ಈಗಾಗಲೇ ಬೆಂಗಳೂರಿನಲ್ಲಿ 96 ಮಂದಿ ಡಿಸ್ಮಿಸ್ ಆಗಿದ್ದಾರೆ. ನೀನೂ.. ಸಾರಿಗೆ ಇಲಾಖೆ ವಾರ್ನಿಂಗ್​ ಒತ್ತಡಕ್ಕೆ ಸಿಲುಕಿದ ಸಿಬ್ಬಂದಿ

| Updated By: ಸಾಧು ಶ್ರೀನಾಥ್​

Updated on: Apr 09, 2021 | 11:14 AM

ತುಮಕೂರಿನಲ್ಲೂ 84 ತರಬೇತಿನಿರತ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಹೀಗಾಗಿ ತುಮಕೂರಿನಲ್ಲಿ ಇಂದಿನಿಂದ ತರಬೇತಿ ಚಾಲಕರು ಬಸ್ ಓಡಿಸುವ ಸಾಧ್ಯತೆ ಇದೆ. ಈಗಾಗಲೇ ಬೆಳಗ್ಗೆಯಿಂದ 2 ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ 96 ಮಂದಿ ಡಿಸ್ಮಿಸ್ ಆಗಿದ್ದಾರೆ. ನೀನೂ.. ಸಾರಿಗೆ ಇಲಾಖೆ ವಾರ್ನಿಂಗ್​ ಒತ್ತಡಕ್ಕೆ ಸಿಲುಕಿದ ಸಿಬ್ಬಂದಿ
ಸಾರಿಗೆ ನೌಕರರ ಮನೆ ಬಾಗಿಲಿಗೆ ಇಲಾಖೆಯಿಂದ ನೋಟಿಸ್
Follow us on

ಯಾದಗಿರಿ: ಏಪ್ರಿಲ್ 7ರಿಂದ ಸಾರಿಗೆ ನೌಕರರು ಸಂಬಳ ಹೆಚ್ಚಳ ಮಾಡಲು ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದಾರೆ. ಆದರೆ ಸಾರಿಗೆ ಇಲಾಖೆ, ನೌಕರರು ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕೆಲ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 10 ವರ್ಷ ಸೇವೆ ಸಲ್ಲಿಸಿದ್ರೂ ತರಬೇತಿನಿರತನಾಗಿದ್ದೇನೆ. ನೀನೊಬ್ಬನೇ ತರಬೇತಿನಿರತ ಕಂಡಕ್ಟರ್ ಇದ್ದೀಯಾ, ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವೆಂದು ಅಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆಂದು ಟಿವಿ9 ಬಳಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಡಿಪೋ ಕಂಡಕ್ಟರ್ ಮಾನಪ್ಪ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಸದ್ಯ ಕಂಡಕ್ಟರ್ ಮಾನಪ್ಪ ಡ್ಯೂಟಿಗೆ ಹಾಜರಾಗಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ 96 ಮಂದಿ ಡಿಸ್ಮಿಸ್ ಆಗಿದ್ದಾರೆ. ನೀನೂ ಕೂಡ ಕೆಲಸಕ್ಕೆ ಹಾಜರಾಗಲಿಲ್ಲ ಅಂದ್ರೆ ನಿನನ್ನೂ ಕೆಲಸದಿಂದ ವಜಾ ಮಾಡ್ತೀವಿ ಎಂದು ಅಧಿಕಾರಿಗಳು ಮಾನಪ್ಪನಿಗೆ ಬೆದರಿಕೆ ಹಾಕಿದ್ದಾರಂತೆ. ಇನ್ನು ದಾವಣಗೆರೆಯಲ್ಲಿ ತರಬೇತಿ ನಿರತ 40 ಸಾರಿಗೆ ನೌಕರರಿಗೆ ಇಲಾಖೆ ಎಚ್ಚರಿಕೆ ಪತ್ರ ನೀಡಿದೆ. ಕರ್ತವ್ಯಕ್ಕೆ ಹಾಜರಾಗಿ, ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ತರಬೇತಿ ನೌಕರರು ಒತ್ತಡದಲ್ಲಿದ್ದಾರೆ.

ತುಮಕೂರಿನಲ್ಲೂ 84 ತರಬೇತಿನಿರತ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಹೀಗಾಗಿ ತುಮಕೂರಿನಲ್ಲಿ ಇಂದಿನಿಂದ ತರಬೇತಿ ಚಾಲಕರು ಬಸ್ ಓಡಿಸುವ ಸಾಧ್ಯತೆ ಇದೆ. ಈಗಾಗಲೇ ಬೆಳಗ್ಗೆಯಿಂದ 2 ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ.

ಮುಷ್ಕರದಲ್ಲಿ ಭಾಗಿಯಾದ ಸಾರಿಗೆ ನೌಕರರಿಗೆ ನೋಟಿಸ್
ರಾಮನಗರ ಜಿಲ್ಲೆ ಕನಕಪುರದಲ್ಲಿನ ಸಾರಿಗೆ ಇಲಾಖೆ ವಸತಿಗೃಹದಲ್ಲಿ ವಾಸವಿರುವ ನೌಕರರಿಗೆ ನಿನ್ನೆ ಅಧಿಕಾರಿಗಳು ತಿಳಿವಳಿಕೆ ಪತ್ರ ನೀಡಿದ್ದಾರೆ. 24 ನೌಕರರಿಗೆ ನೋಟಿಸ್ ನೀಡಲಾಗಿದೆ. ಕೆಲವರ ಮನೆ ಬಾಗಿಲಿಗೂ ಅಧಿಕಾರಿಗಳು ಪತ್ರ ಅಂಟಿಸಿದ್ದು ಕೆಲಸಕ್ಕೆ ಹಾಜರಾಗದಿದ್ರೆ ವಸತಿಗೃಹ ಹಂಚಿಕೆ ರದ್ದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು
ಇನ್ನು ಕಲಬುರಗಿಯಲ್ಲಿ ಕ್ವಾಟರ್ಸ್​ನಲ್ಲಿರೋ ಸಾರಿಗೆ ನೌಕರರಿಗೆ ಕೆಲಸಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳ ಒತ್ತಡದಿಂದ ನಿನ್ನೆ ಬೆಳಗ್ಗೆ ಮನೆಯಿಂದ ಹೊರಗಡೆ ಹೋಗಿದ್ದ ನನ್ನ ಪತಿ ಮನೆಗೆ ಬಂದಿಲ್ಲ. ಸರ್ಕಾರ ನಮಗೆ ಅನ್ಯಾಯ ಮಾಡ್ತಿದೆ. ನನ್ನ ಪತಿ ತಾಳಿಯನ್ನು ಅಡವಿಟ್ಟು ದಂಡ ಕಟ್ಟಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ಮನೆಯಲ್ಲಿ ನೇಣಿಗೆ ಶರಣು 

(Transport Department Warns Employees to Remove From Job if They Not Present For Work)