Nonavinakere: ನಕಲಿ ವೈದ್ಯ ದಂಪತಿ ಕರಾಮತ್ತು! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ 70 ದಂಪತಿಗೆ ದೋಖಾ

ದೇಹ ದಪ್ಪವಾಗಿದೆ, ಹೊಟ್ಟೆ ನೋವು ಸೇರಿದಂತೆ ಹಲವು ಖಾಯಿಲೆಗಳಿಗೆ ತುತ್ತಾಗಿದ್ದೇವೆ ಎಂದು ಆ ಮಹಿಳೆಯರು ಅಲವತ್ತುಕೊಂಡಿದ್ದಾರೆ. ಓರ್ವ ಮಹಿಳೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿ ತಲುಪಿದ್ದಾರೆ. ಸುಮಾರು 70 ದಂಪತಿಗೆ ಈ ನಕಲಿ ವೈದ್ಯ ದಂಪತಿ ವಂಚನೆ ಮಾಡಿದ್ದಾರೆ.

Nonavinakere: ನಕಲಿ ವೈದ್ಯ ದಂಪತಿ ಕರಾಮತ್ತು! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ 70 ದಂಪತಿಗೆ ದೋಖಾ
ನಕಲಿ ವೈದ್ಯ ದಂಪತಿ ಕರಾಮತ್ತು! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ 70 ದಂಪತಿಗೆ ದೋಖಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 28, 2022 | 9:17 AM

ತುಮಕೂರು: ಇವರು ನಕಲಿ ವೈದ್ಯ ದಂಪತಿ! ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತಾ ದೋಖಾ ಮಾಡುವುದೇ ಇವರ ಕಸುಬು. ಇವರು ವಾಣಿ ಹಾಗೂ ಮಂಜುನಾಥ್ ಎಂಬ ನಕಲಿ ವೈದ್ಯ ದಂಪತಿ (Fake doctor couple). ಮಕ್ಕಳಿಲ್ಲದ ದಂಪತಿಗಳೇ ಇವರ ಟಾರ್ಗೆಟ್! ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮಕ್ಕೆ (nonavinakere in tiptur taluk) ಭೇಟಿ ನೀಡಿ, ಜನ ಮಹಿಳೆಯರಿಗೆ ಇಂಜೆಕ್ಷನ್ ನೀಡಿ ಮಹಾನ್ ದೋಖಾ ಮಾಡಿದ್ದಾರೆ. ಅಷ್ಟೇ ಅಲ್ಲ; ದಂಪತಿಗಳ ಬಳಿ ಐದಾರು ಲಕ್ಷ ರೂಪಾಯಿ ಹಣವನ್ನೂ ದೋಚಿದ್ದಾರೆ ಈ ನಕಲಿ ವೈದ್ಯ ದಂಪತಿ.

ಆರು ತಿಂಗಳಿನಿಂದ ಬಾಡಿಗೆ ಮನೆ ಮಾಡಿಕೊಂಡು ಹಲವು ಗ್ರಾಮಗಳಿಗೆ ಮೋಸ ಮಾಡಿರುವ ನಕಲಿ ವೈದ್ಯರು ಇವರು. ಇಂಜೆಕ್ಷನ್ ಪೌಡರ್ ನೀಡಿ ಸ್ಕ್ಯಾನಿಂಗ್ ಮಾಡಿಸಬೇಡಿ ಅಂತಾ ಹೇಳಿ ಮೋಸ ಮಾಡಿದ್ದಾರೆ. ಪ್ರತಿಯೊಂದನ್ನೂ ನಾವೇ ಮಾಡ್ತಿವಿ ಅಂತಾನೂ ಮೋಸವೆಸಗಿದ್ದಾರೆ. ಸದ್ಯ ಮಕ್ಕಳೂ ಇಲ್ಲ; ಹಣವೂ ಇಲ್ಲದೇ ಹೋಯ್ತು ಅಂತಾ ಮಕ್ಕಳ ಆಸೆಗೆ ಹೋಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮಹಿಳೆಯರು ಈಗ ಹಲಬುತ್ತಿದ್ದಾರೆ.

ದೇಹ ದಪ್ಪವಾಗಿದೆ, ಹೊಟ್ಟೆ ನೋವು ಸೇರಿದಂತೆ ಹಲವು ಖಾಯಿಲೆಗಳಿಗೆ ತುತ್ತಾಗಿದ್ದೇವೆ ಎಂದು ಆ ಮಹಿಳೆಯರು ಅಲವತ್ತುಕೊಂಡಿದ್ದಾರೆ. ಓರ್ವ ಮಹಿಳೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿ ತಲುಪಿದ್ದಾರೆ. ಸುಮಾರು 70 ದಂಪತಿಗೆ ಈ ನಕಲಿ ವೈದ್ಯ ದಂಪತಿ ವಂಚನೆ ಮಾಡಿದ್ದಾರೆ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಪತರು ನಾಡಿನಲ್ಲಿ ಸಿದ್ಧಗಂಗಾ ಮಠದ ಜಾತ್ರೆ ಸಂಭ್ರಮ ತುಮಕೂರು: ದಸರಾ ಎಂದರೆ ಮೈಸೂರಿಗೆ ಹೇಗೆ ಒಂದು ಭೂಷಣವೂ ಹಾಗೇ ಕಲ್ಪತರು ನಾಡಿಗೆ ಸಿದ್ಧಗಂಗಾ ಮಠದಲ್ಲಿ ನಡೆಯುವ ಜಾತ್ರೆ ಫೇಮಸ್. ಅದರಲ್ಲೂ ಮಠದ ಪ್ರಸಾದ ಇನ್ನೂ ವಿಶೇಷ. ಈ ಬಾರಿ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ತುಮಕೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಕ್ಕಳಲ್ಲಿ ಅದೇನೋ ಹೊಸ ಸಡಗರ. ಪ್ರಸಾದ ಸೇವಿಸಿ ಧನ್ಯರಾದ ಭಕ್ತರು.

ಹೌದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರೋತ್ಸವ ನಡೆದಿದೆ. ಕೊರೊನಾ ಹಿನ್ನೆಲೆ ಕಳೆಗುಂದಿದ್ದ ಜಾತ್ರೆಯನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಶಿವರಾತ್ರಿ ಅಂಗವಾಗಿ ಪ್ರತಿ ಬಾರಿಯಂತೆ ಈ ಬಾರಿ ತಂಬಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಕಡ್ಲೆ, ಶೇಂಗಾ, ಅಕ್ಕಿ, ಎಳ್ಳು, ಕೊಬ್ಬರಿ ಮತ್ತು ಏಲಕ್ಕಿಯಂತಹ ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿಸಲಾಗಿದೆ.

ಫೆಬ್ರವರಿ 23 ರಿಂದ ಮಾರ್ಚ್ 4ರ ವರೆಗೂ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಾರ್ಚ್ 1 ರಂದು ನಡೆಯಲಿರುವ ಶಿವರಾತ್ರಿ ಮಹೋತ್ಸವಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 10 ದಿನಗಳಿಂದಲೂ ಮಠದ ಅಡುಗೆ ಭಟ್ಟರು, ಶ್ರೀ ಮಠದಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಇಷ್ಟು ಬೃಹತ್ ಪ್ರಮಾಣದಲ್ಲಿ ತಂಬಿಟ್ಟು ತಯಾರಿಸಿದ್ದಾರೆ. ಈಗಾಗಲೇ ದನಗಳ ಜಾತ್ರೋತ್ಸವ ಹಾಗೂ ಕೃಷಿ ವಸ್ತು ಪ್ರದರ್ಶನ ನಡೆದಿದೆ. ಶಿವರಾತ್ರಿ ಮಾರನೇ ದಿನ ಅಂದ್ರೆ ಬುಧವಾರ ರಥೋತ್ಸವ ನಡೆಯಲಿದ್ದು ಭಾರಿ ಜನ ಆಗಮಿಸುವ ನಿರೀಕ್ಷೆ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಮೆರಗು ತಂದಿದ್ದಾರೆ.