ಭಾರತ್ ಜೋಡೋ ಯಾತ್ರೆಯಲ್ಲಿ ತಳಸಮುದಾಯದವರ ಪ್ರವೇಶಕ್ಕೆ ನಿರ್ಬಂಧ: ಪ್ರಸಂಗ ವಿವರಿಸಿದ ಕಾಡುಗೊಲ್ಲ ಮುಖಂಡ

ಪಾಸ್ ಇದ್ದರೂ ಕೂಡ ಅಲ್ಲಿ ನಮ್ಮನ್ನ ಒಳಗಡೆ ಬಿಡಲಿಲ್ಲ. ಒಳಗಡೆ ಹೋಗಬೇಕೆನ್ನುವಷ್ಟರಲ್ಲಿ ಮಾಜಿ ಸಚಿವ ಹೆಚ್​ಎಮ್ ರೇವಣ್ಣ ನೀವು ಯಾರು ಅಂತಾ ಪ್ರಶ್ನೆ ಮಾಡಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ತಳಸಮುದಾಯದವರ ಪ್ರವೇಶಕ್ಕೆ ನಿರ್ಬಂಧ: ಪ್ರಸಂಗ ವಿವರಿಸಿದ ಕಾಡುಗೊಲ್ಲ ಮುಖಂಡ
ಕಾಡುಗೊಲ್ಲ ಮುಖಂಡ ನಾಗಣ್ಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 26, 2022 | 4:11 PM

ತುಮಕೂರು: ಭಾರತ ಜೋಡೋ ಯಾತ್ರೆ (Bharat Jodo Yatra) ಯಲ್ಲಿ ತಳಸಮುದಾಯದ ಮುಖಂಡರ ಮೇಲೆ ಹೆಚ್​.ಎಮ್ ರೇವಣ್ಣ ನೂಕಿದ ಪ್ರಕರಣ ಹಿನ್ನೆಲೆ ಟಿವಿ9 ಗೆ ಕಾಡುಗೊಲ್ಲ ಮುಖಂಡ ನಾಗಣ್ಣ ಪ್ರತಿಕ್ರಿಯೆ ನೀಡಿದ್ದು, ಅಕ್ಟೋಬರ್ 20ಕ್ಕೆ ಒಟ್ಟು ಐವರು ರಾಯಚೂರಿಗೆ ಹೋದೆವು. ಡಾ. ಸಿಎಸ್ ದ್ವಾರಕನಾಥ್ ಕರೆ ಮಾಡಿದ ಕಾರಣ ಹೋಗಿದ್ದೇವು. ಪಾಸ್ ಇದ್ದರೂ ಕೂಡ ಅಲ್ಲಿ ನಮ್ಮನ್ನ ಒಳಗಡೆ ಬಿಡಲಿಲ್ಲ. ಒಳಗಡೆ ಹೋಗಬೇಕೆನ್ನುವಷ್ಟರಲ್ಲಿ ಮಾಜಿ ಸಚಿವ ಹೆಚ್​ಎಮ್ ರೇವಣ್ಣ ನೀವು ಯಾರು ಅಂತಾ ಪ್ರಶ್ನೆ ಮಾಡಿದರು. ನಾವು ತಳಸಮುದಾಯದಿಂದ ಬಂದಿದ್ದೇವೆ. ಸಂವಾದಕ್ಕೆ ಪಾಸ್ ಇದೆ ಹೀಗಾಗಿ ಬಂದಿದ್ದೇವೆ. ದಯಮಾಡಿ ತಡೆಯಬೇಡಿ ಎಂದು ಹೇಳಿದ್ವಿ. ಆಗ ರೇವಣ್ಣ ನೀವು ಹೋಗಬೇಡಿ ಎಂದು ಕುತ್ತಿಗೆ ಪಟ್ಟಿಗೆ ಕೈ ಹಾಕಿದರು. ನನಗೆ ಆಶ್ಚರ್ಯ ಆಯ್ತು,ಇವರು ತಳಸಮುದಾಯದ ಬಗ್ಗೆ, ಓಬಿಸಿ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇವರು ಯಾರನ್ನ ಪ್ರತಿನಿಧಿಸ್ತಾರೆ ಅಂತಾ ಗೊಂದಲ ಆಯ್ತು. ಹಿಂದುಳಿದ ವರ್ಗಗಳ ಒಕ್ಕೂಟಕ್ಕೆ ಮಾತ್ರ ಅವಕಾಶ ಇದ್ದದ್ದು ಎಂದು ಅವರು ಹೇಳಿದರು.

ನಿಮ್ಮ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲದೇ ಇರಬಹುದು ಆದರೆ ಸಂವಾದಕ್ಕೆ ಎಮ್​ಬಿಸಿಯಲ್ಲಿ ನಮ್ಮ ಐವರ ಹೆಸರನ್ನ ಸೆಲೆಕ್ಟ್ ಮಾಡಲಾಗಿದೆ ಅಂತಾ ಹೇಳಿದ್ವಿ. ನಮಗೆ ಸಂವಾದಕ್ಕೆ ಟ್ರೈನಿಂಗ್ ನೀಡಲಾಗಿದೆ. ಆದರೂ ನೂಕಾಡಿ ತಳ್ಳಾಡಿ ದೌರ್ಜನ್ಯಕ್ಕೆ ಒಳಗಾಗಿ ಒಳಗಡೆ ಹೋದ್ವಿ. ರಾಹುಲ್ ಸರ್ ಕುಳಿತುಕೊಂಡಿದ್ದ ಸ್ವಲ್ಪ ದೂರದಲ್ಲಿ ನಾವು ಕುಳಿತಿದ್ವಿ. ರೇವಣ್ಣ ಪುನಃ ಬಂದು ನೀವ್ಯಾರು ಅಂತಾ ಪ್ರಶ್ನೆ ಮಾಡಿದ್ರು‌. ಸರ್ ನಾನು ಕಾಡುಗೊಲ್ಲ ಸಮುದಾಯದದಿಂದ ಬಂದಿದ್ದೇನೆ. ಕೋಲೆ ಬಸವ ಸಮುದಾಯದಿಂದ ಶ್ರೀನಿವಾಸ್​ರವರು ಬಂದಿದ್ದಾರೆ ಎಂದು ಹೇಳಿದೆ. ನಾವು ಮೋಸ್ಟ್ ಬ್ಯಾಕ್ ವರ್ಡ್ ಕಮ್ಯುನಿಟಿ ಅಂತಾ ಒಂದು ಪದ ಹೇಳಿದ ತಕ್ಷಣ ಅವರು ಕೋಪಿಸಿಕೊಂಡರು.

ಗೆಳೆಯ ಶ್ರೀನಿವಾಸ್​ರನ್ನ ಎತ್ತಿ ಹಿಡಿದು ಹಿಂದೆ ನಿಲ್ಲು ಹೋಗೆಂದು ಗದರಿದರು. ಇಷ್ಟೆಲ್ಲಾ ಘಟನೆ ನಡೆಯಬೇಕಾದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ನೋಡ್ತಾ ಇದ್ದರು. ಆಗ ಅವರು ನಿವ್ಯಾರು ಅಂತಾ ಪ್ರಶ್ನೆ ಮಾಡಿದ್ರು‌. ಸಿದ್ದರಾಮಯ್ಯರವರಿಗೆ ನಾವು ಮೊಸ್ಟ್ ಬ್ಯಾಕವರ್ಡ್ ಕಮ್ಯನಿಟಿಯಿಂದ ಬಂದಿದ್ದೇವೆ ಅಂತಾ ಹೇಳಿದ್ವಿ. ಅಷ್ಟರಲ್ಲಿ ಸಂವಾದ ಶುರುವಾಯಿತು. ಸಂವಾದದಲ್ಲಿ ನಮಗೆ ಅವಕಾಶ ನೀಡಲಿಲ್ಲ. ಪ್ರೋಪಸರ್ ರವಿವರ್ಮಕುಮಾರ್ ಒಂದಷ್ಟು ವಿಚಾರ ಹೇಳಿದ್ರು. ಆದರೆ ಅದರಲ್ಲಿ ನಮ್ಮನ್ನ ಪ್ರತಿನಿಧಿಸುವ ಅಂಶ ಇರಲಿಲ್ಲ‌. ತಳಸಮುದಾಯದ ವ್ಯಕ್ತಿಗಳು ಹೇಳಿಕೊಂಡರೆ ಮಾತ್ರ ಗೊತ್ತಾಗುತ್ತೆ‌. ಆದರೆ ರವಿವರ್ಮಕುಮಾರ್ ಹೇಗೆ ಹೇಳಿದ್ರು ಗೊತ್ತಿಲ್ಲ‌. ಈಗಲೂ ಕೂಡ ಅರಗಿಸಿಕೊಳ್ಳಲು ಆಗ್ತಿಲ್ಲ‌. ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುವಂತಹ ಸಿದ್ದರಾಮಯ್ಯ ಬೆಂಬಲಿಗರು. ಸ್ವತಃ ಸಿದ್ದರಾಮಯ್ಯನವರು ನಮ್ಮ ಸಮುದಾಯದ ಹೆಸರನ್ನ ಕೇಳಿದ ಸಂದರ್ಭದಲ್ಲಿ ಹತ್ತಿರ ಕರೆಯುತ್ತಾರೆಂದು ಅಂದುಕೊಂಡು ಸಂತೋಷ ದಿಂದ ಹೋಗಿದ್ವಿ. ಸಿದ್ದರಾಮಯ್ಯರವರು ತಡೆಯುತ್ತರೆನ್ನೋ ಭಾವನೆ ಇತ್ತು ಅದು ಆಗ್ಲಿಲ್ಲ ಎನ್ನೋ ನೋವಿದೆ ಎಂದು ಹೇಳಿದರು.

ಸಂವಾದ ಬಳಿಕ ಕನಿಷ್ಠ ಮನವಿ ಕೊಟ್ಟು ರಾಹುಲ್ ಗಾಂಧಿ ಜೊತೆ ಪೋಟೊ ತೆಗೆಸಿಕೊಳ್ಳಲು ಹೋದಾಗಲೂ ಸಿದ್ದರಾಮಯ್ಯ ಸಾಕು ನಡಿರಪ್ಪ ಎಂದು ದೂಕಿದರು. ಇಂತಹ ಸನ್ನಿವೇಶದಲ್ಲಿ ನಮಗೆ ವಾತ್ಸಲ್ಯ, ಪ್ರೀತಿ, ಆತ್ಮಸ್ಥೈರ್ಯದ ನಾಯಕತ್ವವೇ ಹಿನ್ನೆಲೆಗೆ ನೂಕಿದರೆ, ಮುಂದೆ ನಮ್ಮಂತ ಅಲಕ್ಷಿತ ತಳಸಮುದಾಯಗಳ ಪಾಡೇನು. ಎಲ್ಲಾ ತಳಸಮುದಾಯದ ಬಗ್ಗೆ ಮಾತನಾಡ್ತಿದ್ದೇನೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ ಕೊಡುತ್ತೆ ಎನ್ನೊ ಉದ್ದೇಶದಿಂದ ಬಂದಿದ್ದು.ಇದು ನೋವಾಗಿದೆ. ಆದರೆ ಇದ್ಯಾವ ರೀತಿ ಕಾಂಗ್ರೆಸ್ ನೋವು ಸ್ಪಂದಿಸುತ್ತೋ ಗೊತ್ತಿಲ್ಲ ಎಂದು ಕಾಡುಗೊಲ್ಲ ಮುಖಂಡ ನಾಗಣ್ಣ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Wed, 26 October 22

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​