ತುಮಕೂರು, ಮಾರ್ಚ್ 1: ಗ್ಯಾರಂಟಿಗಳು ಡೂಪ್ಲಿಕೇಟ್ ಅಂತ ಹೇಳುವುದಾದರೆ ನಿಮ್ಮ ಕಾರ್ಯಕರ್ತರು ನಮಗೆ ಗ್ಯಾರಂಟಿ ಬೇಡ ಅಂತ ಬರೆದು ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿಪಕ್ಷನಾಯಕ ಆರ್.ಅಶೋಕ್ಗೆ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಕುಣಿಗಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಅವರಿಗೆ ಹೇಳ ಬಯಸುತ್ತೇನೆ. ಈ ಯೋಜನೆ ತಪ್ಪಿಸಲು ಸಾಧ್ಯವಾಗಲಿಲ್ಲ. ಬಿಜೆಪಿ, ಜನತಾದಳ ವೋಟ್ ಕೇಳಲು ಬಂದಾಗ ಡಿಕೆ ಶಿವಕುಮಾರ್ ಈ ಸಮಾಜದ ಕೆಲಸ ಮಾಡಿದ್ದಾರಾ ಅಂತ ಕೇಳಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳದ ವಿರುದ್ದ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆತ್ಮ ವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇನೆ. ಕಾವೇರಿ ನೀರು ನಿಮ್ಮೂರಿಗೆ ಇಡೀ ಕ್ಷೇತ್ರದ ತುಂಬ ಹರಿಯಲು 1 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದೇವೆ. ಯಡಿಯೂರಪ್ಪ, ಮಾಧುಸ್ವಾಮಿ, ಕುಮಾರಸ್ವಾಮಿಗೆ ಹೇಳಲು ಬಯಸುತ್ತೇನೆ. ಲಿಂಕ್ ಕೆನಾಲ್ ಯೋಜನೆಯನ್ನು ಬದಲಾಯಿಸಿದ್ದರು. ನಾನು ಆಗಾಗ ಹೇಳುತ್ತಿದ್ದೆ ನಾವು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು.
ಬಡತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕುಮಾರಸ್ವಾಮಿ ತೆನೆಹೊತ್ತ ಮಹಿಳೆ ಬಿಸಾಕಿ ಕಮಲ ಹಿಡಿದುಕೊಂಡರು. ಕೆರೆಯಲ್ಲಿ ಕಮಲ ಇರಬೇಕು. ಹೊಲದಲ್ಲಿ ತೆನೆ ಇರಬೇಕು. ಅರಳಿದ ಕಮಲ ಉದುರಿ ಹೊಯ್ತು. ತೆನೆ ಹೊತ್ತ ಮಹಿಳೆ ಬಿಸಾಕಿ ಹೊದರು. ಹಸ್ತ ದಾರಿಯಲ್ಲಿ ನಿಂತು ದಾನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ, 50 ಕೋಟಿ ರೂ. ಆಮಿಷ: ಸಿಎಂ ಸಿದ್ದರಾಮಯ್ಯ
ಹಸ್ತಕ್ಕೆ ಸಹಾಯ ಮಾಡವ ಮೂಲಕ ಡಿ.ಕೆ ಸುರೇಶ್ರನ್ನು ಗೆಲ್ಲಿಸಬೇಕು. ತುಮಕೂರಿನ ಮಹಾಜನತೆ ಬಗ್ಗೆ ಅಪಾರವಾದ ವಿಶ್ವಾಸವಿದೆ. ಮುದ್ದಹನುಮೇಗೌಡರಿಗೆ ಟ್ರಾಫಿಕ್ ಹೆಚ್ಚು ಕಡಿಮೆ ಆಗಿ ಹೊಯ್ತು. ಅವರು ವಿದ್ಯಾವಂತರು, ಬುದ್ದಿವಂತ ಇದ್ದರು ಆದರೂ ಯಾಮಾರಿದ್ದಾರೆ. ಬಿಜೆಪಿಗೆ ಹೋದರೆ ಅವರಿಗೆ ಟಿಕೆಟ್ ಕೊಡಲಿಲ್ಲ. ಕುಣಿಗಲ್ಗೆ ಮಾಧುಸ್ವಾಮಿ ನೀರು ನಿಲ್ಲಿಸಿದ್ದರು. ಯಾರು ಧ್ವನಿ ಎತ್ತಲಿಲ್ಲ. ಈಗ ಎರಡು ಪಕ್ಷಗಳು ಅಲೆಯನ್ಸ್ ಮಾಡಿಕೊಳ್ಳುತ್ತಿದ್ದಾರೆ. ಏನಿಕೆ ಮಾಡಿಕೊಂಡಿದ್ದಾರೆ. ಪುಟಣ್ಣ ಗೆದ್ದರು, ರಾಜ್ಯ ಸಭಾ ಚುನಾವಣೆ ಗೆದ್ದರು. ಈ ಹಿಂದೆ ಏನೆಲ್ಲಾ ಆಗಿದೆ ಅಂತಾ ಗೊತ್ತಿದೆ.
ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, 3.71 ಲಕ್ಷ ಕೋಟಿ ರೂ. ಬಜೆಟ್ನ್ನು ಸಿಎಂ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ಪರವಾದ ಕೆಲಸ ಮಾಡುತ್ತಿದೆ. ನೀರಾವರಿಯಲ್ಲಿ ಡಿಕೆ ಶಿವಕುಮಾರ್ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಕುಣಿಗಲ್, ಮಾಗಡಿ ತಾಲ್ಲೂಕಿನ 66 ಕೆರೆ ಗಳಿಗೆ ನೀರು ಒದಗಿಸುವ ಕಾಮಗಾರಿಯಿದು. 970 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಹಾಸನ: ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಘೋಷಣೆ
ಗುಬ್ಬಿಯಿಂದ ಲಿಂಕ್ ಕೆನಾಲ್ ಮಾಡಲಾಗುತ್ತಿದೆ. ನಾವು ಲೋಕಸಭೆಗೆ ಚುನಾವಣೆಗೆ ತಯಾರಿ ಆಗಿ ಎಂದರೆ. ನಾನು 2 ವರ್ಷದಿಂದ ಚುನಾವಣೆಗೆ ತಯಾರಿ ಮಾಡುತ್ತಿದ್ದೇನೆ ಅಂತಿದ್ದಾರೆ ಡಿ.ಕೆ ಸುರೇಶ್. ಮಾಗಡಿ, ಕನಕಪುರ ಅಭಿವೃದ್ಧಿ ಮಾಡಿ. ತುಮಕೂರು ಕೂಡ ನಿಮಗೆ ಸೇರಿದ್ದು, ಅದನ್ನು ಅಭಿವೃದ್ಧಿ ಮಾಡಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 pm, Fri, 1 March 24