Bribe: 2015ರಲ್ಲಿ ಲಂಚ ಕೇಳಿ ಸಿಕ್ಕಿಬಿದ್ದಿದ್ದ ಸರ್ವೆಯರ್‌ ಎಂ.ಜಿ.ರಂಗರಾಜುಗೆ 4 ವರ್ಷ ಜೈಲು ಶಿಕ್ಷೆ

ಸದ್ಯ ಲಂಚ ಕೇಳಿದ್ದ ಸರ್ವೆಯರ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಅಂತಾ ಕೋರ್ಟ್ ಆದೇಶ ನೀಡಿದೆ. ತುಮಕೂರಿನ 7ನೇ ಅಧಿಕ ಮತ್ತು ವಿಶೇಷ ನ್ಯಾಯಾಲಯದಿಂದ ವಿಶೇಷ ತೀರ್ಪು ನೀಡಲಾಗಿದೆ.

Bribe: 2015ರಲ್ಲಿ ಲಂಚ ಕೇಳಿ ಸಿಕ್ಕಿಬಿದ್ದಿದ್ದ ಸರ್ವೆಯರ್‌ ಎಂ.ಜಿ.ರಂಗರಾಜುಗೆ 4 ವರ್ಷ ಜೈಲು ಶಿಕ್ಷೆ
ಜೈಲು (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Dec 01, 2021 | 11:44 AM

ತುಮಕೂರು: ರೈತನಿಂದ ಲಂಚ ಪಡೆಯುವಾಗ ಸರ್ವೆಯರ್ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದ ಘಟನೆ 2015ರ ಏಪ್ರಿಲ್ 15 ರಂದು ನಡೆದಿತ್ತು. ಸದ್ಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು, ತನಿಖೆಯಲ್ಲಿ ಆರೋಪ ಸಾಭೀತಾಗಿದೆ.

ಸದ್ಯ ಲಂಚ ಕೇಳಿದ್ದ ಸರ್ವೆಯರ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಅಂತಾ ಕೋರ್ಟ್ ಆದೇಶ ನೀಡಿದೆ. ತುಮಕೂರಿನ 7ನೇ ಅಧಿಕ ಮತ್ತು ವಿಶೇಷ ನ್ಯಾಯಾಲಯದಿಂದ ವಿಶೇಷ ತೀರ್ಪು ನೀಡಲಾಗಿದೆ. ಸರ್ವೆಯರ್ ಎಂ.ಜಿ.ರಂಗರಾಜು ಶಿಕ್ಷೆಗೋಳಗಾದ ಅಪರಾಧಿಯಾಗಿದ್ದು, ಕಳೆದ 2015 ರಲ್ಲಿ ಏಪ್ರಿಲ್ 15 ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಮೀನು ಹದ್ದುಬಸ್ತ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ರೈತನೊಬ್ಬನಿಂದ ಹತ್ತು ಸಾವಿರ ಲಂಚಪಡೆಯುವಾಗ ಲೋಕಾಯುಕ್ತ ದಾಳಿ ಮಾಡಿದ್ದರು. ಸದ್ಯ ಆರೋಪ ಸಾಬಿತಾದ ಕಾರಣ ನ್ಯಾಯಾಧೀಶರಾದ ಸುದೀಂದ್ರನಾಥ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರಿ ವಕೀಲ ಎನ್ ಬಸವರಾಜು ವಾದ ಮಂಡಿಸಿದ್ದರು.

ವರದಿ: ಮಹೇಶ್, ಟಿವಿ9 ತುಮಕೂರು

ಇದನ್ನೂ ಓದಿ: ಈ ರಾಜ್ಯಗಳಲ್ಲಿ ಲಸಿಕೆ ಹಾಕದವರಿಗೆ ಉಚಿತ ಕೊವಿಡ್ ಚಿಕಿತ್ಸೆ ಇಲ್ಲ, ಪಡಿತರ ಮತ್ತು ಪಿಂಚಣಿಯೂ ಸಿಗಲ್ಲ; ಯಾವ ರಾಜ್ಯ ಯಾವ ರೀತಿಯ ಕ್ರಮ ಕೈಗೊಂಡಿದೆ?

ಇಂದಿನಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ; ಚುಮು ಚುಮು ಚಳಿ ನಡುವೆ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು

Published On - 11:43 am, Wed, 1 December 21