Viral: ಬೆಂಗಳೂರಿನಲ್ಲಿ ಗಂಟೆಗೆ 5,687 ಸಂಚಾರ ನಿಯಮ ಉಲ್ಲಂಘನೆ, 8 ಲಕ್ಷ ಪ್ರಕರಣ ದಾಖಲು

ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದೀಗ 2024 ರ ಮೇ ನಿಂದ ಸೆಪ್ಟೆಂಬರ್ ವರೆಗೆ ಎಐ ಆಧಾರಿತ ಕ್ಯಾಮೆರಾಗಳಲ್ಲಿ ಗಂಟೆಗೆ ಸರಾಸರಿ 5,687 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗಳ ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ ಎಂದು ಸಂಚಾರ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

Viral: ಬೆಂಗಳೂರಿನಲ್ಲಿ ಗಂಟೆಗೆ 5,687 ಸಂಚಾರ ನಿಯಮ ಉಲ್ಲಂಘನೆ, 8 ಲಕ್ಷ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 28, 2024 | 2:12 PM

ಈಗಿನ ಕಾಲದ ಯುವಕರಿಗಂತೂ ಕೈಗೆ ವಾಹನ ಸಿಕ್ಕರೆ ಎದುರಿಗೆ ವಾಹನ ಬರುತ್ತಿದೆ ಎನ್ನುವುದರ ಪರಿವೇ ಇರುವುದಿಲ್ಲ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಡ್ರೈವ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆದರೆ ಇದೀಗ ಒನ್ ವೇ, ನೋ ಎಂಟ್ರಿ ನಿಯಮ ಉಲ್ಲಂಘನೆ ವಿಚಾರದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಸಂಚಾರ ಪೊಲೀಸ್ ಇಲಾಖೆಯು ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಮೇ ನಿಂದ ಸೆಪ್ಟೆಂಬರ್ ವರೆಗೆ ಪ್ರತಿ ಗಂಟೆಗೆ ಎಐ ಆಧಾರಿತ ಕ್ಯಾಮೆರಾಗಳ ಮೂಲಕ ಸೆರೆಹಿಡಿಯಲಾಗಿದ್ದು, ಬೆಂಗಳೂರಿನಲ್ಲಿ 5,687 ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಿಸಲಾಗಿದೆ ಎಂದು ಸಂಚಾರ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಎಂದು ತಿಳಿಸಿದ್ದಾರೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನಡೆಸಿದ 25 ನೇ SAFE ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 1ರಿಂದ ಸೆಪ್ಟೆಂಬರ್ 30 ರವರೆಗೆ, ಈ ಸುಧಾರಿತ ಕಣ್ಣಾವಲು ವ್ಯವಸ್ಥೆಗಳು ಒಟ್ಟು 8 ಮಿಲಿಯನ್ ಸಂಚಾರ ಉಲ್ಲಂಘನೆಗಳನ್ನು ದಾಖಲಿಸಿದೆ. ದಿನಕ್ಕೆ ಸರಾಸರಿ 57,942 ಉಲ್ಲಂಘನೆಗಳು ಅಥವಾ ಪ್ರತಿ ಜಂಕ್ಷನ್‌ನಲ್ಲಿ 789 ಉಲ್ಲಂಘನೆಗಳಾಗಿವೆ. ಬೆಳಗ್ಗಿನ ವೇಳೆ 8 ರಿಂದ 9 ಗಂಟೆ ಸುಮಾರಿಗೆ 9,134 ಮತ್ತು 8,265 ನಿಯಮ ಉಲ್ಲಂಘನೆಗಳು ಪ್ರಕರಣಗಳು ದಾಖಲಾಗಿದೆ. ಪ್ರತಿನಿತ್ಯ ರಾಂಗ್ ವೇ ಯಲ್ಲಿ ವಾಹನ ಚಾಲನೆ ಮಾಡುವ ಪ್ರಕರಣಗಳ ಸಂಖ್ಯೆಯು 2300 ಏರಿಕೆಯಾಗಿದೆ ಎಂದು ಅಂಕಿಅಂಶಗಳಲ್ಲಿ ಬಹಿರಂಗವಾಗಿದೆ.

ಅತಿ ಹೆಚ್ಚು ಉಲ್ಲಂಘನೆಗಳನ್ನು ವರದಿ ಮಾಡಿದ ಪೊಲೀಸ್ ಠಾಣೆಗಳು

ಆಡುಗೋಡಿ, ಬನಶಂಕರಿ, ಬಸವನಗುಡಿ, ಹಲಸೂರು, ಜಯನಗರ, ಮಲ್ಲೇಶ್ವರಂ, ಮೈಕೋ ಲೇಔಟ್, ಆರ್‌ಟಿ ನಗರ, ಸದಾಶಿವನಗರ, ವಿವಿ ಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣೆಗಳಲ್ಲಿ ಅತಿ ಹೆಚ್ಚು ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ, ಬೆಂಗಳೂರಿನಾದ್ಯಂತ 50 ಜಂಕ್ಷನ್‌ಗಳು AI ಕ್ಯಾಮೆರಾಗಳ ನಿರಂತರ ಮೇಲ್ವಿಚಾರಣೆಯಲ್ಲಿವೆ, ಇದು ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ಸೆಂಟರ್ ಮೂಲಕ ಎಲೆಕ್ಟ್ರಾನಿಕ್ ಚಲನ್‌ಗಳನ್ನು ವಿತರಿಸಲು ಅನುಕೂಲವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಈ ಕ್ಯಾಮೆರಾಗಳು ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಿ ಪ್ರಕರಣವನ್ನು ದಾಖಲಿಸುತ್ತಿವೆ ಎನ್ನಲಾಗಿದೆ. AI ಆಧಾರಿತ ಕಣ್ಣಾವಲು ಜೊತೆಗೆ, ಬೆಂಗಳೂರಿನ ಸಂಚಾರ ಪೊಲೀಸರು ನೇರ ಸಂಪರ್ಕವಿಲ್ಲದೆ ಉಲ್ಲಂಘನೆಗಳನ್ನು ದಾಖಲಿಸಲು ಕ್ಷೇತ್ರ ಸಂಚಾರ ಉಲ್ಲಂಘನೆ ವರದಿ ಯಂತ್ರಗಳನ್ನು ಬಳಸುತ್ತಿದ್ದಾರೆ. ಆಗಸ್ಟ್ 2024 ರ ಹೊತ್ತಿಗೆ, ಈ ಯಂತ್ರಗಳು 1.43 ಕೋಟಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿವೆ.

ಇದನ್ನೂ ಓದಿ: ಸಂಜೆ ಶಾಲೆ ಬಿಟ್ಟ ನಂತರ ಹಣ್ಣುಗಳನ್ನು ಮಾರಿ ಅಮ್ಮನಿಗೆ ಸಹಾಯ ಮಾಡುವ ಬಾಲಕ, ಜವಾಬ್ದಾರಿ ಅಂದ್ರೆ ಇದೇ ಅಲ್ವಾ

ಬೆಂಗಳೂರಿನ ಈ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ

ಅಂಕಿಅಂಶಗಳ ಗಮನಾರ್ಹವಾದ ರಸ್ತೆ ಸುರಕ್ಷತೆ ಬಿಕ್ಕಟ್ಟನ್ನು ಒತ್ತಿಹೇಳುತ್ತದೆ. ಕಳೆದ ಆರು ವರ್ಷಗಳಲ್ಲಿ, ಬೆಂಗಳೂರು 27,800 ರಸ್ತೆ ಅಪಘಾತಗಳನ್ನು ದಾಖಲಿಸಿದೆ. 2024 ರ ಜುಲೈವರೆಗೆ, 2,419 ಮಾರಣಾಂತಿಕವಲ್ಲದ ಮತ್ತು 497 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 2018 ರಲ್ಲಿ ಒಟ್ಟು 4,819 ಮಾರಣಾಂತಿಕ ಅಪಘಾತಗಳನ್ನು ವರದಿಯಾಗಿದೆ. 2023 ರಲ್ಲಿ 5,998 ಅತ್ಯಧಿಕ ರಸ್ತೆ ಪ್ರಕರಣಗಳು ವರದಿಯಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣ, ಕೆಆರ್ ಪುರ, ಕಾಮಾಕ್ಷಿಪಾಳ್ಯ, ಪೀಣ್ಯ, ಯಲಹಂಕ ನಗರಗಳಲ್ಲಿ ಅಪಘಾತ ಸಂಭವಿಸುವ ಮೊದಲ ಐದು ಪ್ರದೇಶಗಳೆಂದು ಸಂಚಾರ ಪೊಲೀಸರು ಗುರುತಿಸಿದ್ದಾರೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎದುರಿಸಲು ಹೆಚ್ಚಿನ ಸುರಕ್ಷತಾ ಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿಯ ತುರ್ತು ಅಗತ್ಯವನ್ನು ಸೂಚಿಸುತ್ತದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Sat, 28 September 24

ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್