ಚಿನ್ನದ ಅಂಗಡಿ ಮಾಲೀಕನಿಗೆ ಖಾರದ ಪುಡಿ ಎರಚಿ ಕಳ್ಳತನ; ಆರೋಪಿಗಾಗಿ ಪೊಲೀಸರ ಕಾರ್ಯಾಚರಣೆ
ಚಿನ್ನದ ಅಂಗಡಿ ಮಾಲೀಕನಿಗೆ ಖಾರದ ಪುಡಿ ಎರಚಿ ಚಿನ್ನ ಕಳ್ಳತನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೈಸೂರು: ಹೆಬ್ಬಾಳು ಮುಖ್ಯ ರಸ್ತೆಯ ಕೈಲಾಸ್ ಬ್ಯಾಂಕರ್ಸ್ ಆ್ಯಂಡ್ ಜುವೆಲರ್ಸ್ ಚಿನ್ನದ ಅಂಗಡಿಗೆ ನುಗ್ಗಿ ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಕಳ್ಳತನ ಮಾಡಿರುವ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೋಚಿದ್ದ 4.20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನ ಮೂಲದ ನರೇಂದ್ರ (25) ಚಿನ್ನಾಭರಣ ದೋಚಿದ್ದ ಆರೋಪಿ ಎಂದು ತಿಳಿದು ಬಂದಿದೆ. ಆರೋಪಿಯನ್ನು ಹುಡುಕಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನರೇಂದ್ರ ಚಿನ್ನದಂಗಡಿಗೆ ನುಗ್ಗಿ 14 ಚಿನ್ನದ ಚೈನುಗಳು, 1 ಚಿನ್ನದ ಉಂಗುರವನ್ನು ದೋಚಿದ್ದನು. 2020 ಡಿಸೆಂಬರ್ 18ನೇ ತಾರೀಕಿನಂದು ಸಂಜೆ 7.30ಕ್ಕೆ ಘಟನೆ ನಡೆದಿತ್ತು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದೆ. ಮೈಸೂರಿನ ಸಂಬಂಧಿಕರ ಮನೆಯಲ್ಲಿ ದೋಚಿದ್ದ ಚಿನ್ನಾಭರಣಗಳನ್ನು ಆರೋಪಿ ಬಚ್ಚಿಟ್ಟಿದ್ದನು. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನೆಲಮಂಗಲದಲ್ಲಿ ಪತಿ ಕಿರುಕುಳದಿಂದ ಬೇಸತ್ತು ಪತ್ನಿ ನೇಣಿಗೆ ಶರಣು ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾದ ಘಟನೆ ಐವರಕಂಡಪುರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಮಹಾಲಕ್ಷ್ಮಿ(26) ಎಂದು ತಿಳಿದು ಬಂದಿದೆ. ಪತಿ ವಿಜಯ್ ಕುಮಾರ್ ದಿನನಿತ್ಯ ಕುಡಿದು ಕಿರುಕುಳ ನೀಡುತ್ತಿದ್ದರು. 5 ವರ್ಷದ ಹಿಂದೆ ಇವರ ವಿವಾಹವಾಗಿತ್ತು. ದಂಪತಿಗೆ 4ವರ್ಷದ ಗಂಡು ಮಗು ಹುಟ್ಟಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪತಿ ವಿಜಯ್ ಕುಮಾರ್ ಪತ್ನಿ ಪೋಷಕರಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೋಲದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಕಿರುಕುಳ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಸುಪಾರಿ ನೀಡಿ ಹತ್ಯೆಗೈದ ಪತ್ನಿ
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಸುಪಾರಿ ನೀಡಿ ಪತ್ನಿ ಹಾಗೂ ಆಕೆಯ ಬಾಯ್ಫ್ರೆಂಡ್ ಸೇರಿ ಹತ್ಯೆಗೈದ ಘಟನೆ ನಡೆದಿದೆ. ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು, ಸುಪಾರಿ ನೀಡಿದ ಪತ್ನಿ ತಸ್ಲಿಂಭಾನು (29), ಆಕೆಯ ಬಾಯ್ ಫ್ರೆಂಡ್ ಸೇರಿ ಹತ್ತು ಮಂದಿ ಬಂಧನಕ್ಕೊಳಗಾಗಿದ್ದಾರೆ. ತಸ್ಲಿಂಭಾನು, ಅಪ್ಸರ್ ಖಾನ್ (41), ತಬ್ರೇಜ್, ಸೈಯದ್ ವಸೀಂ ಸೇರಿದಂತೆ 10 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.
ಇದೇ ತಿಂಗಳು ಮಾರ್ಚ್ರಂದು 19ರಂದು ಗುರಪ್ಪನಪಾಳ್ಯದ ಟಿಂಬರ್ಗಲ್ಲಿಯಲ್ಲಿ ಕೊಲೆ ಮಾಡಲಾಗಿದೆ. ತಸ್ಲಿಂ ಬಾನು ಪತಿ ಮೊಹಮ್ಮದ್ ಶಫಿಯ ಹತ್ಯೆ ನಡೆದಿದೆ. ಕಳೆದ ಎರಡು ವರ್ಷದ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಅಪ್ಸರ್ ಖಾನ್ ಎಂಬಾತ ತಸ್ಲಿಂರನ್ನು ಭೇಟಿಯಾಗಿದ್ದರು. ಇಬ್ಬರ ನಡುವೆ ಆತ್ಮೀಯತೆ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ.
ಇದೇ ವೇಳೆ ಮೈಸೂರಿನ ರಿಯಲ್ ಎಸ್ಟೇಟ್ವೊಂದರಲ್ಲಿ ಮೊಹಮ್ಮದ್ ಶಫಿಗೆ ಹಣದ ಆಸೆ ತೋರಿಸಿ ಅಪ್ಸರ್ ಖಾನ್ ಐದು ಲಕ್ಷ ಕಮಿಷನ್ 75 ಲಕ್ಷ ಹೂಡಿಕೆ ಮಾಡಿಸಿದ್ದಾರೆ. ಬಳಿಕ ಆತನ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ಮಾಟ ಮಂತ್ರದ ಮೂಲಕ ಸಾಯಿಸುವ ಪ್ರಯತ್ನ ಮಾಡಿದ್ದರು, ಆದರೆ ಇದು ವಿಫಲವಾದ ಹಿನ್ನೆಯಲ್ಲಿ ಅಪ್ಸರ್ ಖಾನ್ ಸಂಬಂಧಿ ತಬ್ರೇಜ್ಗೆ ಸುಪಾರಿ ನೀಡಿ ಹತ್ಯೆಗೆ ಸಂಚು ಮಾಡಿದ್ದಾರೆ. ಸುಪಾರಿ ಪಡೆದು ಭಾಗಿಯಾದವರಿಗೆ ತಲಾ ಎರಡು ಲಕ್ಷ ಕೊಡುವುದಾಗಿ ಹೇಳಿ, ಅದರಂತೆ ಇದೇ ತಿಂಗಳ 19ರಂದು ರಿಯಲ್ ಎಸ್ಟೇಟ್ನ ಕಮಿಷನ್ ಕೊಡುವುದಾಗಿ ಕರೆದು ಹತ್ಯೆ ಮಾಡಲಾಗಿದೆ. ಇದೀಗ ಆರೋಪಿಗಳನ್ನು ಸದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆ: ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ