Ragging| ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರ‍್ಯಾಗಿಂಗ್ ಕಾಯಿಲೆ: ಮೂವರು ವಿದ್ಯಾರ್ಥಿಗಳು ಅರೆಸ್ಟ್

ರ‍್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮುಂದೆ ಕಾಲೇಜುಗಳಲ್ಲಿ ಈ ರೀತಿಯಾಗದಂತೆ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗಳಿಗೆ ಮಂಗಳೂರು ಕಮೀಷನರ್ ಎಚ್ಚರಿಕೆಯನ್ನು ನೀಡಿದ್ದಾರೆ. ಸದ್ಯ ಸಾಲು ಸಾಲು ರ‍್ಯಾಗಿಂಗ್ ಪ್ರಕರಣಗಳು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

Ragging| ಮಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರ‍್ಯಾಗಿಂಗ್ ಕಾಯಿಲೆ: ಮೂವರು ವಿದ್ಯಾರ್ಥಿಗಳು ಅರೆಸ್ಟ್
ಬಂಧನಕ್ಕೊಳಗಾದ ವಿದ್ಯಾರ್ಥಿಗಳು
Follow us
sandhya thejappa
| Updated By: ಆಯೇಷಾ ಬಾನು

Updated on: Mar 10, 2021 | 11:57 AM

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಮತ್ತೆ ಮತ್ತೆ ರ‍್ಯಾಗಿಂಗ್ ನಡೆಯುತ್ತಲೆ ಇದೆ. ಪೊಲೀಸರು ಮತ್ತೆ ಮತ್ತೆ ರ‍್ಯಾಗಿಂಗ್ ಮಾಡುವವರನ್ನು ಅರೆಸ್ಟ್ ಮಾಡುತ್ತಲೇ ಇದ್ದಾರೆ. ವಿದ್ಯಾರ್ಥಿಗಳ ಪುಂಡಾಟವೋ ವಿದ್ಯಾಸಂಸ್ಥೆಗಳ ನಿರ್ಲಕ್ಷವೋ ಗೋತ್ತಾಗುತಿಲ್ಲ. ಆದರೆ ರ‍್ಯಾಗಿಂಗ್ ಎನ್ನುವ ಕಾಯಿಲೆ ಕರಾವಳಿಯನ್ನು ಕಾಡುತ್ತಿದೆ. ಮಂಗಳೂರಿನ ಬಲ್ಮಟದಲ್ಲಿರುವ ಯೆನೆಪೋಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿ ಅಂದರ್ ಆಗಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ನಗರ ಮಂಗಳೂರು. ಇಲ್ಲಿನ ಕಾಲೇಜುಗಳಿಗೆ ರಾಜ್ಯದವರು ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳು ಕಲಿಕೆಗೆಂದೂ ಬರುತ್ತಾರೆ. ಆದರೆ ಇದೇ ರೀತಿ ಕಲಿಕೆಗೆಂದು ಬಂದ ಕೇರಳ ರಾಜ್ಯದ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುವುದಕ್ಕೆ ಹೋಗಿ ಇದೀಗ ಬಂಧನಕ್ಕೊಳಗಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೇರಳದಿಂದ ಬಂದು ರ‍್ಯಾಗಿಂಗ್ ಮಾಡಿದ 11 ಜನ ವಿದ್ಯಾರ್ಥಿಗಳು ಇದೇ ರೀತಿ ಅಂದರ್ ಆಗಿದ್ದರು. ಈಗ ಮತ್ತೆ ಮೂರು ಜನ ಕೇರಳ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಲ್ಮಟದಲ್ಲಿರುವ ಯೆನಪೋಯ ಡಿಗ್ರಿ ಕಾಲೇಜಿನ ಲಿಯಾಕತ್, ರಿಜಿನ್ ರಿಯಾಜ್, ಮಹಮ್ಮದ್ ನಿಜಾಮುದ್ದೀನ್ ಬಂಧಿತ ವಿದ್ಯಾರ್ಥಿಗಳು. ಲಿಯಾಕತ್ ಸೆಕೆಂಡ್ ಇಯರ್​ ಬಿಕಾಂ ಓದುತ್ತಿದ್ದಾನೆ. ಇನ್ನು ರಿಜಿನ್ ರಿಯಾಜ್ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದು, ಮಹಮ್ಮದ್ ನಿಜಾಮುದ್ದೀನ್ ಎರಡನೇ ವರ್ಷದ ಬಿಎಸ್​ಸಿ ಓದುತ್ತಿದ್ದಾನೆ. ಇವರೆಲ್ಲಾ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿ ಇದೀಗ ಜೈಲುಕಂಬಿ ಎಣಿಸುವಂತಾಗಿದೆ. ಈ ಮೂವರು ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದು, ಪಂಪ್ ವೆಲ್ ಲೇನ್​ನಲ್ಲಿರುವ ಉಮರ್ ಅನ್ಸಾರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ತಮ್ಮ ಮನೆಗೆ ಜೂನಿಯರ್ ವಿದ್ಯಾರ್ಥಿಗಳನ್ನು ಕರೆಸಿ ರ‍್ಯಾಗಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಹೇಳಲಾಗಿದೆ.

ಜೀವ ಬೆದರಿಕೆ ಹಾಕಿದ ಸೀನಿಯರ್ಸ್ ಜೂನಿಯರ್ ವಿದ್ಯಾರ್ಥಿಗಳಿಗೆ ರೂಂ ನಲ್ಲಿ ಚಹಾ ಮಾಡುವುದಕ್ಕೆ ಹೇಳಿ ಟಾರ್ಚರ್ ಮಾಡಿದ್ದಾರೆ. ತಲೆ ಮತ್ತು ಮೀಸೆ-ಗಡ್ಡೆ ಬೋಳಿಸಬೇಕು. 10 ನಿಮಿಷದಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬರಬೇಕು ಅಂತಾ ರ‍್ಯಾಗಿಂಗ್ ಮಾಡುತ್ತಿದ್ದರು. ಇನ್ನು ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನ ಮಾತನಾಡಿಸಬಾರದು. ಇನ್ನು ಈ ವಿಚಾರದ ಬಗ್ಗೆ ಹೋರಗಡೆ ಹೇಳಿದರೆ ಅಷ್ಟೆ ಅಂತಾ ಜೀವ ಬೆದರಿಕೆ ಹಾಕಿದ್ದರೆಂಬ ಮಾಹಿತಿ ತಿಳಿದುಬಂದಿದೆ.

ಸದ್ಯ ರ‍್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಇನ್ನು ಮುಂದೆ ಕಾಲೇಜುಗಳಲ್ಲಿ ಈ ರೀತಿಯಾಗದಂತೆ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗಳಿಗೆ ಮಂಗಳೂರು ಕಮೀಷನರ್ ಎಚ್ಚರಿಕೆಯನ್ನು ನೀಡಿದ್ದಾರೆ. ಅದೇನೆ ಇದ್ದರೂ ಸಾಲು ಸಾಲು ರ‍್ಯಾಗಿಂಗ್ ಪ್ರಕರಣಗಳು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಈ ಬಗ್ಗೆ ವಿದ್ಯಾರ್ಥಿಗಳು ಅರಿತು ವಿದ್ಯಾಭ್ಯಾಸದ ಮೇಲೆ ಗಮನಹರಿಸಬೇಕಿದೆ.

ಇದನ್ನೂ ಓದಿ

Ragging | ಇಂಜಿನಿಯರಿಂಗ್ ಕಾಲೇಜ್​ನಲ್ಲಿ ರ‍್ಯಾಗಿಂಗ್ ಭೂತ.. ನಾಲ್ವರು ಅರೆಸ್ಟ್

Ragging | ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಕ್ಕೆ ಅರೆಸ್ಟ್ ಆದ್ರು 11 ಸೀನಿಯರ್ಸ್