AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru: ಅಧಿಕಾರಿಗಳು, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ; ನೆನೆಗುದಿಗೆ ಬಿದ್ದ ಇಎಸ್ಐ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ

ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ಫುಡ್ ಪಾರ್ಕ್, ವಸಂತ ನರಸಾಪುರದಂತ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಇರುವ ಕೈಗಾರಿಕಾ ಪ್ರದೇಶ ಇದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತಿದ್ದಾರೆ. ಇಲ್ಲಿಯ ಕಾರ್ಮಿಕರಿಗೆ ಅನುಕೂಲ ಆಗಲೆಂದು ಕೇಂದ್ರ ಸರ್ಕಾರ ಇಎಸ್​ಐ ಆಸ್ಪತ್ರೆಗೆ ಮಂಜೂರಾತಿ ಕೊಟ್ಟು ಒಂದು ವರ್ಷ ಕಳೆದಿದೆ. ಆದರೂ ಸೂಕ್ತವಾದ ಜಾಗ ಹುಡುಕಿ ಸ್ವಂತ ಕಟ್ಟಡಲು ಅಧಿಕಾರಿಗಳಿಗೆ ಆಗಿಲ್ಲ.

Tumakuru: ಅಧಿಕಾರಿಗಳು, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ; ನೆನೆಗುದಿಗೆ ಬಿದ್ದ ಇಎಸ್ಐ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ
ಅಧಿಕಾರಿಗಳು ನಿರ್ಲಕ್ಷ್ಯ; ನೆನೆಗುದಿಗೆ ಬಿದ್ದ ಇಎಸ್ಐ ಆಸ್ಪತ್ರೆ ಕಾರ್ಯ
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on:May 03, 2024 | 7:44 PM

Share

ತುಮಕೂರು, ಮೇ 03: ಸುಮಾರು 40 ಸಾವಿರ ಕಾರ್ಮಿಕರಿರುವ ಬೃಹತ್ ಜಿಲ್ಲೆ. ಹಲವು ಕೈಗಾರಿಕಾ ಪ್ರದೇಶಗಳಿರುವ ಇಲ್ಲಿ ನೋಂದಾಯಿತ ಕಾರ್ಮಿಕ (labors) ಸಂಖ್ಯೆ ಹೆಚ್ಚಿದೆ. ಆದರೆ ಇಎಸ್ಐ ಆಸ್ಪತ್ರೆಗೆ (ESI Hospital) ಮಂಜೂರಾತಿ ಸಿಕ್ಕು ವರ್ಷ ಕಳೆದರೂ ಇನ್ನೂ ಕಟ್ಟಡ ನಿರ್ಮಾಣಕ್ಕೆ ಜಾಗವೇ ಗುರುತಿಸಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ಫುಡ್ ಪಾರ್ಕ್, ವಸಂತ ನರಸಾಪುರದಂತ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಇರುವ ಕೈಗಾರಿಕಾ ಪ್ರದೇಶ ಇದೆ. ಬೆಂಗಳೂರು ಹೊರತು ಪಡಿಸಿದರೆ ತುಮಕೂರು ಪರ್ಯಾಯ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದೆ.

ಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕಾರ್ಮಿಕರಿಗೆ ಅನುಕೂಲ ಆಗಲೆಂದು ಕೇಂದ್ರ ಸರ್ಕಾರ ಇಎಸ್ ಐ ಆಸ್ಪತ್ರೆಗೆ ಮಂಜೂರಾತಿ ಕೊಟ್ಟು ಒಂದು ವರ್ಷ ಕಳೆದಿದೆ. ಆದರೂ ಸೂಕ್ತವಾದ ಜಾಗ ಹುಡುಕಿ ಸ್ವಂತ ಕಟ್ಟಡಲು ಅಧಿಕಾರಿಗಳಿಗೆ ಆಗಿಲ್ಲ. ಕಿಸ್ಕಿಂದೆಯಂತಿರುವ ಬಾಡಿಗೆ ಕಟ್ಟದಲ್ಲಿ ಒಪಿಡಿ ಮಾತ್ರ ನಡೆಯುತ್ತಿದೆ. ಒಳರೋಗಿಗಳಿಗೂ ಅನುಕೂಲ ಆಗುವಂತೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿದೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ.

ಇದನ್ನೂ ಓದಿ: Heat Stroke: ಹೆಚ್ಚಿದ ತಾಪಮಾನ, ಕಲ್ಪತರು ನಾಡಿನ ಜನರಲ್ಲಿ ಹೀಟ್ ಸ್ಟ್ರೋಕ್ ಆತಂಕ

ಜಿಲ್ಲಾ ಕೇಂದ್ರದ ಬದಲಿಗೆ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಕಾರ್ಮಿಕರಿಗೆ ಸಹಕಾರಿಯಾಗಲಿವ ಎಂಬ ಕಾರಣಕ್ಕೆ ಅಲ್ಲೇ ಜಾಗ ಪಡೆದುಕೊಳ್ಳುವ ಪ್ರಯತ್ನ ಮುಂದುವರಿದಿದ್ದು, ಫಲ ಸಿಕ್ಕಿಲ್ಲ. ಆರಂಭಿಕವಾಗಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಂದು ಎಕರೆ ಜಾಗವನ್ನುಕೆಐಎಡಿಬಿ ಮಂಜೂರು ಮಾಡಿತ್ತು.

ಬೆಂಗಳೂರಿನ ಇಎಸ್‌ಐ ಆಸ್ಪತ್ರೆ ಅಧಿಕಾರಿ ಗಳು ಈ ಜಾಗವನ್ನು ಪರಿಶೀಲಿಸಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇಷ್ಟು ಜಾಗದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವುದು ಕಷ್ಟದ ಕೆಲಸವಾಗಿದೆ. ಗುರುತಿಸಿರುವ ಜಾಗದಲ್ಲಿ ಕಟ್ಟಡವನ್ನಷ್ಟೇ ಕಟ್ಟಿಸಬಹುದು. ಆದರೆ ಚಿಕಿತ್ಸೆಗೆ ಬೇಕಾದ ಇತರೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಲ್ಲ. ಹಾಗಾಗಿ ಹೆಚ್ಚು ಭೂಮಿಯ ಅವಶ್ಯಕತೆ ಇದೆ.

ಇದನ್ನೂ ಓದಿ: ತುಮಕೂರು: ಹೆಚ್ಚುವರಿ ನೀರು ಬಿಟ್ಟಿಲ್ಲ ಎಂದು ಗ್ರಾ.ಪಂ ಸದಸ್ಯ, ವಾಟರ್ ಮ್ಯಾನ್ ಮೇಲೆ ಹಲ್ಲೆ

ಸುಸಜ್ಜಿತವಾದ ಆಸ್ಪತ್ರೆ, ಸೂಕ್ತವಾದ ಚಿಕಿತ್ಸೆ ಇಲ್ಲದೇ ಕಾರ್ಮಿಕರು ಹೈರಾಣಾಗಿದ್ದಾರೆ. ಸಣ್ಣಪುಟ್ಟದಕ್ಕೂ ಖಾಸಗಿ ಆಸ್ಪತ್ರೆಯ ಕದ ತಟ್ಟುವ ಪರಿಸ್ಥಿತಿ ಇದೆ. ಅತಿ ಜರೂರಾಗಿ ಆಸ್ಪತ್ರೆ ನಿರ್ಮಾಣ ಆದರೆ ಖಾಯಿಲೆ ಬಿದ್ದ ಕಾರ್ಮಿಕರ ಸಂಕಷ್ಟ ದೂರ ಆಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:44 pm, Fri, 3 May 24

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು