ನೆಚ್ಚಿನ ಶಿಕ್ಷಕನಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ: ಗ್ರಾಮಸ್ಥರ ಪ್ರೀತಿಗೆ ಭಾವುಕರಾದ ಟೀಚರ್​

Tumakuru news: ತುಮಕೂರು ತಾಲೂಕಿನ ಶಿರಾವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 35 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಟಿ ನರಸಿಂಹಮೂರ್ತಿ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಕುರಿಸಿ ಊರ ತುಂಬ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ.

ನೆಚ್ಚಿನ ಶಿಕ್ಷಕನಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ: ಗ್ರಾಮಸ್ಥರ ಪ್ರೀತಿಗೆ ಭಾವುಕರಾದ ಟೀಚರ್​
ಬೆಳ್ಳಿ ರಥದಲ್ಲಿ ಕುರಿಸಿ ಶಿಕ್ಷಕನಿಗೆ ಊರಲ್ಲಿ ಅದ್ದೂರಿ ಮೆರವಣೆಗೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 31, 2023 | 7:48 PM

ತುಮಕೂರು, ಜುಲೈ 31: ಶಿಕ್ಷಕ (teacher) ರೇಂದರೆ ಪಾಠ ಬೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸುವ ಮಾರ್ಗದರ್ಶಕರು. ಅಂತಹ ನೆಚ್ಚಿನ ಶಿಕ್ಷಕನಿಗೆ‌ ಬೀಳ್ಕೊಡುಗೆ ಕೊಡಲು ಆ ಊರನ್ನೇ ಹಬ್ಬದಂತೆ ಸಡಗರದಿಂದ ಅಲಂಕರಿಸಿ ಊರ ತುಂಬಾ ಅದ್ದೂರಿಯಾಗಿ ಮೆರವಣಿಗೆ ಮಾಡಿರುವಂತಹ ಅಪರೂಪದ ಘಟನೆ ತುಮಕೂರು ತಾಲ್ಲೂಕಿನ ಶಿರಾವರ ಗ್ರಾಮದಲ್ಲಿ ಕಂಡುಬಂದಿದೆ.

ತುಮಕೂರು ತಾಲೂಕಿನ ಶಿರಾವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 35 ವರ್ಷದಿಂದ ಟಿ ನರಸಿಂಹಮೂರ್ತಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಗ್ರಾಮದ ಗ್ರಾಮಸ್ಥರಿಗೆ ಮನೆ ಮಗನಂತೆ ಇದ್ದ ಟಿ ನರಸಿಂಹಮೂರ್ತಿ ಇಂದು ನಿವೃತ್ತಿ ಹೊಂದಿದ್ದಾರೆ. ಅಂತಹ ಶಿಕ್ಷಕನಿಗೆ ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ. ಗ್ರಾಮಸ್ಥರ ಪ್ರೀತಿ ಕಂಡು ಆ ಶಿಕ್ಷಕ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಏಕಾಏಕಿ ಮನೆಗೆ ನುಗ್ಗಿ ಕರೆದುಕೊಂಡು ಹೋದರು, ಅಪರಾಧಿಯಂತೆ ನಡೆಸಿಕೊಂಡರು: ಪೊಲೀಸರ ವಿರುದ್ಧ ಶಕುಂತಲಾ ನಟರಾಜ್​ ಆರೋಪ

ಟಿ ನರಸಿಂಹಮೂರ್ತಿ ಅವರು ಕೇವಲ ಮಕ್ಕಳಿಗೆ ಶಿಕ್ಷಕರಲ್ಲದೇ ಗ್ರಾಮಸ್ಥರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಈ ಹಿನ್ನೆಲೆ ಆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ ತಮ್ಮ ನೆಚ್ಚಿನ ಶಿಕ್ಷಕನನ್ನು ಬೆಳ್ಳಿರಥ ಮೇಲೆ‌ ಕುರಿಸಿ ತಲೆಗೆ ಪೇಟ ತೊಡಿಸಿ, ಶಾಲು ಹಾಕಿ ಇಡೀ ಗ್ರಾಮದ ಸುತ್ತ ಸುಮಾರು 2 ಕಿಲೋಮೀಟರ್, ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಪೂರ್ಣ ಕುಂಬ ಕಳಸ, ಬ್ಯಾಂಡ್ ಸೆಟ್, ಮೀರಗಾಸೆ, ತಮಟೆ ವಾದ್ಯ, ಪಟಾಕಿ ಸಿಡಿಸಿ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ಊರಿನ ಜನರಿಗೆಲ್ಲಾ ಹೋಳಿಗೆ ಊಟ ಹಾಕುವ ಮೂಲಕ ತನ್ನ ನೆಚ್ಚಿನ ಶಿಕ್ಷಕನಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಕೊಟ್ಟಿದ್ದಾರೆ.

ಇದನ್ನೂ ಓದಿ: ತುಮಕೂರು: ಅತಿಯಾದ ಭಾರ ತಾಳಲಾರದೆ ಮೇಲಕ್ಕೆದ್ದ ಲಾರಿಯ ಕ್ಯಾಬಿನ್​ ಭಾಗ

ನರಸಿಂಹಮೂರ್ತಿ ಗರಡಿಯಲ್ಲಿ ಕಲಿತ ಸಾವಿರಾರು ಜನರು ಸಾಫ್ಟ್‌ವೇರ್ ಇಂಜಿನಿಯರ್, ಡಾಕ್ಟರ್, ರಾಜಕಾರಣಿಗಳು, ದೇಶ ವಿದೇಶಗಳಲ್ಲಿ ಹಲವು ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ನೆಚ್ಚಿನ ಶಿಕ್ಚಕನಿಗೆ ಕೊಟ್ಟ ಅದ್ದೂರಿ ಬೀಳ್ಕೊಡುಗೆ ಸನ್ಮಾನಕ್ಕೆ ಮನಸೋತ ಶಿಕ್ಷಕ ನರಸಿಂಹಮೂರ್ತಿ ಆ ಗ್ರಾಮಸ್ಥರ ಪ್ರೀತಿಗೆ ಭಾವುಕರಾಗಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಇಂತಹ ಸನ್ಮಾನಗಳು ಎಲ್ಲರಿಗೂ ಸಿಗುತ್ತೆ ಎಂದಿದ್ದಾರೆ.

ತನ್ನ ಶಿಕ್ಷಕ ತಮ್ಮ ಶಾಲೆಯನ್ನ ಬಿಟ್ಟು ಹೋಗುತ್ತಿರುವುದಕ್ಕೆ ಆ ಗ್ರಾಮಸ್ಥರೆಲ್ಲಾ ಭಾವುಕರಾಗಿದ್ದಾರೆ. ಮುಂದೆ ಇಂತಹ ಶಿಕ್ಷಕರು ನಮ್ಮ ಶಾಲೆಗೆ ಸಿಗಲಿ ಎನ್ನುವ ಮೂಲಕ ಶಿಕ್ಷಕರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:45 pm, Mon, 31 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ