ಶಿಕ್ಷಣ ಸಚಿವರ ಮನೆಗೆ NSUI ಮುತ್ತಿಗೆ ಯತ್ನ; 22 ಆರೋಪಿಗಳ ಸೆರೆ, ನಿನ್ನೆಯ ಘಟನೆ ಖಂಡಿಸಿ ಇಂದು ಬಿಜೆಪಿಯಿಂದ ಪ್ರತಿಭಟನೆ

ಶಿಕ್ಷಣ ಸಚಿವರ ಮನೆಗೆ NSUI ಮುತ್ತಿಗೆ ಯತ್ನ; 22 ಆರೋಪಿಗಳ ಸೆರೆ, ನಿನ್ನೆಯ ಘಟನೆ ಖಂಡಿಸಿ ಇಂದು ಬಿಜೆಪಿಯಿಂದ ಪ್ರತಿಭಟನೆ
ಬಿ.ಸಿ.ನಾಗೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ

ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಕೃತ್ಯವನ್ನ ಖಂಡಿಸಿ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ತುಮಕೂರಿನ ಡಿಸಿ ಕಚೇರಿ ಬಳಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಲಿದೆ.

TV9kannada Web Team

| Edited By: Ayesha Banu

Jun 02, 2022 | 3:18 PM

ತುಮಕೂರು: ಶಿಕ್ಷಣ ಸಚಿವರ ಮನೆಗೆ NSUI ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಹಿನ್ನೆಲೆ ಇಂದು ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ‌ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ದತೆ ಮಾಡಿಕೊಂಡಿದೆ. ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಕೃತ್ಯವನ್ನ ಖಂಡಿಸಿ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ತುಮಕೂರಿನ ಡಿಸಿ ಕಚೇರಿ ಬಳಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಲಿದೆ.

NSUI ಕಾರ್ಯಕರ್ತರ ವಿರುದ್ಧ FIR ದಾಖಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸಕ್ಕೆ NSUI ಮುತ್ತಿಗೆ ಹಿನ್ನೆಲೆ ಮುತ್ತಿಗೆ ಹಾಕಿದ್ದ NSUI ಕಾರ್ಯಕರ್ತರ ವಿರುದ್ಧ FIR ದಾಖಲಾಗಿದೆ. ತುಮಕೂರು ಜಿಲ್ಲೆ ತಿಪಟೂರು ನಗರ ಠಾಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಮುರುಳೀಧರ್ ದೂರಿನನ್ವಯ FIR ದಾಖಲಾಗಿದೆ. ಒಟ್ಟು 20ಕ್ಕೂ ಹೆಚ್ಚು ಜನರ ಗುಂಪು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭಾರತದ ಗೋಧಿಯಲ್ಲಿ ಇಂಡಿಯನ್ ರುಬೆಲ್ಲಾ ಸಸ್ಯರೋಗ ಪತ್ತೆ, ರಫ್ತಾಗಿದ್ದ ಸರಕು ವಾಪಸ್ಸು ಕಳಿಸಿತು ಟರ್ಕಿ

ಬಿ.ಸಿ.ನಾಗೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ ತಿಪಟೂರಿನಲ್ಲಿ ಶಿಕ್ಷಣ ಇಲಾಖೆ ಸಚಿವರ ನಿವಾಸಕ್ಕೆ ಎನ್ಎಸ್ಯುಐ ಮುತ್ತಿಗೆ ಹಿನ್ನೆಲೆ ಬಿ.ಸಿ.ನಾಗೇಶ್ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಿನ್ನೆ ಮಧ್ಯಾಹ್ನ NSUI ಯಿಂದ ಪ್ರತಿಭಟನೆ ನಡೆಸಿ ಮುತ್ತಿಗೆ ಪ್ರಯತ್ನ ಮಾಡಲಾಗಿತ್ತು. ಆರ್ಎಸ್ಎಸ್ ಚಡ್ಡಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿತ್ತು. ಹೀಗಾಗಿ ತಿಪಟೂರು ನಗರ ಪೊಲೀಸರು ಸಚಿವರ ಮನೆಗೆ ಹೆಚ್ಚಿನ ಭದ್ರತೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಿಪಟೂರು ನಗರ ಪೊಲೀಸರಿಂದ ಈವರೆಗೆ 22 ಆರೋಪಿಗಳ ಸೆರೆ ಘಟನೆ ಸಂಬಂಧ ತಿಪಟೂರು ನಗರ ಪೊಲೀಸರು ಈವರೆಗೆ 22 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರು ಹಾಸನ, ದಾವಣಗೆರೆ, ಬೆಂಗಳೂರು, ತುಮಕೂರಿನವರಾಗಿದ್ದು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಹಿಂದೂ ಸಮುದಾಯದ ಒಟ್ಟು 15 ಮಂದಿ ಹಾಗೂ ಮುಸ್ಲಿಂ ಸಮುದಾಯದ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದೆ. ಅದ್ರಲ್ಲೂ ಪಠ್ಯ ಪರಿಷ್ಕರಣೆ ವಿವಾದ ಸಂಬಂಧ ಜೂನ್ 01ರಂದು NSUI ಸಂಘಟನೆ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಕೆಲ ಕಾರ್ಯಕರ್ತರನ್ನ ತಿಪಟೂರು ಪೊಲೀಸರು ಬಂಧಿಸಿದ್ರು. ಆದ್ರೆ ಪ್ರತಿಭಟನೆ ಟೈಮಲ್ಲಿ NSUI ಕಾರ್ಯಕರ್ತರ ಮೇಲೆ BJP ಕಾರ್ಯಕರ್ತರು ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು. ಬಳಿಕ ನಾಗೇಶ್ ಮನೆ ಮುಂದೆ ಕಾರ್ಯಕರ್ತರು RSSನ ಚಡ್ಡಿ ಸುಟ್ಟು ಆಕ್ರೋಶ ಹೊರಹಾಕಿದ್ರು. ನಾಗೇಶ್ ನಿವಾಸಕ್ಕೆ ಭೇಟಿ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದ್ರು. ಇದನ್ನೂ ಓದಿ: 21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ

ಇನ್ನು ಈ ಘಟನೆ ಸಂಬಂಧ ಟಿವಿ9ಗೆ ಸಚಿವ ನಾಗೇಶ್ ಪುತ್ರ ವಿಶ್ವದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆಗೆ NSUI ನವರು ಬಂದಿದ್ದರು. ಆರ್​ಎಸ್​ಎಸ್ ಚಡ್ಡಿಗೆ ಬೆಂಕಿ ಹಚ್ಚಿದ್ದರು. ನಾವು ಪೊಲೀಸರಿಗೆ ಫೋನ್ ಮಾಡಿದ್ವಿ. ಅಷ್ಟರಲ್ಲಿ ಪೊಲೀಸರು ಅವರನ್ನು ತಡೆದು ಕರೆದುಕೊಂಡು ಹೋದರು. ಪೊಲೀಸರು ಇಲ್ಲಾಂದ್ರೆ ಮನೆಗೂ ನುಗ್ಗಿ ಬೆಂಕಿ ಹಚ್ಚುತ್ತಿದ್ದರೇನೊ. ಏನೇ ಆದ್ರೂ ಮನೆಗೆ ನುಗ್ಗಿದ್ದೂ ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಚಿವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಭೇಟಿ ಶಿಕ್ಷಣ ಸಚಿವ ನಾಗೇಶ್ ಮನೆಗೆ NSUI ಮುತ್ತಿಗೆ ಹಿನ್ನೆಲೆ ಸಚಿವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಭೇಟಿ ನೀಡಿ ಸಚಿವರ ಪುತ್ರನ ಜೊತೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada