ಜಾತ್ರೆ ರದ್ದಾದ್ರೂ ದೇವರಿಗೆ ಮದ್ಯ ನೈವೇದ್ಯ ಮಾಡಿ ತೀರ್ಥ ರೂಪದಲ್ಲಿ ಮದ್ಯ ಸೇವಿಸಿದ ಭಕ್ತರು
ಕೊವಿಡ್ನಿಂದ ಜಾತ್ರೆ ರದ್ದಾದ್ರೂ ದೇವರಿಗೆ ಮದ್ಯ ನೈವೇದ್ಯ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ನೈವೈದ್ಯ. ಜಾತ್ರೆ ರದ್ದಾದ್ರೂ ತೀರ್ಥ ರೂಪದಲ್ಲಿ ಮದ್ಯ ಸೇವಿಸಿದ ಭಕ್ತರು.
ತುಮಕೂರು: ಅದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಆ ಜಾತ್ರೆಯಲ್ಲಿ ಆ ದೇವರಿಗೆ ಮದ್ಯನೇ ತೀರ್ಥ ನೈವೇದ್ಯ. ಮದ್ಯ ಕಂಡರೇ ಆ ದೇವರಿಗೆ ಎಲ್ಲಿಲ್ಲದ ಪ್ರೀತಿ. ಪ್ರತಿ ವರ್ಷ ಕೂಡ ಮದ್ಯ ನೈವೇದ್ಯ ಮಾಡಿಸಿ ಬಂದ ಭಕ್ತರಿಗೆ ವಿತರಣೆ ಮಾಡುವ ಪದ್ದತೆ ಸಂಪ್ರದಾಯವಿದೆ. ಮದ್ಯದ ಜೊತೆಗೆ ಕೋಳಿ ಮಾಂಸ ಕಡ್ಲೆಪುರಿ ಕೂಡ ನೈವೇದ್ಯ ಮಾಡಲಾಗುತ್ತದೆ. ಸದ್ಯ ಜಾತ್ರೆ ಆಚರಿಸಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಹಾಗೂ ಕೋಳಿಗಳನ್ನು ಸಂಗ್ರಹಿಸಲಾಗಿತ್ತು. ಇಂದು ಜಾತ್ರೆ ಮಾಡಿ ಭರ್ಜರಿಯಾಗಿ ವಿತರಣೆ ಮಾಡಬೇಕಿತ್ತು. ಆದರೆ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜಾತ್ರೆಗೆ ನಿರ್ಬಂಧ ವಿದಿಸಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯ ಓಡೇಬೈರವೇಶ್ವರನ ಜಾತ್ರೆಯನ್ನ ತಾಲೂಕು ಆಡಳಿತ ರದ್ದು ಮಾಡಿದೆ. ಜನರು ಕೂಡ ಸೇರಿದಂತೆ ಆದೇಶ ಮಾಡಲಾಗಿದೆ. ಆದರೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಮದ್ಯ ಕೋಳಿಮಾಂಸ,ಕಡ್ಲೆಪುರಿಯನ್ನ ನೈವೇದ್ಯ ಮಾಡಿ ಬಳಿಕ ಬಂದ ಭಕ್ತರಿಗೆ ವಿತರಣೆ ಮಾಡಿದ್ದಾರೆ. ಮದ್ಯ ಅಂದರೇ ಸಾಕು ಜನರು ಬರುವುದು ಸಹಜ, ಹೀಗಾಗಿ ಸಂಗ್ರಹವಾಗಿದ್ದ ಮದ್ಯ ವೆಸ್ಟ್ ಆಗಬಾರದು ಅಂತಾ ಬಂದವರಿಗೆ ವಿತರಿಸಲಾಗಿದೆ. ಕಾಮನ್ ಆಗಿ ಹೂ ಹಣ್ಣು ಹವಲಕ್ಕಿ ಬಾಳೆಹಣ್ಣು ನೈವೇದ್ಯ ಮಾಡುವುದು ಸಹಜ ಆದರೆ ಇಲ್ಲಿ ಮದ್ಯ ನೈವೇದ್ಯ ಮಾಡಿ ಭಕ್ತರಿಗೆ ನೀಡಿರುವುದು ನಿಜಕ್ಕೂ ಸಂತಸ.