ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆ: ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ

ಪತಿಯೊಂದಿಗೆ ಜಗಳವಾಡಿದ್ದ ಶ್ವೇತಾ(26) ಅದೇ ಸಿಟ್ಟಿಗೆ 11 ತಿಂಗಳ ಮಗುವನ್ನು ಹತ್ಯೆಗೈದಿದ್ದು, ತಾನೂ ಕೂಡ ನೇಣು ಬಿಗಿದುಕೊಂಡಿದ್ದಾರೆ. ತಾಯಿ ಮಗುವಿನ ಸಾವನ್ನು ಕಂಡ ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ. ಸದ್ಯ ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆ: ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ
ಇಜಾರ್
Follow us
preethi shettigar
| Updated By: Skanda

Updated on: Mar 17, 2021 | 4:59 PM

ದೇವನಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. 3 ತಿಂಗಳ ಹಿಂದೆಯಷ್ಟೇ ಶಬುದ್ದೀನ್ ಜತೆ 23 ವರ್ಷದ ಇಜಾರ್​ ಅವರಿಗೆ ವಿವಾಹವಾಗಿತ್ತು. ಆದರೆ ಇದೀಗ ಅನುಮಾನಸ್ಪದವಾಗಿ ಇಜಾರ್ ಶವ ಪತ್ತೆಯಾಗಿದೆ.ಮೃತ ಇಜಾರ್ ಪೋಷಕರಿಂದ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಆರೋಪ ಕೇಳಿ ಬಂದಿದೆ. ಇನ್ನು ಮದುವೆಯ ವೇಳೆ ಇಜಾರ್​ ತಂದೆ ಶಬುದ್ದೀನ್​ಗೆ ಮೂರು ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು.

ಮತ್ತೆ ವರದಕ್ಷಿಣೆ ನೀಡುವಂತೆ ಹಲವು ಬಾರಿ ಶಬುದ್ದೀನ್ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯತಿ ಮಾಡಿ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಗಂಡನ ಮನೆಗೆ ಮಗಳನ್ನ ಕಳಿಸಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಹನ್ನೊಂದು ತಿಂಗಳ ಮಗುವಿಗೆ ನೇಣು ಹಾಕಿ ತಾನೂ ನೇಣಿಗೆ ಶರಣಾದ ತಾಯಿ: ಮಗುವಿಗೆ ನೇಣು ಬಿಗಿದು ತಾಯಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಬಳಿ ನಡೆದಿದೆ. ಪತಿಯೊಂದಿಗೆ ಜಗಳವಾಡಿದ್ದ ಶ್ವೇತಾ(26) ಅದೇ ಸಿಟ್ಟಿಗೆ 11 ತಿಂಗಳ ಮಗುವನ್ನು ಹತ್ಯೆಗೈದಿದ್ದು, ತಾನೂ ಕೂಡ ನೇಣು ಬಿಗಿದುಕೊಂಡಿದ್ದಾರೆ. ತಾಯಿ ಮಗುವಿನ ಸಾವನ್ನು ಕಂಡ ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ. ಸದ್ಯ ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ರೈತ ಆತ್ಮಹತ್ಯೆ: ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಬಳಿ ನಡೆದಿದೆ. ರೈತ ಗುರುಮೂರ್ತಿ(40) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ತೋರಣಗಟ್ಟೆಯ ಗುರುಮೂರ್ತಿ ವಿವಿಧ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಆರು ಲಕ್ಷ ರೂಪಾಯಿ ಸಾಲ‌ ಮಾಡಿದ್ದರು. ಅಷ್ಟೇ ಅಲ್ಲದೇ ಇತ್ತಿಚೇಗೆ ಬೆಳೆ ಕೂಡ ನಾಶವಾಗಿತ್ತು. ಇದರಿಂದ ಬೇಸತ್ತ ರೈತ ಕೋಳಿ ಫಾರ್ಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರದ್ದು ಆತ್ಮಹತ್ಯೆ: ದೆಹಲಿ ಪೊಲೀಸ್

ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ; ಇದರಿಂದ ನನ್ನ ಪೋಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ -ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ