ಜಮೀರ್​ ಅಹ್ಮದ್​ಗೆ ನ್ಯಾಯಾಂಗ ನಿಂದನೆ ಸಂಕಷ್ಟ, ಹೈಕೋರ್ಟ್​ಗೆ ಅರ್ಜಿ

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್​ ರಾಜ್ಯಪಾಲರ ನಿರ್ಧಾರವನ್ನು ಎತ್ತಿ ಹಿಡಿದಿದೆ. ಸಚಿವ ಜಮೀರ್ ಅಹಮ್ಮದ್ ಖಾನ್ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ಹೈಕೋರ್ಟ್​ ಆದೇಶದ ಬಗ್ಗೆ ಲಘುವಾಗಿ ಮಾತನಾಡಿದ್ದು, ಇದೀಗ ಅವರಿಗೆ ಸಂಕಷ್ಟ ತಂದಿಟ್ಟಿದೆ.

ಜಮೀರ್​ ಅಹ್ಮದ್​ಗೆ ನ್ಯಾಯಾಂಗ ನಿಂದನೆ ಸಂಕಷ್ಟ, ಹೈಕೋರ್ಟ್​ಗೆ ಅರ್ಜಿ
ಸಚಿವ ಜಮೀರ್​ ಅಹ್ಮದ್​
Follow us
| Updated By: ವಿವೇಕ ಬಿರಾದಾರ

Updated on:Sep 28, 2024 | 1:33 PM

ಬೆಂಗಳೂರು, ಸೆಪ್ಟೆಂಬರ್​ 28: ಸಚಿವ ಜಮೀರ್ ಅಹ್ಮದ್ (Zameer Ahmed) ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ (TJ Abraham) ಹೈಕೋರ್ಟ್​ನಲ್ಲಿ (High Court) ನ್ಯಾಯಾಂಗ ನಿಂದನೆ (Contempt of Court) ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಸಚಿವ ಜಮೀರ್ ಅಹ್ಮದ್​ ಅವರಿಗೆ ನ್ಯಾಯಂಗ ನಿಂದನೆ ಸಂಕಷ್ಟ ಎದರಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್​ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಸಚಿವ ಜಮೀರ್​ ಅಹ್ಮದ್​ ಖಾನ್​ ಲಘುವಾಗಿ ಮಾತನಾಡಿದ್ದರು. ಸಿದ್ದರಾಮಯ್ಯ ಅವರ ವಿರುದ್ಧ ​ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.

ಇದನ್ನೂ ಓದಿ: ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಇದಕ್ಕೆ, ಕಾಂಗ್ರೆಸ್​ ಮುಖಂಡ ಜಮೀರ್ ಅಹ್ಮದ್​ ಖಾನ್ “ಹೈಕೋರ್ಟ್​ ಆದೇಶ ರಾಜಕೀಯ ತೀರ್ಪು” ಎಂದು ಹೇಳಿದ್ದರು. ಇದು ಜಮೀರ್ ಅಹ್ಮದ್​ ಖಾನ್ ಅವರಿ​ಗೆ ಸಂಕಷ್ಟ ತಂದೊಡ್ಡಿದೆ. ಈ ಸಂಬಂಧ ಜಮೀರ್​ ಅಹ್ಮದ್​ ಖಾನ್​ ಅವರ ವಿರುದ್ಧ ಟಿಜೆ ಅಬ್ರಾಹಂ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಬಾಯಿ ತಪ್ಪಿ ಬಂದಿದೆ: ಜಮೀರ್​

ಹೈಕೋರ್ಟ್​ ತೀರ್ಪು ರಾಜಕೀಯ ಪ್ರೇರಿತ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ. ಬಾಯಿ ತಪ್ಪಿ ಬಂದಿದೆ. ​ಹೈಕೋರ್ಟ್​ ತೀರ್ಪು ಬಂದ ನಂತರ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ನ್ಯಾಯಾಲಯದ ಬಗ್ಗೆ ಅಪಾರ ಗೌರವ ಇದೆ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್​ ಸ್ಪಷ್ಟಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:33 pm, Sat, 28 September 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್