅಧಿಕಾರಿಗಳ ಕಿರುಕುಳ: ಹತ್ತು ಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಪಂಪ್ಸೆಟ್ ಆಪರೇಟರ್ ಆತ್ಮಹತ್ಯೆ; ಎಫ್ಐಆರ್ ದಾಖಲು
ಗಂಡನ ಸಾವಿಗೆ ಕಾರಣವಾದ ನಾಲ್ವರ ವಿರುದ್ಧ ಪತ್ನಿ ರೇಣುಕಾ ಯಲ್ಲಪ್ಪ ಚಲವಾದಿ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಪಿಎಸ್ಐ ಸುದರ್ಶನ ರೆಡ್ಡಿ, ಕಂಟ್ರಾಕ್ಟರ್ ಭೂಪಾಲ್.ಕೆ ಹಾಗೂ ಇಂಜಿನಿಯರ್ಗಳಾದ ಪ್ರಮೋದ, ಹನುಮಂತರೆಡ್ಡಿ ವಿರುದ್ಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: ಪಿಎಸ್ಐ ,ಕಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ ಕಿರುಕುಳಕ್ಕೆ ಬೇಸತ್ತು ಪಂಪ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ. ಹತ್ತು ಹಳ್ಳಿಗಳ ಕುಡಿಯುವ ನೀರು ಸರಬರಾಜು ಕೆರೆಯ ಪಂಪ್ಸೆಟ್ನಲ್ಲಿ ಆಪರೇಟರ್ ಕೆಲಸ ಮಾಡುತ್ತಿದ್ದ ಬಸಪ್ಪ ಚಲವಾದಿ(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಎರಡು ತಿಂಗಳಿನಿಂದ ಸಂಬಳ ಕೊಡದೆ ಕಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ ಸತಾಯಿಸಿದ್ದು, ಸಂಬಳ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಮಾಡಿದ್ದಾರೆ. ಇನ್ನು ಕೆಂಭಾವಿ ಪೋಲಿಸ್ ಠಾಣೆಗೆ ಕರೆದು ಪಿಎಸ್ಐ ಸುದರ್ಶನ ರೆಡ್ಡಿ ಹಲ್ಲೆ ಮಾಡಲಾಗಿತ್ತು ಎಂದು ಆರೋಪ ಮಾಡಲಾಗಿದೆ. ಹಲ್ಲೆ ನಂತರ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಯಲ್ಲಪ್ಪ ಚಲವಾದಿ ಪಡೆದಿದ್ದರು.
ಆದರೆ ಇದರಿಂದ ನೊಂದಿದ್ದ ಯಲ್ಲಪ ಮೂವರ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಇದೆ ಮಾರ್ಚ್ 22 ರಂದು ವಿಷ ಕುಡಿದಿದ್ದಾರೆ. ನಂತರ ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಬಸಪ್ಪ ಚಲವಾದಿ ಸಾವನ್ನಪ್ಪಿದ್ದಾರೆ.
ಗಂಡನ ಸಾವಿಗೆ ಕಾರಣವಾದ ನಾಲ್ವರ ವಿರುದ್ಧ ಪತ್ನಿ ರೇಣುಕಾ ಯಲ್ಲಪ್ಪ ಚಲವಾದಿ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಪಿಎಸ್ಐ ಸುದರ್ಶನ ರೆಡ್ಡಿ, ಕಂಟ್ರಾಕ್ಟರ್ ಭೂಪಾಲ್.ಕೆ ಹಾಗೂ ಇಂಜಿನಿಯರ್ಗಳಾದ ಪ್ರಮೋದ, ಹನುಮಂತರೆಡ್ಡಿ ವಿರುದ್ಧ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಕೊಡಲಿಯಿಂದ ಕೊಚ್ಚಿ ಯುವಕನ ಹತ್ಯೆ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ಕೊಡಲಿಯಿಂದ ಕೊಚ್ಚಿ ಯುವಕನ್ನು ಕೊಲೆ ಮಾಡಲಾಗಿದೆ. ಈರುಳ್ಳಿ ಬೆಳೆಯನ್ನು ಕಾಯಲು ಜಮೀನಿನಲ್ಲಿ ಮಲಗಿದ್ದ ಸಿದ್ಧಾರೂಢ ಬಂಡಗಾರ್(22) ನನ್ನು ಹತ್ಯೆ ಮಾಡಲಾಗಿದೆ. ಕೊಲೆಗೆ ಇನ್ನು ಕೂಡ ಕಾರಣ ತಿಳಿದು ಬಂದಿಲ್ಲ. ಶ್ವಾನದಳ ಹಾಗೂ ಬೆರಳಚ್ಚು ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಇನ್ನು ಎಎಸ್ಪಿ ರಾಮ್ ಅರಸಿದ್ಧಿ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತುಮಕೂರಿನಲ್ಲಿ ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರ: ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಪುತ್ರ ಮುನಿಸ್ವಾಮಿ ತನ್ನ ತಂದೆ ನರಸೇಗೌಡ(55) ಹತ್ಯೆಗೈದಿದ್ದಾನೆ. ಆಸ್ತಿ ವಿಚಾರವಾಗಿ ಗಲಾಟೆಯಾಗಿ ಕಳೆದ 3 ವರ್ಷಗಳಿಂದ ಮಕ್ಕಳಿಂದ ದೂರವಿದ್ದ ತಂದೆಯನ್ನು ಮತ್ತೆ ನಿನ್ನೆ ಹುಡುಕಿ ಹೋದ ಮುನಿಸ್ವಾಮಿ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದು, ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: