AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tiger Census 2022: ಹುಲಿ ಗಣತಿ 2022ರ ವರದಿ ಬಿಡುಗಡೆ: ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ

ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರವು ಹುಲಿ ಗಣತಿ 2022ರ ರಾಜ್ಯವಾರು ವರದಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಸ್ಥಾನದ ನಿರೀಕ್ಷೆಯಲ್ಲಿದ್ದ ಕರ್ನಾಟಕ ಮತ್ತೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿದೆ.

Tiger Census 2022: ಹುಲಿ ಗಣತಿ 2022ರ ವರದಿ ಬಿಡುಗಡೆ: ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ
ಹುಲಿ ಗಣತಿ 2022ರ ವರದಿ ಬಿಡುಗಡೆ ಮಾಡಿದ ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರImage Credit source: iStock Photo
ದಿಲೀಪ್​, ಚೌಡಹಳ್ಳಿ
| Edited By: |

Updated on: Jul 29, 2023 | 7:28 PM

Share

ಮೈಸೂರು, ಜುಲೈ 29: ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರವು ಹುಲಿ ಗಣತಿ 2022ರ (Tiger Census) ರಾಜ್ಯವಾರು ವರದಿಯನ್ನು ಬಿಡುಗಡೆಗೊಳಿಸಿದೆ. ವರದಿ ಪ್ರಕಾರ, ಮೊದಲ ಸ್ಥಾನವನ್ನು ಮಧ್ಯಪ್ರದೇಶ (Madhya Pradesh) ಪಡೆದುಕೊಂಡಿದ್ದು, ಕರ್ನಾಟಕ (Karnataka) ಎರಡನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಉತ್ತರಾಖಂಡ (Uttarakhand) ರಾಜ್ಯ ಪಡೆದುಕೊಂಡಿದೆ.

2022ರ ಹುಲಿ ಗಣತಿ ವರದಿ ಪ್ರಕಾರ, ಕರ್ನಾಟಕದಲ್ಲಿ 563 ಹುಲಿಗಳಿವೆ. ಮೊದಲ ಸ್ಥಾನ ಪಡೆದಿರುವ ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 560 ಹುಲಿಗಳಿವೆ. ಒಟ್ಟಾರೆಯಾಗಿ ಭಾರತ ದೇಶದಲ್ಲಿ ಒಟ್ಟು ಹುಲಿಗಳ ಸಂಖ್ಯೆ 3,682 ಇದೆ.

ಇದನ್ನೂ ಓದಿ: Tiger Day: ವಿವಿಧ ಭಾಷೆಗಳಲ್ಲಿ ಹುಲಿಯನ್ನು ಏನೆಂದು ಕರೆಯುತ್ತಾರೆ ಗೊತ್ತಾ?

2018 ರ ಗಣತಿಯಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕಕ್ಕೂ ಕೇವಲ ಎರಡು ಹುಲಿಯಷ್ಟೆ ವ್ಯತ್ಯಾಸ ಇತ್ತು. ಹೀಗಾಗಿ ಈ ಬಾರಿ ಮೊದಲ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಕರ್ನಾಟಕ ಇತ್ತು. ಆದರೆ ಈ ಬಾರಿ 222 ಹುಲಿಗಳ ವ್ಯತ್ಯಾಸ ಕಂಡುಬಂದಿದೆ. ಅಂದರೆ, ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಹೀಗಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಈ ಸಮೀಕ್ಷಾ ವರದಿ ಎಚ್ಚರಿಕೆ ಗಂಟೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ