Electric Locomotive Train: ಬೀರೂರು ಮತ್ತು ಅರಸೀಕೆರೆ ನಡುವಿನ ಮೊದಲ ಎಲೆಕ್ಟ್ರಿಕ್ ಇಂಜಿನ್ ರೈಲಿಗೆ ಪ್ರಾಯೋಗಿಕ ಚಾಲನೆ
ನೈಋತ್ಯ ರೈಲ್ವೆಯು ಮಂಗಳವಾರ ಕರ್ನಾಟಕದ ಬೀರೂರು ಮತ್ತು ಅರಸೀಕೆರೆ ಪಟ್ಟಣಗಳ ನಡುವೆ ಎಲೆಕ್ಟ್ರಿಕ್ ಇಂಜಿನ್ ರೈಲಿನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ನಡೆಸಿತು. 42-ಕಿಮೀ ಮಾರ್ಗವನ್ನು ಇತ್ತೀಚೆಗೆ ನೈಋತ್ಯ ರೈಲ್ವೆಯು ವಿದ್ಯುದ್ದೀಕರಿಸಿದೆ ಮತ್ತು ಇದು ದಕ್ಷಿಣ ರಾಜ್ಯದ ಎರಡು ಪಟ್ಟಣಗಳ ನಡುವಿನ ಮೊದಲ ವಿದ್ಯುತ್ ಇಂಜಿನ್ ಆಗಿರುತ್ತದೆ.
ಬೆಂಗಳೂರು: ನೈಋತ್ಯ ರೈಲ್ವೆಯು ಮಂಗಳವಾರ ಕರ್ನಾಟಕದ ಬೀರೂರು ಮತ್ತು ಅರಸೀಕೆರೆ ಪಟ್ಟಣಗಳ ನಡುವೆ ಎಲೆಕ್ಟ್ರಿಕ್ ಇಂಜಿನ್ ರೈಲಿನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ನಡೆಸಿತು. 42-ಕಿಮೀ ಮಾರ್ಗವನ್ನು ಇತ್ತೀಚೆಗೆ ನೈಋತ್ಯ ರೈಲ್ವೆಯು ವಿದ್ಯುದ್ದೀಕರಿಸಿದೆ ಮತ್ತು ಇದು ದಕ್ಷಿಣ ರಾಜ್ಯದ ಎರಡು ಪಟ್ಟಣಗಳ ನಡುವಿನ ಮೊದಲ ವಿದ್ಯುತ್ ಇಂಜಿನ್ ಆಗಿರುತ್ತದೆ.
ಕರ್ನಾಟಕದಲ್ಲಿ SWRRLYನ ಹೊಸದಾಗಿ ವಿದ್ಯುದ್ದೀಕರಿಸಿದ ಬೀರೂರು – ಅರಸೀಕೆರೆ ವಿಭಾಗದಲ್ಲಿ (42 RKM) ಯಶಸ್ವಿ ಪ್ರಯೋಗ ನಡೆಸಲಾಗಿದೆ. ಇದು ಪ್ರಯಾಣಿಕರ ಮತ್ತು ಸರಕು ರೈಲುಗಳ ತ್ವರಿತ ಮತ್ತು ತಡೆರಹಿತ ಸಂಚಾರವನ್ನು ಸುಗಮಗೊಳಿಸುತ್ತದೆ ಎಂದು ರೈಲ್ವೆ ಸಚಿವಾಲಯವು ಟ್ವೀಟ್ ಮಾಡಿದೆ.
Marching Towards #100PercentElectrification
Successful trial run has been conducted on the newly electrified Birur – Arsikere section (42 RKM) of @SWRRLY in Karnataka. This will facilitate swift and seamless movement of passenger & freight trains. pic.twitter.com/ldINdgYnBk
— Ministry of Railways (@RailMinIndia) November 29, 2022
ನೈಋತ್ಯ ರೈಲ್ವೆಯ ಮುಖ್ಯ ಇಂಜಿನಿಯರ್ ಜೈ ಪಾಲ್ ಸಿಂಗ್ ಅವರು ಹೊಸ ಎಲೆಕ್ಟ್ರಿಕ್ ಇಂಜಿನ್‌ನ ಲೊಕೊ ಪೈಲಟ್‌ನ ಕಂಪಾರ್ಟ್‌ಮೆಂಟ್‌ನಿಂದ ಮಂಗಳವಾರ ಟ್ರಯಲ್ ರನ್ ಅನ್ನು ಪರಿಶೀಲಿಸಿದರು. ಈ ಬಗ್ಗೆ ರೈಲ್ವೆ ವಿಭಾಗವು ವೀಡಿಯೊವನ್ನು ಹಂಚಿಕೊಂಡಿದ್ದು ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಜೈಪಾಲ್ ಸಿಂಗ್ ಅವರು ಇಂದು ಮೈಸೂರು ವಿಭಾಗದ ಬೀರೂರು-ಅರಸಿಕೆರೆ ವಿಭಾಗವನ್ನು ಪರಿಶೀಲಿಸಿದರು. ಹೊಸದಾಗಿ ವಿದ್ಯುದ್ದೀಕರಿಸಿದ ಮಾರ್ಗದಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್‌ನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಟ್ವಿಟ್ ಮಾಡಿದ್ದಾರೆ.
ಇದನ್ನು ಓದಿ; Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್, ಆನ್ಲೈನ್ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ
ಹೊಸ ರೈಲು ಇಂಗಾಲದ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಇಲಾಖೆ ತಿಳಿಸಿದೆ. ಇದು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ. ಪ್ರಯಾಣಿಕರ ಮತ್ತು ಸರಕು ರೈಲುಗಳ ತಡೆರಹಿತ ಚಲನೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದೆ.ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಭೆ ನಡೆಸಿದ್ದು, ಬೆಂಗಳೂರು ಮತ್ತು ಹುಬ್ಬಳ್ಳಿ ಮಾರ್ಗದ ನಡುವಿನ ವಿದ್ಯುದ್ದೀಕರಣ ಮತ್ತು ಕಾರ್ಯಾಚರಣೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಗೆ ತಿಳಿಸಲಾಯಿತು. ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Wed, 30 November 22