ತುಮಕೂರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನು ಆಟೋ ಟಾಪ್ ಮೇಲೆ ಕೂರಿಸಿ ಆಟೋ ಚಲಾಯಿಸಿದ ಚಾಲಕ!

ಒಂದು ಬಸ್​ನಲ್ಲಿ 130ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ್ದಕ್ಕೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿದ್ದೂ, ಆಟೋ (Auto) ಚಾಲಕನೊಬ್ಬ ಪಾವಗಡದಲ್ಲಿ ವಿದ್ಯಾರ್ಥಿಗಳನ್ನ ತುಂಬಿಕೊಂಡ ಚಲಾಯಿಸುತ್ತಿದ್ದಾನೆ.

ತುಮಕೂರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನು ಆಟೋ ಟಾಪ್ ಮೇಲೆ ಕೂರಿಸಿ ಆಟೋ ಚಲಾಯಿಸಿದ ಚಾಲಕ!
ಹೆಚ್ಚು ಜನರನ್ನು ಕೂರಿಸಿಕೊಂಡ ಆಟೋ ಚಲಾಯಿಸುತ್ತಿರುವ ಆಟೋ ಚಾಲಕರು
Follow us
TV9 Web
| Updated By: sandhya thejappa

Updated on:Mar 24, 2022 | 11:38 AM

ತುಮಕೂರು: ಜಿಲ್ಲೆಯಲ್ಲಿ ಭೀಕರ ಅಪಘಾತ (Accident) ನಡೆದರೂ ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಖಾಸಗಿ ಬಸ್ ಅಪಘಾತದಲ್ಲಿ ಈ ಹಿಂದೆ ಸುಮಾರು 6 ಜನ ಮೃತಪಟ್ಟಿದ್ದಾರೆ. ಒಂದು ಬಸ್​ನಲ್ಲಿ 130ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ್ದಕ್ಕೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿದ್ದೂ, ಆಟೋ (Auto) ಚಾಲಕರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನ ತುಂಬಿಕೊಂಡ ಚಲಾಯಿಸುತ್ತಿದ್ದಾರೆ. ಟಾಪ್ ಮೇಲೆಯೂ ವಿದ್ಯಾರ್ಥಿಗಳನ್ನ ಕೂರಿಸಿಕೊಂಡಿದ್ದು, ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈಜಲು ಹೋಗಿದ್ದ ಯುವಕ ನೀರು ಪಾಲು: ಕಾರವಾರ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಧರ್ಮ ನದಿಯ ಮಳಗಿ ಜಲಾಶಯದಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ವಿನಾಯಕ (25) ಮೃತ ಯುವಕ. ಯುವಕ ಸ್ನೇಹಿತರೊಂದಿಗೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದಿದ್ದ. ಜಾತ್ರೆ ಮುಗಿದ ಬಳಿಕ ತನ್ನ 6 ಸ್ನೇಹಿತರೊಂದಿಗೆ ಮಳಗಿ ಜಲಾಶಕ್ಕೆ ಬಂದಿದ್ದಾನೆ. ಜಲಾಶಯದಲ್ಲಿ ಈಜಲು ಹೋಗಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಈಜು ತಜ್ಞರು, ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನದಿಗೆ ಈಜಲು ಹೋದ ಯುವಕ ಮೃತ: ಇನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿ ಸ್ನೇಹಿತರ ಜೊತೆ ವೇದಾವತಿ ನದಿಗೆ ಈಜಲು ಹೋದ ಯುವಕ ಸಾವನ್ನಪ್ಪಿದ್ದಾನೆ. ಕಾರಟಗಿ ಮೂಲದ ನಾಗಲಿಂಗ( 23) ಮೃತ ದುರ್ದೈವಿ. ನಾಗಲಿಂಗ ರೈಸ್ ಮಿಲ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ ಇಬ್ಬರು ಸ್ನೇಹಿತರೊಂದಿಗೆ ವೇದಾವತಿಗೆ ಈಜಲು ಹೋಗಿದ್ದ. ಈಜು ಬಾರದೆ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಶಂಕೆ ಮೂಡಿದೆ.

ಇದನ್ನೂ ಓದಿ

IPL 2022: ಐಪಿಎಲ್​ನಲ್ಲಿ ಸಿಕ್ಕಿಲ್ಲ ಅವಕಾಶ: ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಈತ ಮಾಡಿದ್ದೇನು ನೋಡಿ

ಪಾಕ್ ನೆಲಕ್ಕೆ ಕ್ಷಿಪಣಿ ಅಪ್ಪಳಿಸಲು ಮಾನವ ವೈಫಲ್ಯ ಕಾರಣ: ತಜ್ಞರ ಶಂಕೆ

Published On - 11:30 am, Thu, 24 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ