ವಿದ್ಯಾ ಚೌಡೇಶ್ವರಿ ದೇವಿಗೆ ವಜ್ರ ಖಚಿತ ಕಿರೀಟ ಅರ್ಪಿಸಿದ ದೇವೇಗೌಡ, ಕಿರೀಟದ ಮೌಲ್ಯವೆಷ್ಟು ಗೊತ್ತಾ?
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ಹಂಗರಹಳ್ಳಿಯ ವಿದ್ಯಾ ಚೌಡೇಶ್ವರಿ ದೇವಿಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ವಜ್ರ ಖಚಿತ ಕಿರೀಟ ಅರ್ಪಿಸಿದ್ದಾರೆ. ಇನ್ನು ಈ ವಜ್ರ ರಹಿತ ಕಿರೀಟ ಮೌಲ್ಯವೆಷ್ಟು ಗೊತ್ತಾ?
ತುಮಕೂರು, (ಜನವರಿ 17): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Devegowda) ಅವರು ವಿದ್ಯಾ ಚೌಡೇಶ್ವರಿ ದೇವಿಗೆ ವಜ್ರ ಖಚಿತ ಕಿರೀಟ ಅರ್ಪಿಸಿದ್ದಾರೆ. ವಿದ್ಯಾ ಚೌಡೇಶ್ವರಿ ದೇವಿ ದೇವಸ್ಥಾನ ತುಮಕೂರು (Tumakuru) ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ಹಂಗರಹಳ್ಳಿಯಲ್ಲಿದ್ದು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ ವಜ್ರ ಕೀರಿಟ ಅರ್ಪಿಸಿ ಭಕ್ತಿ ಮೆರೆದಿದ್ದಾರೆ. ಬಳಿಕ ಹೋಮದಲ್ಲಿ ಭಾಗಿಯಾದರು.
ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡ, ಶ್ರೀ ಬಾಲ ಮಂಜುನಾಥ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಬರಲು ಆಹ್ವಾನ ನೀಡಿದ್ದರು. ವಿದ್ಯಾ ಚೌಡೇಶ್ವರಿಯ ಉತ್ತರಾಯಣ ಪುಣ್ಯಕಾಲ. ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ಧಂತಿ ಉತ್ಸವ ಮತ್ತು ಅಮ್ಮನವರ ಚಿಕ್ಕಮ್ಮ ಜಾತ್ರೆಯು ಶಾಸ್ತ್ರೋಕ್ತವಾಗಿ ನಡೆದಿದೆ. ನಾನು ಉಪವಾಸ ವ್ರತ ಕೈಗೊಂಡು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ನನ್ನ ಎರಡು ಮಂಡಿ ಚೆನ್ನಾಗಿಲ್ಲ, ಆದರೂ ಕೂಡ ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ. ಇಲ್ಲಿ ನಡೆದಂತಹ ಹೋಮ ಅತ್ಯಂತ ವಿಶೇಷವಾಗಿತ್ತು. ಶ್ರೀ ವಿದ್ಯಾ ಚೌಡೇಶ್ವರಿ ದೇವಿಗೆ ಒಂದು ಕಿರೀಟ ಧಾರಣೆ ಮಾಡಿಸಿದ್ದೇನೆ. ಶ್ರೀ ಚೌಡೇಶ್ವರಿ ದೇವಿಯ ಶಕ್ತಿಯಿಂದಾಗಿ ಮೂರು ಬಾರಿ ನಾನು ಪ್ರದಕ್ಷಿಣೆ ಹಾಕಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹಿಂದೆ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು. ನನಗೂ ಇಲ್ಲಿ ಹೋಗುವಂತೆ ಹೇಳಿದರು, ಹಾಗಾಗಿ ಬಂದು ಪೂಜೆ ಸಲ್ಲಿಸಿದ್ದೇನೆ ಎಂದರು.
ಅಯೋಧ್ಯೆಗೆ ಹೋಗಲು ಪ್ರಯತ್ನಿಸುತ್ತೇನೆ
ನಾನು ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ. ಹೋಗುವ ಪ್ರಯತ್ನ ಮಾಡುತ್ತೇನೆ. ಆರೋಗ್ಯ ನೋಡಿಕೊಳ್ಳಬೇಕಾಗಿದೆ. ಈ ನಡುವೆ ನಿಜವಾಗಿಯೂ ಹೋಗುವ ಪ್ರಯತ್ನ ಮಾಡುತ್ತೇನೆ. ಶ್ರೀ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹೇಳಿಕೆಯನ್ನ ಕೊಡುವುದಿಲ್ಲ ಎಂದು ರಾಜಕೀಯ ಮಾತುಗಳನ್ನಾಡಲು ನಿರಾಕರಿಸಿದರು.
Published On - 7:47 pm, Wed, 17 January 24