ಮೆಟ್ರೋ ಸಂಚಾರದ ಬಗ್ಗೆ ಇಂದು ಮಹತ್ವದ ನಿರ್ಧಾರ; ಷರತ್ತುಗಳ ಅನ್ವಯ ಸಾಧ್ಯತೆ

ಸರ್ಕಾರ ಬೆಳಗ್ಗೆ ಮತ್ತು ಸಂಜೆ ಮಾತ್ರ ಮೆಟ್ರೋ ಓಡಾಟಕ್ಕೆ ಅನುಮತಿ ನೀಡಬಹುದು. ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ 6 ಗಂಟೆಯವರಿಗೆ ಅನುಮತಿ ಕೊಡುವ ಸಾಧ್ಯತೆಯಿದೆ. ಮೆಟ್ರೋ ಸಂಚಾರಕ್ಕೆ ಒಂದು ವೇಳೆ ಅನುಮತಿ ನೀಡಿದರೆ, ಒಂದು ರೈಲಿನಲ್ಲಿ 400 ಜನರಿಗೆ ಪ್ರಯಾಣಿಸಲು ಅವಕಾಶ ನೀಡಬಹುದು.

ಮೆಟ್ರೋ ಸಂಚಾರದ ಬಗ್ಗೆ ಇಂದು ಮಹತ್ವದ ನಿರ್ಧಾರ; ಷರತ್ತುಗಳ ಅನ್ವಯ ಸಾಧ್ಯತೆ
ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)
Follow us
TV9 Web
| Updated By: sandhya thejappa

Updated on: Jun 19, 2021 | 9:18 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟಲು ಲಾಕ್​ಡೌನ್​ ಜಾರಿಯಾಗಿತ್ತು. ಸೋಂಕು ನಿಯಂತ್ರಕ್ಕೆ ಬರುತ್ತಿದ್ದಂತೆ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಶುರುವಾಗಿದೆ. ರಾಜ್ಯ ಸರ್ಕಾರ ಯಾವುದಕ್ಕೆಲ್ಲಾ ಅನುಮತಿ ನೀಡುತ್ತದೆ ಎಂದು ಇಂದಿನ (ಜೂನ್ 19) ಸಭೆಯಲ್ಲಿ ನಿರ್ಧಾರವಾಗುತ್ತದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದ ಬಗ್ಗೆಯೂ ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸೋಮವಾರದಿಂದ ಮೆಟ್ರೋ ಬಂದರೆ ಹಲವು ಷರತ್ತು ಅನ್ವಯವಾಗುವ ಸಾಧ್ಯತೆಯಿದೆ. ಮೆಟ್ರೋದಲ್ಲಿ ಇಂತಿಷ್ಟು ಪ್ರಯಾಣಿಕರ ಓಡಾಟಕ್ಕೆ ಅವಕಾಶ ನೀಡಬಹುದು.

ಸರ್ಕಾರ ಬೆಳಗ್ಗೆ ಮತ್ತು ಸಂಜೆ ಮಾತ್ರ ಮೆಟ್ರೋ ಓಡಾಟಕ್ಕೆ ಅನುಮತಿ ನೀಡಬಹುದು. ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ 6 ಗಂಟೆಯವರಿಗೆ ಅನುಮತಿ ಕೊಡುವ ಸಾಧ್ಯತೆಯಿದೆ. ಮೆಟ್ರೋ ಸಂಚಾರಕ್ಕೆ ಒಂದು ವೇಳೆ ಅನುಮತಿ ನೀಡಿದರೆ, ಒಂದು ರೈಲಿನಲ್ಲಿ 400 ಜನರಿಗೆ ಪ್ರಯಾಣಿಸಲು ಅವಕಾಶ ನೀಡಬಹುದು.

ಇಂದಿನ ಸಿಎಂ ಸಭೆಯಲ್ಲಿ ಬಸ್ ಸಂಚಾರದ ಬಗ್ಗೆಯೂ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ. ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಷರತ್ತು ಬದ್ಧ ಸಂಚಾರಕ್ಕೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಜೂನ್ 21ರಿಂದ ಅನ್​ಲಾಕ್​ 2.0 ಜಾರಿಯಾದರೆ ಶೇ.50ರಷ್ಟು ಬಿಎಂಟಿಸಿ, ಕೆಎಸ್ಆರ್​ಟಿಸಿ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿದೆ.

ಬಿಎಂಟಿಸಿಯಲ್ಲಿ 6,400 ಬಸ್ಸುಗಳಿವೆ. ಮೊದಲ ಹಂತದಲ್ಲಿ 1,500 ರಿಂದ 2,000 ಸಾವಿರ ಬಸ್ಸುಗಳು ಬೆಂಗಳೂರಿನಲ್ಲಿ ಓಡಾಟ ನಡೆಸಲಿವೆ. ಕೊರೊನಾ ಭೀತಿ ಹಿನ್ನೆಲೆ ಬಿಎಂಟಿಸಿ ಎಸಿ ವೋಲ್ವೋ ಬಸ್ಸುಗಳು ಸಂಚಾರ ನಡೆಸುವುದು ಬಹುತೇಕ ಅನುಮಾನವಿದ್ದು, ಸದ್ಯ ಹೊರ ರಾಜ್ಯಗಳಿಗೆ ಕೆಎಸ್ಆರ್​ಟಿಸಿ ಬಸ್ ಸಂಚಾರ ಮಾಡುವ ಸಾಧ್ಯತೆ ಕಡಿಮೆಯಿದೆ. ಬಸ್ಗಳಲ್ಲಿ ಮೂರು ಸೀಟ್​ನಲ್ಲಿ ಇಬ್ಬರೂ ಮತ್ತು ಎರಡು ಸೀಟ್​ನಲ್ಲಿ ಒಬ್ಬ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಗ್ರಿನ್ ಸಿಗ್ನಲ್ ನೀಡಿದ ತಾಂತ್ರಿಕ ಸಲಹಾ ಸಮಿತಿ: ಏನಿರುತ್ತೆ, ಏನಿರುವುದಿಲ್ಲ? ಇಲ್ಲಿದೆ ವಿವರ

ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಸೂಚನೆ; ಸಿಎಂಗೆ ಪತ್ರ ಬರೆದ ಬಸವರಾಜ ಹೊರಟ್ಟಿ

(today will decide on metro traffic in Karnataka CM meeting)