ಬೆಂಗಳೂರಿನಲ್ಲಿ ಪೊಲೀಸರಿಗೂ ಕಾಡುತ್ತಿದೆ ಕೊರೊನಾ: 3 ಸಾವು, 193 ಮಂದಿ ಹೋಂ ಕ್ವಾರಂಟೈನ್
ಪೊಲೀಸ್ ಇಲಾಖೆಯಲ್ಲೂ ಸಹ ಕೊರೊನಾ ಆರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ 2ನೇ ಅಲೆಯಲ್ಲಿ ಮೂವರು ಪೊಲೀಸರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತ ಪೊಲೀಸರಿಗಾಗಿ ಕಂಟ್ರೋಲ್ ರೂಂ ಮಾಡಲಾಗುತ್ತಿದೆ.
ಬೆಂಗಳೂರು: ಮಹಾಮಾರಿ ಕೊರೊನಾ ದೇಶದ ಜನರಲ್ಲಿ ಭಯ ಹುಟ್ಟಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಗೆ ಪೊಲೀಸ್ ಇಲಾಖೆಯಲ್ಲೂ ಸಹ ಕೊರೊನಾ ಆರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ 2ನೇ ಅಲೆಯಲ್ಲಿ ಮೂವರು ಪೊಲೀಸರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತ ಪೊಲೀಸರಿಗಾಗಿ ಕಂಟ್ರೋಲ್ ರೂಂ ಮಾಡಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿರ್ದೇಶನದ ಮೇರೆಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಂಟ್ರೋಲ್ ರೂಂ ಓಪನ್ ಮಾಡಲು ಸಿದ್ಧತೆ ನಡೆಯುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿಗೆ ಕೊರೊನಾ ಬಂದ್ರೆ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ದಿನದ 24 ಗಂಟೆಯೂ ಕಂಟ್ರೋಲ್ ರೂಂ ಕೆಲಸ ನಿರ್ವಹಿಸಲಿದೆ. ಕಂಟ್ರೋಲ್ಗಾಗಿ 7 ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತೆ.
ಆಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳಿಂದ ಆಸ್ಪತ್ರೆಗಳ ಮೇಲ್ವಿಚಾರಣೆಯನ್ನು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ನಡೆಸಲಿದ್ದಾರೆ. ಸದ್ಯ 10 ಜನ ಪೊಲೀಸರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 193 ಪಾಸಿಟಿವ್ ಸಿಬ್ಬಂದಿ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಇಂದು ಸಂಜೆಯಿಂದ ಅಥವಾ ನಾಳೆ ಬೆಳಗ್ಗೆಯಿಂದ ಕಂಟ್ರೋಲ್ ರೂಂ ಆರಂಭವಾಗುವ ಸಾಧ್ಯತೆ ಇದೆ.
ಪಶ್ಚಿಮ ವಿಭಾಗ-52, ಕೇಂದ್ರವಿಭಾಗ -5, ಉತ್ತರ ವಿಭಾಗ -15, ದಕ್ಷಿಣವಿಭಾಗ -19, ಪೂರ್ವ ವಿಭಾಗ-29, ಈಶಾನ್ಯ ವಿಭಾಗ-4, ಆಗ್ನೇಯ ವಿಭಾಗ-22, ವೈಟ್ ಫೀಲ್ಡ್ ವಿಭಾಗ-3, ಟ್ರಾಫಿಕ್ ಪೂರ್ವ ವಿಭಾಗ-13, ಸಂಚಾರಿ ಪಶ್ಚಿಮ ವಿಭಾಗ-13, ಸಂಚಾರಿ ಉತ್ತರ ವಿಭಾಗ-5, ಸಿಎಆರ್ ಹೆಡ್ ಕ್ವಾಟ್ರಸ್-11, ಸಿಎಆರ್ ಉತ್ತರ ವಿಭಾಗ-2
ಇದನ್ನೂ ಓದಿ: ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿದ್ದ ಮಸ್ತಾನ್ ಕೊರೊನಾ ಸೋಂಕಿಗೆ ಬಲಿ