ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ವರ್ಗೀಕರಿಸಿದ ಟ್ರಾಫಿಕ್ ಪೊಲೀಸರು
ಕರ್ನಾಟಕ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನ ಟ್ರಾಫಿಕ್ ಪೊಲೀಸರು ಎರಡು ವರ್ಗಗಳಾಗಿ ವರ್ಗೀಕರಿಸಿದ್ದಾರೆ. ಈ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ವರ್ಗ 1 ರಲ್ಲಿ ಗುರುತಿಸಿರುವ ಉಲ್ಲಂಘನೆಗಳು ಗುರುತರವಾಗಿರುತ್ತದೆ.
ಬೆಂಗಳೂರು, ಡಿ.16: ಕರ್ನಾಟಕ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನ (Traffic Violations) ಟ್ರಾಫಿಕ್ ಪೊಲೀಸರು ಎರಡು ವರ್ಗಗಳಾಗಿ ವರ್ಗೀಕರಿಸಿದ್ದಾರೆ. ಈ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ವರ್ಗ 1 ರಲ್ಲಿ ಗುರುತಿಸಿರುವ ಉಲ್ಲಂಘನೆಗಳು ಗುರುತರವಾಗಿದ್ದು, ಇವುಗಳಿಗೆ ಈ ನಿಯಮ ಉಲ್ಲಂಘನೆಗೆ ಪ್ರಥಮ ಅದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರ್ಗ-1 ರಲ್ಲಿ ನಿಯಮ ಉಲ್ಲಂಘನೆಗಳು
- ಮದ್ಯಪಾನ ಮಾಡಿ ಚಾಲನೆ
- ಅತೀ ವೇಗ ಚಾಲನೆ
- ಅಜಾಗರೂಕ ಚಾಲನೆ
- ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು
- ಜಂಪಿಂಗ್ ಟ್ರಾಫಿಕ್ ಸಿಗ್ನಲ್
- ಫ್ರೀ ವಿಲ್ಹಿಂಗ್
- ರೇಸಿಂಗ್ ಮತ್ತು ವೇಗದ ಪ್ರಯೋಗ
- ಶಿಸ್ತು ಪಥ ಚಾಲನೆ ಮಾಡದೇ ಇರುವುದು
- ಜಿಗ್ ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ
- ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು
- ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು
- ಇಂಟರ್ ಸೆಕ್ಷನ್‌ನಲ್ಲಿ ವಾಹನ ನಿಲುಗಡೆ
- ಬಿ.ಎಂ.ಟಿ.ಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು
- ಶಿರಸ್ತ್ರಾಣ (ಹೆಲೈಟ್) ಧರಿಸದೆ ದ್ವಿಚಕ್ರ ವಾಹನ ಚಾಲನೆ
- ದ್ವಿಚಕ್ರ ವಾಹನದಲ್ಲಿ ಸವಾರರು/ಹಿಂದಿನ ಸವಾರರ ಶಿರಸ್ತ್ರಾಣ (ಹೆಲೈಟ್) ಧರಿಸದಿರುವುದು
- ಸುರಕ್ಷತೆಯ ಸೀಟ್ ಬೆಲ್ಟ್ ಧರಿಸದಿರುವುದು
- ಎಡಭಾಗದಿಂದ ಓವರ್ ಟೇಕ್ ಮಾಡುವುದು
- ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಕರೆದೊಯ್ಯುವುದು
- ವಾಹನಗಳ ಮೇಲ್ಬಾವಣಿ (Roof top) ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು
- ಪ್ರಯಾಣಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು
- ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುವುದು
- ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಶಾಲಾ ಬಸ್/ವ್ಯಾನ್‌ಗಳಲ್ಲಿ ಕರೆದೊಯ್ಯುವುದು
- ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು
- ಟ್ರಿಪಲ್ ರೈಡಿಂಗ್
- ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು
- ಪ್ರವೇಶ ನಿಷಿದ್ಧ
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ ಐಐಎಸ್ಸಿ
ವರ್ಗ-2 ರಲ್ಲಿ ಉಲ್ಲಂಘನೆಗಳು
- ಹೈಬೀಮ್ ಲೈಟ್ ಗಳನ್ನು ವಾಹನಗಳಲ್ಲಿ ಬಳಸುವುದು
- ತೀಕ್ಷ್ಣ ಬಿರುವ ಹೆಡ್‌ಲೈಟ್‌ಗಳನ್ನು ಬಳಸುವುದು
- ವಾಹನ ಚಾಲನೆ ಮಾಡುವಾಗ ಕರ್ಕಶ ಹಾರ್ನ್ ಅನ್ನು ಬಳಸುವುದು
- ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು
- ದೋಷಪೂರಿತ ಸೈಲನ್ಸರ್ ಅನ್ನು ಬಳಸುವುದು
- ವಾಹನಗಳಲ್ಲಿ ಉದ್ದವಾದ ವಸ್ತು (Lengthy Material) ಗಳನ್ನು ಒಯ್ಯುವುದು
- ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು
- ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡುವುದು
- ರಹದಾರಿ (ಪರ್ಮಿಟ್) ಇಲ್ಲದೇ ವಾಹನ ಚಾಲನೆ ಮಾಡುವುದು
- ಆಟೋರಿಕ್ಷ ಚಾಲಕರು ನಿಗಧಿಪಡಿಸಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಒತ್ತಾಯಿಸುವುದು
- ಆಟೋರಿಕ್ಷ ಚಾಲಕರು ಬಾಡಿಗೆಗೆ ಕರೆದೊಯ್ಯಲು ನಿರಾಕರಿಸುವುದು
- ಡಿಸ್‌ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು
- ವಾಹನಗಳ ಗ್ಲಾಸ್‌ಗಳಿಗೆ ಬ್ಲಾಕ್ ಫಿಲ್ಡ್ ಬಳಕೆ ಮಾಡುವುದು
- ಡಿಫೆಕ್ಟಿವ್ ರಿಜಿಸ್ಟರ್ ಪ್ಲೇಟ್
- ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು
- ಇನ್ಸೂರೆನ್ಸ್ ಪ್ರಮಾಣ ಪತ್ರವನ್ನು ಹೊಂದದಿರುವುದು
- ಪರ್ಮಿಟ್ ಅನ್ನು ಉಲ್ಲಂಘಿಸುವುದು
- ಹೆಚ್.ಟಿ.ವಿ (ಭಾರಿ) ವಾಹನಗಳ ಪ್ರವೇಶವನ್ನು ಉಲ್ಲಂಘಿಸುವುದು
- ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ