ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ಮನೆಯಲ್ಲಿ ನೇಣಿಗೆ ಶರಣು
ಸವದತ್ತಿ ಘಟಕದ ಬಸ್ ಚಾಲಕ ಕಂ ನಿರ್ವಾಹಕರಾಗಿದ್ದ ಶಿವಕುಮಾರ್ ನೀಲಗಾರ ಆತ್ಮಹತ್ಯೆಗೆ ಶರಣಾದ ನೌಕರ. ಇವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಸಾರಿಗೆ ನೌಕರ ಶಿವಕುಮಾರ್ ನೀಲಗಾರ(40) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳ ಕಿರುಕುಳಕ್ಕೆ ನೊಂದು ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸವದತ್ತಿ ಘಟಕದ ಬಸ್ ಚಾಲಕ ಕಂ ನಿರ್ವಾಹಕರಾಗಿದ್ದ ಶಿವಕುಮಾರ್ ನೀಲಗಾರ ಆತ್ಮಹತ್ಯೆಗೆ ಶರಣಾದ ನೌಕರ. ಇವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಕರಾರಸಾ ಸಂಸ್ಥೆಯ ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ ಕಳೆದ 12 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದರು. ಇನ್ನು ಇಂದು ಮುಷ್ಕರ ನಿರತ ಸಾರಿಗೆ ನೌಕರರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಸವದತ್ತಿಗೆ ಆಗಮಿಸಲಿದ್ದಾರೆ.
ಸಂಬಳ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸರ್ಕಾರಿ ಸಾರಿಗೆ ನೌಕರರು ಕರ್ನಾಟಕಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಮುಷ್ಕರ ಕೈಗೊಂಡಿದ್ದರು. ಸಂಬಳ ಹೆಚ್ಚಳಕ್ಕಾಗಿ ಸಾರಿಗೆ ನೌಕರರು ಪಡುತ್ತಿರುವ ಕಷ್ಟುಗಳು ಒಂದೆರೆಡಲ್ಲ. ಜೊತೆಗೆ ಸರ್ಕಾರ ಸರಿಯಾಗಿ ಸಂಬಳ ನೀಡುತ್ತಿಲ್ಲ. ಅವಧಿಗೂ ಮೀರಿ ಕೆಲಸ ಕೊಡುತ್ತಿದ್ದಾರೆ. ರಜೆಗಳು ಸರಿಯಾಗಿ ಕೊಡಲ್ಲ ಎಂಬ ಅನೇಕ ಆರೋಪಗಳಿವೆ.
ಇವೆಲ್ಲವನ್ನೂ ಸಹಿಸಿಕೊಂಡು ಸಾರಿಗೆ ನೌಕರರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕಡಿಮೆ ಸಂಬಳದಿಂದ ಮನೆ ನಿಭಾಹಿಸುವುದು ನಿಜಕ್ಕೂ ಕಷ್ಟದ ಸಂಗತಿ. ಈ ಹಿಂದೆ ಸಹ ಅನೇಕ ಸಮಸ್ಯೆಗಳನ್ನು ಹೇಳಿಕೊಂಡು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ನೋಡುತ್ತಿದ್ದೇವೆ. ಆದರೆ ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳ ಕಿರುಕುಳಕ್ಕೆ ನೀಡಿದ್ದಾರೆ ಎಂದು ಶಿವಕುಮಾರ್ ನೀಲಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಆದರೆ ಈ ರೀತಿ ಕಿರುಕುಳ ನೀಡುವುದು ಎಷ್ಟು ಸರಿ? ಸರ್ಕಾರ ಆದಷ್ಟು ಬೇಗ ಕಣ್ಣು ತೆರೆದು ಸಾರಿಗೆ ನೌಕರರ ಬೇಡಿಕೆಯನ್ನು ಪೂರೈಸಬೇಕಿದೆ. ನೊಂದ ಜೀವಗಳಿಗೆ ಸಾಂತ್ವನ ಹೇಳಬೇಕಿದೆ.
ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಸಚಿವರ ಜಿಲ್ಲೆಯಲ್ಲೇ ಹೀಗಾದರೆ ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿ ಏನೆಂದು ಡಿಕೆಶಿ ಪ್ರಶ್ನೆಸಿದ್ದಾರೆ. ಸಾರಿಗೆ ನೌಕರರನ್ನು ಕರೆದು ಸರ್ಕಾರ ಚರ್ಚಿಸಬೇಕು. ನೌಕರರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳಿ. ಎಲ್ಲಾ ನೌಕರರ ಮೇಲೆ ಸಂಶಯ ಪಡಬೇಡಿ ಎಂದು ಡಿಕೆ ಶಿವಕುಮಾರ್ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ್ರು.
ಇದನ್ನೂ ಓದಿ: ತರಬೇತಿ ನಿರತರಿಗೆ ಅಂತಿಮ ಅವಕಾಶ.. ನಿವೃತ್ತ ನೌಕರರಿಗೆ ಗೌರವ ಧನ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆಹ್ವಾನಿಸಿದ ಸಾರಿಗೆ ಇಲಾಖೆ
(Transport Employee Commits to Suicide in Belagavi)
Published On - 9:44 am, Fri, 9 April 21