ಹೊನ್ನಾವರದಲ್ಲಿ ಖಾಸಗಿ ಬಸ್ ಪಲ್ಟಿ; ಇಬ್ಬರು ಸಾವು, 49 ಜನರಿಗೆ ಗಾಯ
ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಹೊನ್ನಾವರದ(Honnavar ) ಸುಳೆಮುರ್ಕಿ ತಿರುವಿನಲ್ಲಿ ನಡೆದಿದೆ. ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಅಫಘಾತದಲ್ಲಿ ಸಾವಿಗೀಡಾದವರು. ಇನ್ನುಳಿದಂತೆ ಗೌರಿಬಿದನೂರಿನ ರಜನಿ (30) ಎಂಬುವವರು ಒಂದು ಕೈ ಕಳೆದುಕೊಂಡಿದ್ದಾರೆ.
ಉತ್ತರ ಕನ್ನಡ, ಮೇ.03: ಜಿಲ್ಲೆಯ ಹೊನ್ನಾವರದ(Honnavar ) ಸುಳೆಮುರ್ಕಿ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಅಫಘಾತದಲ್ಲಿ ಸಾವಿಗೀಡಾದವರು. ಇನ್ನುಳಿದಂತೆ ಗೌರಿಬಿದನೂರಿನ ರಜನಿ (30) ಎಂಬುವವರು ಒಂದು ಕೈ ಕಳೆದುಕೊಂಡಿದ್ದು, ಉಳಿದ 49 ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಗೌರಿ ಬಿದನೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ 53 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಅತೀ ವೇಗದ ಕಾರಣ ಸುಳೆಮುರ್ಕಿ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಇನ್ನು ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಹೊನ್ನಾವರ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಬ್ರೇಕ್ ಫೇಲ್ ಆಗಿ ರಾಜಹಂಸ ಬಸ್ ಪಲ್ಟಿ, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಹೊಸಕೋಟೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಬಳಿ ಸಿಡಿಲು ಬಡಿದು ರತ್ನಮ್ಮ ಎಂಬ ಮಹಿಳೆ ಸೇರಿದಂತೆ 20ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸದಂತೆ ಜಿಲ್ಲಾಧಿಕಾರಿಯಾಗಿರುವ ಎನ್.ಶಿವಶಂಕರ್, ಇಂದು 4 ಲಕ್ಷ ಹಾಗೂ ಮುಂದೆ 2 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ವಿಪತ್ತು ನಿರ್ವಹಣೆ ಕಾಯ್ದೆಯಡಿ ಪರಿಹಾರ ಘೋಷಿಸಿರುವ ಜಿಲ್ಲಾಡಳಿತ, ಮೃತ ಜಾನುವಾರುಗಳಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Fri, 3 May 24