ಬೆಳ್ಳಂಬೆಳ್ಳಗ್ಗೆ ಕುಡಿದು ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ವೈದ್ಯ: ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು

ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಪ್ರತಿದಿನ ಕುಡಿದು ಕರ್ತವ್ಯಕ್ಕೆ ಹಾಜರಾಗುತ್ತಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕೂಡ ಆಸ್ಪತ್ರೆ ಆವರಣದಲ್ಲೇ ಇರುವ ವಸತಿ ನಿಲಯದಲ್ಲಿ ಡಾ. ರಾಮಾಂಜಿನಪ್ಪ ಕುಡಿಯುತ್ತ ಕುಳಿತಿರುವಾಗ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಬೆಳ್ಳಂಬೆಳ್ಳಗ್ಗೆ ಕುಡಿದು ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ವೈದ್ಯ: ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು
ಸರ್ಕಾರಿ ಆಸ್ಪತ್ರೆ
Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2023 | 3:32 PM

ತುಮಕೂರು, ಸೆಪ್ಟೆಂಬರ್​ 20: ಸರ್ಕಾರಿ ಆಸ್ಪತ್ರೆ (Government doctor) ವೈದ್ಯರೊಬ್ಬರು ಪ್ರತಿದಿನ ಕುಡಿದು ಕರ್ತವ್ಯಕ್ಕೆ ಹಾಜರಾಗುತ್ತಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ನಡೆದಿದೆ. ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಮಾಂಜಿನಪ್ಪ ಕುಡಿದು ಕರ್ತವ್ಯಕ್ಕೆ ಬರುತ್ತಿದ್ದ ವೈದ್ಯ. ಪ್ರತಿನಿತ್ಯ ಕುಡಿದು ಬಂದೇ ಡಾ. ರಾಮಾಂಜಿನಪ್ಪ ಡ್ಯೂಟಿಗೆ ಹಾಜರಾಗುತ್ತಿದ್ದರು. ಈ ಬಗ್ಗೆ ಹಲವಾರು ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇಂದು ಬೆಳಿಗ್ಗೆ ಕೂಡ ಆಸ್ಪತ್ರೆ ಆವರಣದಲ್ಲೇ ಇರುವ ವಸತಿ ನಿಲಯದಲ್ಲಿ ಡಾ. ರಾಮಾಂಜಿನಪ್ಪ ಕುಡಿಯುತ್ತ ಕುಳಿತಿರುವಾಗ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಂದು ಕರ್ತವ್ಯಕ್ಕೆ ಬಾರದಿದ್ದರು ಸಹ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬೀಗ ಹಾಕಿ ಕೋಟಗುಡ್ಡ ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದರು.

ಇದನ್ನೂ ಓದಿ: ಅಂತ್ಯಕ್ರಿಯೆಗೆ ಜಾಗವಿಲ್ಲದೆ ನಡು ರಸ್ತೆಯಲ್ಲೇ ಶವ ಸಂಸ್ಕಾರ ಮಾಡಿದ ಕುಟುಂಬಸ್ಥರು

ತಕ್ಷಣವೇ ಕುಡುಕ ವೈದ್ಯನನ್ನ ವಜಾ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಆದರೆ ವೈದ್ಯ ರಾಮಾಂಜಿನಪ್ಪಗೆ ತಾಲೂಕು ವೈದ್ಯಾಧಿಕಾರಿ ಸಾಥ್ ನೀಡುತ್ತಿರುವುದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಬೆಳಿಗ್ಗೆ 9 ರಿಂದ ಪ್ರತಿಭಟನೆ ಮಾಡುತ್ತಿದ್ದರೂ ಟಿಎಚ್ಓ ಮೇಲೆ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಬಸ್​ಗಳು ನಿಲ್ಲಿಸದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ಕಾರಿ ಬಸ್​ಗಳು ನಿಲ್ಲಿಸದಿದ್ದನ್ನು ಖಂಡಿಸಿ ತುಮಕೂರು ತಾಲೂಕಿನ ನೆಲಹಾಲ್ ಗ್ರಾಮದ ಬಳಿ ರಸ್ತೆ ತಡೆದು ವಿದ್ಯಾರ್ಥಿಗಳಿಂದ ಧರಣಿ ಮಾಡಲಾಗಿದೆ. ಗ್ರಾಮದಲ್ಲಿ ಬಸ್ ನಿಲ್ಲಿಸದಿದ್ದರಿಂದ ಶಾಲಾ ಕಾಲೇಜಿಗೆ ಹೋಗಲಾಗುತ್ತಿಲ್ಲ. ಪದೇಪದೆ ಪ್ರತಿಭಟನೆ ನಡೆಸಿದರೂ ಸರ್ಕಾರಿ ಬಸ್​ಗಳು ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಮೀನು ಗಲಾಟೆ ವೇಳೆ ಗರ್ಭಿಣಿ ಹೊಟ್ಟೆಗೆ ಒದ್ದ ದಾಯಾದಿಗಳು, ಗರ್ಭಸ್ಥ ಶಿಶು ಸಾವು

ಸೂಕ್ತ ಸಮಯಕ್ಕೆ ಶಾಲೆ ಕಾಲೇಜುಗಳಿಗೆ ತೆರಳದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪ್ರತಿಭಟನಾ ಸ್ಥಳಕ್ಕೆ ಡಿಪೋ ಅಧಿಕಾರಿಗಳು ಭೇಟಿ ಮಾಡಿದ್ದು,  ಮಕ್ಕಳ ಜೊತೆ ಚರ್ಚೆ ಮಾಡಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:31 pm, Wed, 20 September 23