ಕೊಲೆ ಬೆದರಿಕೆ ಬಂದಿರೋದು ನೂರಕ್ಕೆ ನೂರು ಸತ್ಯ, ಸಿಎಂಗೂ ಮಾಹಿತಿ ನೀಡಿದ್ದೇನೆ: ಮಾಜಿ ಶಾಸಕ ಸುರೇಶ್ ಗೌಡ

ನನಗೆ ಕೊಲೆ ಬೆದರಿಕೆ ಬಂದಿರುವುದು ನೂರಕ್ಕೆ ನೂರು ಸತ್ಯ. ಈ ಕುರಿತಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ಕೊಲೆ ಬೆದರಿಕೆ ಬಂದಿರೋದು ನೂರಕ್ಕೆ ನೂರು ಸತ್ಯ, ಸಿಎಂಗೂ ಮಾಹಿತಿ ನೀಡಿದ್ದೇನೆ: ಮಾಜಿ ಶಾಸಕ ಸುರೇಶ್ ಗೌಡ
ಮಾಜಿ ಶಾಸಕ ಸುರೇಶ್ ಗೌಡ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 23, 2022 | 3:38 PM

ತುಮಕೂರು: ನನಗೆ ಕೊಲೆ ಬೆದರಿಕೆ (threats) ಬಂದಿರುವುದು ನೂರಕ್ಕೆ ನೂರು ಸತ್ಯ. ಆಯುಧ ಪೂಜೆ ದಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರನ್ನ ಭೇಟಿಯಾಗಿ ಕೊಲೆ ಬೆದರಿಕೆ ಬಗ್ಗೆ ವಿವರಣೆ ಕೊಟ್ಟಿದ್ದೇನೆ. ಒಂದು ತಿಂಗಳ ಹಿಂದೆ ಕಮಿಷನರ್​ಗೆ ದೂರು ಕೂಡ ಕೊಟ್ಟಿದ್ದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,  ಸರ್ಕಾರ ಶಕ್ತಿಶಾಲಿಯಾಗಿದೆ. ಗುಪ್ತಚರ ಇಲಾಖೆಯಿಂದ ವರದಿ ಬಂದಿದೆ. ತನಿಖೆ ನಡೆಯುತ್ತಿದೆ. ಹಾಗಾಗಿ ಮೀಡಿಯಾ ಮುಂದೆ ಬಂದಿರಲಿಲ್ಲ. ಇನ್ನು ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ರಾಜಕಾರಣ ನಡೆಯುತ್ತೆ. ವ್ಯಕ್ತಿಗತ ಆರೋಪ ಯಾರು ಮಾಡೋದಿಲ್ಲಾ. ರಾಜಕೀಯವಾಗಿ ವಿರೋಧ ಮಾಡುತ್ತಾರೆ, ಹೊರೆತು ಕೊಲೆ ಮಾಡುವಷ್ಟು ನೀಚ ರಾಜಕಾರಣಕ್ಕೆ ಯಾರು ಇಳಿದಿಲ್ಲ ಎಂದು ಹೇಳಿದರು.

ಸುರೇಶ್ ಗೌಡರನ್ನ ಕೊಲೆ ಮಾಡಬೇಕು ಎಂದು ಶಾಸಕ ಗೌರಿಶಂಕರ್, ಅಟಿಕಾ ಬಾಬು ಸೇರಿ 5 ಕೋಟಿ ಹಣ ನೀಡಿರುತ್ತಾರೆ. ಹಿರೇಹಳ್ಳಿ ಮಹೇಶ್, ಜೈಲಿನಲ್ಲಿರೋ ಒಬ್ಬ ಖೈದಿಗೆ ಸುಮಾರು ಭಾರಿ ಪೋನ್ ಮಾಡಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ ಎಲ್.ಹೆಚ್​ನಲ್ಲಿ ಶಾಸಕ ಗೌರಿಶಂಕರ್​ರನ್ನ ಅಟಿಕಾ ಬಾಬು ಭೇಟಿಯಾಗಿರೋ ಬಗ್ಗೆ ಮಾಹಿತಿ ಇದೆ. ಸರ್ಕಾರದಲ್ಲಿರೋ ಇಂಟೆಲಿಜೆನ್ಸ್ ತುಂಬಾ ಪ್ರಬಲವಾಗಿರುವುದರಿಂದ ಎಲ್ಲಾ ಮಾಹಿತಿ ಲಭ್ಯವಾಗಿದೆ. ಗೌರಿಶಂಕರ್ ಭಾಗಿಯಾಗಿದ್ದಾರೋ ಇಲ್ವೋ ಗೊತಿಲ್ಲಾ. ಆದರೆ ತನಿಖೆ ಆಗಬೇಕು. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ತನಿಖೆ ಆಗಬೇಕು. ಗೌರಿಶಂಕರ್ ಹಿಂಬಾಲಕ ಹಿರೇಹಳ್ಳಿ ಮಹೇಶ್ ಜೈಲಿನಲ್ಲಿರೋ ಖೈದಿಗೆ ಕರೆ ಮಾಡಿ ಮಾತನಾಡಿರೋ ಪೋನ್ ನಂಬರ್ ಕೂಡ ಕೊಟ್ಟಿದ್ದೇನೆ ಎಂದು ತಿಳಿಸಿದರು.

ನಾನು ಗೌರಿಶಂಕರ್ ವಿರುದ್ದ ತರಕಾರು ಅರ್ಜಿಯನ್ನ ಕೊಟ್ಟಿದ್ದೆ. ಅದು ಜಡ್ಜ್‌ಮೆಂಟ್ ಹಂತದಲ್ಲಿದೆ. ಆ ಹತಾಶೆ ಭಾವದಿಂದ ಹಿರೇಹಳ್ಳಿ ಮಹೇಶ್, ಗೌರಿಶಂಕರ್ ಇಬ್ಬರು ಸೇರಿ ಹಣ ಒದಗಿಸಲು ಅಟಿಕಾ ಬಾಬು ಹೆಸರನ್ನ ಕೂಡ ತಂದಿದ್ದಾರೆ. ಖೈದಿಗೆ ಹಣ ಯಾರು ಕೂಡುತ್ತಾರೆ ಅಂದ್ರೆ ಅಟಿಕಾ ಬಾಬು ಕೊಡುತ್ತಾರೆ ಅಂತಾ ಹಿರೇಹಳ್ಳಿ ಮಹೇಶ್ ಹೇಳಿದ್ದಾರೆ. ಅಟಿಕಾ ಬಾಬು, ಗೌರಿಶಂಕರ್ ಭಾಗಿಯಾಗಿದ್ದಾರೋ ಗೊತ್ತಿಲ್ಲಾ. ಹಿರೇಹಳ್ಳಿ ಮಹೇಶ್ ಭಾಗಿಯಾಗಿರೋದು ಸತ್ಯ. ನನಗೆ ಗೌರಿಶಂಕರ್ ಮೇಲೆ ವೈಯಕ್ತಿಕವಾಗಿ ಆರೋಪ ಮಾಡೋಕೆ ಇಷ್ಟ ಇಲ್ಲ ಎಂದರು.

ಸತ್ಯ ಇಲ್ಲದೇ ನಾನು ಯಾರ ಮೇಲೂ ಆರೋಪ ಮಾಡೋದಿಲ್ಲಾ. ನಕಲಿ ವ್ಯಾಕ್ಸಿನ್, ನಕಲಿ ಬಾಂಡ್ ಬಗ್ಗೆ ತಕರಾರು ಅರ್ಜಿಯ ತನಿಖೆ ನಡೆಯುತ್ತಿದೆ. ಅವರ ಬ್ಯಾಗ್ರೌಂಡ್ ಕೊರಟಗೆರೆಯಲ್ಲಿಅವರ ತಂದೆ ಯಾರು ಯಾರಿಗೆ ಏನೇನ್ ಮಾಡಿದ್ದಾರೆ ಗೊತ್ತಿದೆ. ಗ್ರಾಮಾಂತರ ಜನರು ಮುಗ್ಧರಿದ್ದಾರೆ. ಇಲ್ಲಿ ಕೂಡ ಏನೋ ಮಾಡೋಕೆ ಹೋದರು, ಆದರೆ ನಾವು ಬಿಟ್ಟಿಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada