ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

| Updated By: ವಿವೇಕ ಬಿರಾದಾರ

Updated on: Jun 01, 2022 | 7:24 PM

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ತಿಪಟೂರು ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು
ಶಿಕ್ಷಣ ಸಚಿವ ಬಿ ಸಿ ನಾಗೇಶ
Follow us on

ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಮನೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಿಗೆ ಹಾಕಿದ್ದ ಕೆಲ NSUI ಕಾರ್ಯಕರ್ತರನ್ನು ತಿಪಟೂರು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ NSUI ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ತಿಪಟೂರಿನ ಕೋರ್ಟ್ ಮುಂಭಾಗ ಟೀ‌ ಕುಡಿಯುತ್ತಿದ್ದಾಗ NSUI ಕಾರ್ಯಕರ್ತರ ಮೇಲೆ BJP ಕಾರ್ಯಕರ್ತರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡದ   ತಿಪಟೂರು ಠಾಣೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.  ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: ಜಿಡಿಪಿ ಅಂದರೇನು ಎಂಬುದರಿಂದ ಮೊದಲುಗೊಂಡು ದೇಶದ ಹಲವು ಆರ್ಥಿಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಮನೆಗೆ ಮುತ್ತಿಗೆ ಹಿನ್ನೆಲೆ ಗೃಹ ಸಚಿವ ಆರಗ (Araga Jnanendra) ಜ್ಞಾನೇಂದ್ರ ತುರ್ತು ಸುದ್ದಿಗೋಷ್ಠಿ ನಡೆಸಿ ಇವತ್ತು ಮಧ್ಯಾಹ್ನ ಬಿಸಿ ನಾಗೇಶ್ ಅವರ ತಿಪಟೂರಿನಲ್ಲಿರುವ ಮನೆಗೆ ನುಗ್ಗಿದ್ದಾರೆ. ಕಾಂಗ್ರೆಸ್ ನ ಕೆಲ ಕಾರ್ಯಕರ್ತರು ಮನೆಗೆ ನುಗ್ಗಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ನಾಗೇಶ್ ಮನೆಗೆ ಬೆಂಕಿ ಹಾಕೋದಿಕ್ಕೆ ಮುಂದಾಗಿದ್ರು ಅನ್ನೋ ಮಾಹಿತಿ ಇದೆ. ಈಗಾಗಲೇ 15 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಎರಡು ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಈ ರೀತಿಯಾದ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲಾ ಎಂದು ಕಿಡಿ ಕಾರಿದ್ದಾರೆ.

ಇದನ್ನು ಓದಿ: ರಾಜ್ಯಸಭಾ ಚುನಾವಣೆ: ಮಹಾರಾಷ್ಟ್ರಕ್ಕೆ ಅಶ್ವಿನಿ ವೈಷ್ಣವ್, ಕರ್ನಾಟಕಕ್ಕೆ ಕಿಶನ್ ರೆಡ್ಡಿಯ​​ನ್ನು ಉಸ್ತುವಾರಿಯಾಗಿ ನೇಮಿಸಿದ ಬಿಜೆಪಿ

ಈ ಪ್ರಕರಣದ ಹಿಂದೆ ಯಾರಿದ್ದಾರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಬೆಂಗಳೂರಿಂದ ಐವರು ದಾವಣಗೆರೆಯಿಂದ ಮೂವರು, ಹಾಸನದಿಂದ ಒಬ್ಬರು, ತುಮಕೂರಿನಿಂದ ಒಬ್ಬರು‌ NSUI ಮುಖಂಡರು ಬಂದಿದ್ದಾರೆ. ಪ್ರೀಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಇವಾಗ ಪೊಲೀಸರು ಕಾನೂನಿನ ಪಾಠ ಮಾಡ್ತಾರೆ. ದಾವಣಗೆರೆಯ NSUI ಉಪಾಧ್ಯಕ್ಷ ಫೈಲ್ವಾನ್ ಅಲಿ ರೇಹಮಾನ್ ಎಂಬಾತ ಬಂದಿದ್ದಾನೆ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ