AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಜತೆಗೂಡಿ ಉತ್ತರ ಕರ್ನಾಟಕ ಜನತೆಗೆ ಉದಾತ್ತ ನೆರವು ನೀಡಿದ ತಿಂಡ್ಲು ಬಾಯ್ಸ್​

ಉತ್ತರ ಕರ್ನಾಟಕದ ಜಲಪ್ರಳಯಕ್ಕೆ ಸ್ಪಂದಿಸಬೇಕೆಂದು TV9 ನಿರ್ಧರಿಸಿದ್ದೇ ತಡ ಜನ ಮತ್ತು ಸಂಘ ಸಂಸ್ಥೆಗಳು ಉತ್ತರದ ಜನರಿಗೆ ಉದಾತ್ತರಾಗಿ ನೆರವಾಗಲು ಮುಂದೆ ಬರುತ್ತಿದ್ದಾರೆ. ಶುಕ್ರವಾರ TV9 ಒಂದು ಲಾರಿಯಲ್ಲಿ ಎಣ್ಣೆ, ಬೇಳೆ, ಅಕ್ಕಿ, ಬಿಸ್ಕಿಟ್, ಅಫಜಲಪುರಕ್ಕೆ ಕಳಿಸಿದ ಬೆನ್ನಲ್ಲೇ ಇಂದು ನಗರದ ಸಹಕಾರ ನಗರದ ಹತ್ತಿರದ ತಿಂಡ್ಲು ಬಾಯ್ಸ್​ ಅಸೋಸಿಯೇಶನ್ ಕಡೆಯವರು ಒಂದು ಲಾರಿ ತುಂಬಿದ ರೇಶನ್ ಕಳಿಸಲು ಮುಂದೆ ಬಂದಿದೆ. TV9 ಸಹಕಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ನೆರವಾಗಲು ತಿಂಡ್ಲು ಬಾಯ್ಸ್ ಅಸೋಸಿಯೇಶನ್ ರೇಶನ್ ಕಿಟ್ […]

ಟಿವಿ9 ಜತೆಗೂಡಿ ಉತ್ತರ ಕರ್ನಾಟಕ ಜನತೆಗೆ ಉದಾತ್ತ ನೆರವು ನೀಡಿದ ತಿಂಡ್ಲು ಬಾಯ್ಸ್​
ಸಾಧು ಶ್ರೀನಾಥ್​
|

Updated on: Oct 24, 2020 | 4:18 PM

Share

ಉತ್ತರ ಕರ್ನಾಟಕದ ಜಲಪ್ರಳಯಕ್ಕೆ ಸ್ಪಂದಿಸಬೇಕೆಂದು TV9 ನಿರ್ಧರಿಸಿದ್ದೇ ತಡ ಜನ ಮತ್ತು ಸಂಘ ಸಂಸ್ಥೆಗಳು ಉತ್ತರದ ಜನರಿಗೆ ಉದಾತ್ತರಾಗಿ ನೆರವಾಗಲು ಮುಂದೆ ಬರುತ್ತಿದ್ದಾರೆ. ಶುಕ್ರವಾರ TV9 ಒಂದು ಲಾರಿಯಲ್ಲಿ ಎಣ್ಣೆ, ಬೇಳೆ, ಅಕ್ಕಿ, ಬಿಸ್ಕಿಟ್, ಅಫಜಲಪುರಕ್ಕೆ ಕಳಿಸಿದ ಬೆನ್ನಲ್ಲೇ ಇಂದು ನಗರದ ಸಹಕಾರ ನಗರದ ಹತ್ತಿರದ ತಿಂಡ್ಲು ಬಾಯ್ಸ್​ ಅಸೋಸಿಯೇಶನ್ ಕಡೆಯವರು ಒಂದು ಲಾರಿ ತುಂಬಿದ ರೇಶನ್ ಕಳಿಸಲು ಮುಂದೆ ಬಂದಿದೆ.

TV9 ಸಹಕಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ನೆರವಾಗಲು ತಿಂಡ್ಲು ಬಾಯ್ಸ್ ಅಸೋಸಿಯೇಶನ್ ರೇಶನ್ ಕಿಟ್ ತಯಾರು ಮಾಡಿದೆ. ತಲಾ ಒಂದು ಕಿಟ್​ನಲ್ಲಿ 10 ಕೆ.ಜಿ.ಯಷ್ಟು ಅಕ್ಕಿ, ಬೇಳೆ, ಎಣ್ಣೆ, ಮೈ ಸೋಪು, ಬಟ್ಟೆ ಸೋಪು, ಸಕ್ಕರೆ, ಚಹಾ ಪುಡಿ, ರವಾ, ಉಪ್ಪು, ಮೆಣಸು, ಪೇಸ್ಟ್, ಎರಡು ಅಂಗಿ, ಒಂದು ಪಂಚೆ ಈ ಕಿಟ್ ನಲ್ಲಿ ಇದ್ದು, ಒಂದು ಕುಟುಂಬಕ್ಕೆ 15 ದಿನಕ್ಕೆ ಸಾಕಾಗುವಷ್ಟು ಬೇಳೆ ಕಾಳು ಇದೆ.

ತಾವು ಮಾಡುತ್ತಿರುವ ಸಾಮಾಜಿಕ ಸೇವೆ ಕುರಿತು ವಿವರ ನೀಡಿದ ತಿಂಡ್ಲು ಬಾಯ್ಸ್ ಅಸೋಸಿಯೇಶನ್​ನ ಆನಂದ್ ಅವರು ಕಳೆದ ನಾಲ್ಕೈದು ತಿಂಗಳುಗಳಿಂದ ಲಾಕ್ ಡೌನ್ ಸಮಯದಲ್ಲಿ ಹೇಗೆ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂಬುದರ ವಿವರ ನೀಡಿದರು. ಈ ಸಂದರ್ಭದಲ್ಲಿ 6,000 ಜನರಿಗೆ ಊಟದ ಕಿಟ್ ನೀಡಿದ್ದಾರೆ. ತಮ್ಮ ಸುತ್ತ ಮುತ್ತ ಇರುವ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಕೋವಿಡ್ ನಿಂದ ಸತ್ತ 18 ಜನರ ಅಂತ್ಯ ಸಂಸ್ಕಾರವನ್ನು ಸ್ವಯಂ ಸೇವಕರು ಮಾಡಿದ್ದಾರೆ. ಈಗ ಉತ್ತರ ಕರ್ನಾಟಕದ ಜನತೆಗೆ ನೆರವಾಗಲು TV9 ಜತೆ ಕೈ ಜೋಡಿಸಿದ್ದಾರೆ.

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ