ಬಸ್-ಬೈಕ್ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಅಪ್ಪ-ಮಗ ಸಾವು
ತುಮಕೂರು: ಶಿರಾ ತಾಲ್ಲೂಕಿನ ಕಂಬದಹಳ್ಳಿ ಗೇಟ್ ಬಳಿ ದಾರುಣ ಘಟನೆಯಂದು ನಡೆದಿದೆ. ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ ಅಪ್ಪ ಮಗ ಸಾವಿಗೀಡಾಗಿದ್ದಾರೆ. ಬುಕ್ಕಾಪಟ್ಟಣ ಕಡೆಯಿಂದ ಬರುತ್ತಿದ್ದ ಬಸ್ ಮತ್ತು ಶಿರಾ ಕಡೆಯಿಂದ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿವೆ. ತಂದೆ ತಿಮ್ಮಣ್ಣ ಮತ್ತು ಅವರ ಪುತ್ರ ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿರಾ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರು: ಶಿರಾ ತಾಲ್ಲೂಕಿನ ಕಂಬದಹಳ್ಳಿ ಗೇಟ್ ಬಳಿ ದಾರುಣ ಘಟನೆಯಂದು ನಡೆದಿದೆ. ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ ಅಪ್ಪ ಮಗ ಸಾವಿಗೀಡಾಗಿದ್ದಾರೆ.
ಬುಕ್ಕಾಪಟ್ಟಣ ಕಡೆಯಿಂದ ಬರುತ್ತಿದ್ದ ಬಸ್ ಮತ್ತು ಶಿರಾ ಕಡೆಯಿಂದ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿವೆ. ತಂದೆ ತಿಮ್ಮಣ್ಣ ಮತ್ತು ಅವರ ಪುತ್ರ ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿರಾ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.