ಅಂತ್ಯಕ್ರಿಯೆಗೆ ಜಾಗವಿಲ್ಲದೆ ನಡು ರಸ್ತೆಯಲ್ಲೇ ಶವ ಸಂಸ್ಕಾರ ಮಾಡಿದ ಕುಟುಂಬಸ್ಥರು
ಈ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ ವರದರಾಜ್, ರುದ್ರಭೂಮಿಗಾಗಿ ಬೇರೆ ಜಾಗ ನೀಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಸೆ.20: ಅಂತ್ಯಕ್ರಿಯೆಗೆ ಜಾಗವಿಲ್ಲದೆ ಕುಟುಂಬಸ್ಥರು ನಡು ರಸ್ತೆಯಲ್ಲೇ ಶವ ಸಂಸ್ಕಾರ (Burial) ಮಾಡಿದ ಘಟನೆ ಜಿಲ್ಲೆಯ ಪಾವಗಡ (Pawagad) ತಾಲೂಕಿನ ಕ್ಯಾತಗಾನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಈರಣ ಎಂಬುವರು ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಗ್ರಾಮದ ಹೊರವಲಯದ ರಾಜಕಾಲುವೆ ಪಕ್ಕದ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ ಈ ಜಾಗ ನಮ್ಮದು ಎಂದು ಪಕ್ಕದ ಜಮೀನು ಮಾಲೀಕರು ಜಗಳ ಮಾಡಿದ್ದಾರೆ. ಕೊನೆಗೆ ವಿಧಿ ಇಲ್ಲದೆ ಕುಟುಂಬಸ್ಥರು ರಸ್ತೆಯಲ್ಲೇ ಶವ ಸಂಸ್ಕಾರ ಮಾಡಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ ವರದರಾಜ್, ರುದ್ರಭೂಮಿಗಾಗಿ ಬೇರೆ ಜಾಗ ನೀಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಲಾಟೆ ವೇಳೆ ಗರ್ಭಿಣಿ ಹೊಟ್ಟೆಗೆ ಒದ್ದ ದಾಯಾದಿಗಳು, ಭ್ರೂಣ ಸಾವು
ಗುಬ್ಬಿ ತಾಲ್ಲೂಕಿನ ನಾಗಸಂಧ್ರ ಗೊಲ್ಲರಹಟ್ಟಿಯಲ್ಲಿ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಬಿಡಿಸಲು ಬಂದ ಐದು ತಿಂಗಳ ಗರ್ಭಿಣಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಮೀನು ವಿಚಾರಕ್ಕೆ ಗ್ರಾಮದ ಕುಮಾರ್ ಹಾಗೂ ಹರೀಶ್ ಗಂಗಣ್ಣ, ಗಿಡಯ್ಯ ಬಸವರಾಜು ಪಾಪಣ್ಣ, ಕಲಿ ನಡುವೆ ಜಗಳ ನಡೆದಿತ್ತು.
ಇದನ್ನೂ ಓದಿ: ಪಾವಗಡ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು, ಓರ್ವ ಗಂಭೀರ ಗಾಯ
ಈ ವೇಳೆ ಜಗಳ ಬಿಡಿಸಲು ಬಂದ ಕುಮಾರ್ ಪತ್ನಿ ಗರ್ಭಿಣಿ ಹರ್ಷಿತಾ ಅವರ ಹೊಟ್ಟೆಗೆ ದಾಯಾದಿಗಳು ಒದ್ದಿದ್ದಾರೆ. ಇದರಿಂದ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಭ್ರೂಣ ಮೃತಪ್ಪಟ್ಟಿದೆ. ಹಲ್ಲೆ ಹಾಗೂ ಮಗು ಸಾವಿನ ಬಗ್ಗೆ ದಂಪತಿಗಳು ಸಿ.ಎಸ್ಪುರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.
ಇನ್ನು ಹಲ್ಲೆ ಮಾಡಿದವರು ದಂಪತಿಗಳಿಗೆ ಬೆದರಿಕೆ ಹಾಕುತ್ತಿತ್ತಿದ್ದಾರೆ. ಹೀಗಾಗಿ ನ್ಯಾಯಕ್ಕಾಗಿ ದಂಪತಿಗಳು ನಿತ್ಯ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 20 September 23