ಮಳೆರಾಯನ ಆರ್ಭಟ; ಅಪಾಯದ ಸುಳಿಯಲ್ಲಿ ಸುವರ್ಣ ಮುಖಿ ನದಿ ಸೇತುವೆ, ಆತಂಕದಲ್ಲಿ ಸ್ಥಳೀಯ ರೈತರು

| Updated By: ಸಾಧು ಶ್ರೀನಾಥ್​

Updated on: Dec 06, 2021 | 10:41 AM

tumakuru rains: ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿ ಅವೈಜ್ಞಾನಿಕ, ಗೋಕುಲದ ಕೆರೆಯ ಕೋಡಿ ನೀರು ಹರಿಯುವ ರಾಜಕಾಲುವೆ ಮುಚ್ಚಿದ್ದಾರೆ. ಹೀಗಾಗಿ ಮಳೆ ಹೆಚ್ಚಾದರೆ ರೈತರ ಜಮೀನುಗಳ ಮೂಲಕ ಕೆರೆಯ ನೀರು ಹರಿಯಲಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಸೇತುವೆಗೆ ಹಾಗೂ ರೈತರಿಗೆ ತೀವ್ರ ತೊಂದೆರೆಯಾಗಲಿದೆ. ಸರ್ಕಾರ ಇದನ್ನ‌ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಮಳೆರಾಯನ ಆರ್ಭಟ; ಅಪಾಯದ ಸುಳಿಯಲ್ಲಿ ಸುವರ್ಣ ಮುಖಿ ನದಿ ಸೇತುವೆ, ಆತಂಕದಲ್ಲಿ ಸ್ಥಳೀಯ ರೈತರು
ಮಳೆರಾಯನ ಆರ್ಭಟ; ಅಪಾಯದ ಸುಳಿಯಲ್ಲಿ ಸುವರ್ಣ ಮುಖಿ ನದಿ ಸೇತುವೆ, ಆತಂಕದಲ್ಲಿ ಸ್ಥಳೀಯ ರೈತರು
Follow us on

ತುಮಕೂರು: ರೈತರಿಗೆ ನೀರಾವರಿ ಆಸರೆಯಾಗಿರುವ ಚೆಕ್ ಕಂ ಬ್ರಿಡ್ಜ್ ಗೆ ಅಪಾಯ ಎದುರಾಗಿದೆ. ಇತ್ತಿಚೆಗೆ ಸುರಿದ ಮಳೆರಾಯನ ಆರ್ಭಟಕ್ಕೆ ಸೇತುವೆ ಅಪಾಯಕ್ಕೆ ಸಿಲುಕಿದೆ. ಸೇತುವೆಯ ಬಲಭಾಗದಲ್ಲಿ ಸುಮಾರು ನೂರು ಅಡಿ ವಿಸ್ತೀರ್ಣದ ತಡೆಗೋಡೆ ಕುಸಿದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗುಂಡಿನ ಪಾಳ್ಯ ಸಮೀಪದ ಸುವರ್ಣ ಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗೆ ಸಣ್ಣ ನೀರಾವರಿ ಇಲಾಖೆಯಿಂದ ತುರ್ತಾಗಿ ಪುನಶ್ಚೇತನ ಅಭಿವೃದ್ಧಿ ಮಾಡಬೇಕಿದೆ. ಈ ಬ್ರಿಡ್ಜ್ ನ್ನು 2016-17 ರಲ್ಲಿ ನಿರ್ಮಿಸಲಾಗಿತ್ತು. ಬ್ರಿಡ್ಜ್ ನಿರ್ಮಾಣದಿಂದ ನೂರಾರು ರೈತರ ಬೋರವೆಲ್ ಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಆದರೆ ತಡೆಗೋಡೆ ಕುಸಿದಿರುವ ಕಾರಣ ರೈತರಲ್ಲಿ ಭೀತಿ ಶುರುವಾಗಿದೆ‌.

ರೈತರಿಗೆ ಆತಂಕ:
ಇನ್ನೂ ಸೇತುವೆ ಬಲಭಾಗದ ತಡೆಗೋಡೆ ನಿರಂತರ ಮಳೆಗೆ ಕುಸಿದಿರುವ ಕಾರಣ ಗುಂಡಿನಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅರ್ಧ ಭಾಗ ನದಿಗೆ ಜಾರಿದೆ. ಇದರಿಂದ ಮೂಡ್ಲಪಣ್ಣೆ ರಸ್ತೆಯು ಬಿರುಕು ಬಿಟ್ಟಿರುವ ಪರಿಣಾಮ ರೈತರು ಮತ್ತು ವಿದ್ಯಾರ್ಥಿಗಳಿಗೆ ಪಟ್ಟಣಕ್ಕೆ ತೆರಳಲು ಸಮಸ್ಯೆ ಯಾಗಿದೆ. ಅಲ್ಲದೇ ತಡೆಗೋಡೆ ಕುಸಿತದಿಂದ ನದಿಗೆ ಸೇತುವೆಗೆ ಕಂಟಕ ಎದುರಾಗಿದೆ.

ಗೋಕುಲದ ಕೆರೆಯ ಕೋಡಿಯ ಅರ್ಧ ನೀರು ಸ್ಥಳೀಯ ರೈತರಿಗೆ ನೀರಾವರಿ ಸೌಲಭ್ಯಕ್ಕೆ ಹರಿಯಲಿದೆ. ಮತ್ತೊಂದು ಕಡೆ ಬೈಪಾಸ್ ರಸ್ತೆ ಮೂಲಕ ಸುವರ್ಣಮುಖಿ ನದಿಗೆ ಸೇರುವ ರಾಜಕಾಲುವೇಯೇ ಕಾಣಿಯಾಗಿದೆ. ಇದರಿಂದ ನೀರು ಸಿಕ್ಕ ಸಿಕ್ಕ ಕಡೆಯಿಂದ ಹರಿದು ಬರ್ತಿದೆ.

ಗಂಗಾಧರೇಶ್ವರ ಬೆಟ್ಟ, ಹಿರೇಬೆಟ್ಟ ಕೋಳಿಕಲ್ಲು ಬೆಟ್ಟದ ತಪ್ಪಲಿನಿಂದ ಗಂಗಾಧರೇಶ್ವರ ಕೆರೆಗೆ ನೀರು ಹರಿದು ಬರಲಿದೆ. ಕೆರೆ ಕೋಡಿ ಬಿದ್ದ ಕಾರಣ ನೇರವಾಗಿ ಸುವರ್ಣ ಮುಖಿ ನದಿಗೆ ಹರಿಯಲಿದೆ. ಕೆರೆಯ ನೀರು ಹರಿಯುವ ರಾಜಗಾಲುವೇ ಮಾಯವಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಅವೈಜ್ಞಾನಿಕ ಬೈಪಾಸ್ ರಸ್ತೆ ಕಾಮಗಾರಿ:

ಕೊರಟಗೆರೆ ಪಟ್ಟಣದಲ್ಲಿ ಅವೈಜ್ಞಾನಿಕ ಬೈಪಾಸ್ ರಸ್ತೆ 

ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆ ಕಾಮಗಾರಿ ಅವೈಜ್ಞಾನಿಕ, ಗೋಕುಲದ ಕೆರೆಯ ಕೋಡಿ ನೀರು ಹರಿಯುವ ರಾಜಕಾಲುವೆ ಮುಚ್ಚಿದ್ದಾರೆ. ಹೀಗಾಗಿ ಮಳೆ ಹೆಚ್ಚಾದರೆ ರೈತರ ಜಮೀನುಗಳ ಮೂಲಕ ಕೆರೆಯ ನೀರು ಹರಿಯಲಿದೆ. ಗುಂಡಿನಪಾಳ್ಯ-ಮೂಡ್ಲಪಣ್ಣೆ ಮಾರ್ಗದ ಬೈಪಾಸ್ ರಸ್ತೆಗೆ ರೂಪುರೇಷೆ ಇಲ್ಲದೆ ರೈತರಿಗೆ ತೊಂದರೆ ಉಂಟಾಗಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಸೇತುವೆಗೆ ಹಾಗೂ ರೈತರಿಗೆ ತೀವ್ರ ತೊಂದೆರೆಯಾಗಲಿದೆ. ಸರ್ಕಾರ ಇದನ್ನ‌ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಸದ್ಯ ಸುವರ್ಣ ಮುಖಿ ನದಿಯ ತಡೆಗೋಡೆ ಕುಸಿದಿರುವ ಬಗ್ಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ತಡೆಗೋಡೆ ನಿರ್ಮಾಣಕ್ಕೆ ತ್ವರಿತವಾಗಿ ಕ್ರಮವಹಿಸಲಾಗುತ್ತದೆ ಅಂತಾ ತಿಳಿಸಿದ್ದಾರೆ.

-ಮಹೇಶ್, ಟಿವಿ9, ತುಮಕೂರು

 

Published On - 9:34 am, Mon, 6 December 21