ತುಮಕೂರು: ಕಾಂಗ್ರೆಸ್ ಮುಖಂಡ ಅನುಮಾನಸ್ಪದ ಸಾವು, ಪರಮೇಶ್ವರ್​ಗೆ ಮತ ಹಾಕಿದ್ದಕ್ಕೆ ಕೊಲೆ ಶಂಕೆ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಓರ್ವ ಕೊಲೆಯಾಗಿರುವ ಆರೋಪ ಕೇಳಿಬಂದಿದೆ. ಜಿ. ಪರಮೇಶ್ವರ್ ಅವರಿಗೆ ಮತ ನೀಡಿದ್ದಕ್ಕೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಬಳಿ ಕಾಂಗ್ರೆಸ್ ಮುಖಂಡ ದೇವರಾಜ್ (30) ಎಂಬುವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು: ಕಾಂಗ್ರೆಸ್ ಮುಖಂಡ ಅನುಮಾನಸ್ಪದ ಸಾವು, ಪರಮೇಶ್ವರ್​ಗೆ ಮತ ಹಾಕಿದ್ದಕ್ಕೆ ಕೊಲೆ ಶಂಕೆ
ಸಾಂದರ್ಭಿಕ ಚಿತ್ರ
ಮಹೇಶ್ ಇ, ಭೂಮನಹಳ್ಳಿ Edited By: ವಿವೇಕ ಬಿರಾದಾರ

Updated on: Aug 13, 2023 | 3:13 PM

ತುಮಕೂರು: ಇತ್ತೀಚಿಗೆ ರಾಜಕೀಯ (Politics) ಧ್ವೇಷಕ್ಕಾಗಿ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ತಮ್ಮ ನಾಯಕರು ಅಧಿಕಾರಕ್ಕೆ ಬಂದ ತಕ್ಷಣ ಬೆಂಬಲಿಗರು ಬಾಲ ಬಿಚ್ಚುತ್ತಿದ್ದು, ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂನೊಂದಿಗೆ ವರ್ತಿಸುತ್ತಿದ್ದಾರೆ. ಇದೇರೀತಿಯಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwara) ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಓರ್ವ ಕೊಲೆಯಾಗಿರುವ ಆರೋಪ ಕೇಳಿಬಂದಿದೆ. ಜಿ. ಪರಮೇಶ್ವರ್ ಅವರಿಗೆ ಮತ ನೀಡಿದ್ದಕ್ಕೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಬಳಿ ಕಾಂಗ್ರೆಸ್ ಮುಖಂಡ ದೇವರಾಜ್ (30) ಎಂಬುವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ಮುಖಂಡ ಮರಿಯಪ್ಪ ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮರಿಯಪ್ಪ ಗ್ರಾಮದ ಮುಖಂಡ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದರು. ದೇವರಾಜ್ ಕಾಂಗ್ರೆಸ್ ಮುಖಂಡ ಆನಂದ್​ರವರ ಸಂಬಂಧಿಯಾಗಿದ್ದರು. ಇಬ್ಬರ ನಡುವೆ ರಾಜಕೀಯ ವೈಮನಸ್ಸು ಇತ್ತು. ಇತ್ತೀಚಿಗೆ ಮರಿಯಪ್ಪ ದೇವರಾಜ್​ರನ್ನು ಪಾರ್ಟಿ ಮಾಡೊಣ ಬಾ ಎಂದು ಕರೆದುಕೊಂಡು ಹೋಗಿದ್ದರು. ಮರಿಯಪ್ಪ ಅವರ ಜೊತೆ ಹೋದ ದೇವರಾಜ್​ ಶವವಾಗಿ ಪತ್ತೆಯಾಗಿದ್ದಾರೆ. ದೇವರಾಜ್​​ ಅಪಘಾತದಲ್ಲಿ ಮೃತರಾಗಿರುವ ರೀತಿ ಬಿಂಬಿಸಲಾಗಿದೆ. ಆದರೆ ದೇವರಾಜ್​ ತಲೆ ಬಲವಾಗಿ ಹೊಡೆದಿರುವ ಗುರುತು ಪತ್ತೆಯಾಗಿದೆ.

ಇದನ್ನೂ ಓದಿ: ತುಮಕೂರು: ನಾಗಾಸಾಧು ವೇಷದಲ್ಲಿ ಬಂದು ವ್ಯಕ್ತಿಯೊಬ್ಬರ ಕೈಯಲ್ಲಿನ ಉಂಗುರ ದೋಚಿ ಪರಾರಿ

ಇದರಿಂದ ಮರಿಯಪ್ಪ, ದೇವರಾಜ್​​ರನ್ನು ಕರೆದುಕೊಂಡು ಹೋಗಿ ಹೊಡೆದು ಕೊಂದಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಕೊರಟಗೆರೆ ಪೊಲೀಸರು ಆರೋಪಿ ಮರಿಯಪ್ಪನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ಆರೋಪಿ ವಿರುದ್ಧ 302 ಕೊಲೆ ಕೇಸ್ ಹಾಗೂ ಒಡವೆ ಅಡವಿಟ್ಟ ಆರೋಪದ ಅಡಿ 392 ಸುಲಿಗೆ ಕೇಸ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:53 pm, Sun, 13 August 23

ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Follow Us