ಲವರ್​​ ಜೊತೆ ಮದುವೆಯಾಗಿದ್ದರೆ ರಾಣಿಯಂತೆ ಇರ್ತಿದ್ದೆ, ಹಳ್ಳಿಗುಗ್ಗುನ್ನ ಮದುವೆಯಾಗಿಬಿಟ್ಟೆ ಎಂದು ಟಾರ್ಚರ್​, ಮೆಟ್ರೋ ಇಂಜಿನಿಯರ್ ಸಾವಿಗೆ ಶರಣು!

ಪ್ರಿಯಾಂಕ ಮದುವೆಗೂ ಮುನ್ನ ಮೈಸೂರಿನಲ್ಲಿ ವ್ಯಾಸಂಗ ಮಾಡೋ ವೇಳೆ ಆಕೆಗೆ ಪ್ರಿಯಕರ ಇದ್ದು, ಆತನೊಟ್ಟಿಗೆ ಮದುವೆಯಾಗ ಬಯಸಿದ್ದಳಂತೆ.. ಆದರೆ ಮಂಜುನಾಥ್ ಜೊತೆ ಮದುವೆಯಾಗಿದ್ದಕ್ಕೆ ಕುಪಿತಗೊಂಡು ನೀನು ಹಳ್ಳಿ ಗುಗ್ಗು, ನಾನು ಅವನೊಟ್ಟಿಗೆ ಮದುವೆಯಾಗಿದ್ದರೇ ರಾಣಿ ಹಾಗೆ ಇರ್ತಿದ್ದೆ ಅಂತಾ ತನ್ನ ಸಹೋದರ ರಾಕೇಶ್ ನೊಟ್ಟಿಗೆ ಸೇರಿ ಮಂಜುನಾಥ್ ಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ.

ಲವರ್​​ ಜೊತೆ ಮದುವೆಯಾಗಿದ್ದರೆ ರಾಣಿಯಂತೆ ಇರ್ತಿದ್ದೆ, ಹಳ್ಳಿಗುಗ್ಗುನ್ನ ಮದುವೆಯಾಗಿಬಿಟ್ಟೆ ಎಂದು ಟಾರ್ಚರ್​, ಮೆಟ್ರೋ ಇಂಜಿನಿಯರ್ ಸಾವಿಗೆ ಶರಣು!
ಹೆಂಡತಿ ಟಾರ್ಚರ್​, ಮೆಟ್ರೋದಲ್ಲಿ ಇಂಜಿನಿಯರ್ ಆಗಿದ್ದ ಗಂಡ ಸಾವಿಗೆ ಶರಣು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 14, 2023 | 7:36 PM

ಅವರದು 9 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ, ಗುರು ಹಿರಿಯರು ನೋಡಿ ನಿಶ್ಚಯಿಸಿ ಅದ್ದೂರಿಯಾಗಿ ಮದುವೆ ಮಾಡಿದ್ದರು, ಆ ಹುಡುಗ ಕೂಡ ಜೋರಾಗಿಯೇ ಇದ್ದ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ, ಸುಮಾರು 70 ಸಾವಿರ ಸಂಬಳ ಜೊತೆಗೆ ಇರೊದಕ್ಕೆ ಕ್ವಾರ್ಟರ್ಸ್​… ಹೀಗಿದ್ದರೂ ಪತ್ನಿಯ ಟಾರ್ಚರ್, ಪತ್ನಿಯೇ ಹೊಡೆದು ಬಡಿದು ಕಿರುಕುಳ ನೀಡುತ್ತಿದ್ದಳಂತೆ! ನಾನು ಯಾರನ್ನು ಲವ್ ಮಾಡಿದ್ದೆನೋ ಅವನನ್ನೇ ಮದುವೆಯಾಗಬೇಕಿತ್ತು ಅಂತಾ ವರಾತ ತೆಗೆಯುತ್ತಿದ್ದಳಂತೆ. ಜೊತೆಗೆ ನೀನು ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತಾ ಸದಾ ಅನುಮಾನಪಡುತ್ತಿದ್ದಳಂತೆ. ಹಲವು ಬಾರಿ ರಾಜೀ ಪಂಚಾಯತಿ ನಡೆಸಿದರೂ ಕೂಡ ಸುಮ್ಮನೆ ಆಗಿಲ್ಲ ಮಹಾತಾಯಿ. ಕೊನೆಗೆ ತಮ್ಮ ಸಹೋದರನಿಗೆ ಆಡಿಯೋ ಕಳಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಗಂಡ.

ಪತ್ನಿಯ ಕಾಟಕ್ಕೆ ಬೇಸತ್ತು ಇಂಜಿನಿಯರ್ ಒಬ್ಬರು​ ಸಾವಿನ ಹಾದಿ ಹಿಡಿದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. 38 ವರ್ಷದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು ,ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮಂಜುನಾಥ್, ಬೆಂಗಳೂರಿನ ಬಿಎಂಆರ್​ಸಿಎಲ್​ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕಾಳನ್ನು ಮದುವೆಯಾಗಿದ್ದರು.ಇಬ್ಬರಿಗೂ ಏಳು ವರ್ಷದ ಮಗಳಿದ್ದು, ದಂಪತಿಯಿಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದರು. ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಪದೇಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಮದುವೆಯಾದ ಬಳಿಕ ಮಂಜುನಾಥ್​ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೇ ಪ್ರಿಯಾಂಕಾ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ್ ಅನೇಕ ಬಾರಿ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದು,ಕುಟುಂಬದ ಹಿರಿಯರು ಮೂರ್ನಾಲ್ಕು ಬಾರಿ ರಾಜಿ ಪಂಚಾಯ್ತಿ ಸಹ ಮಾಡಿದ್ದರು..ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಂಜುನಾಥ್, ಕೊನೆಗೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಿಯಾಂಕ ಮದುವೆಗೂ ಮುನ್ನ ಮೈಸೂರಿನಲ್ಲಿ ವ್ಯಾಸಂಗ ಮಾಡೋ ವೇಳೆ ಆಕೆಗೆ ಪ್ರಿಯಕರ ಇದ್ದು, ಆತನೊಟ್ಟಿಗೆ ಮದುವೆ ಯಾಗಬಯಸಿದ್ದಳಂತೆ.. ಆದರೆ ಮಂಜುನಾಥ್ ಜೊತೆ ಮದುವೆಯಾಗಿದ್ದಕ್ಕೆ ಕುಪಿತಗೊಂಡು ನೀನು ಹಳ್ಳಿ ಗುಗ್ಗು, ನಾನು ಅವನೊಟ್ಟಿಗೆ ಮದುವೆಯಾಗಿದ್ದರೇ ರಾಣಿ ಹಾಗೆ ಇರ್ತಿದ್ದೆ ಅಂತಾ ತನ್ನ ಸಹೋದರ ರಾಕೇಶ್ ನೊಟ್ಟಿಗೆ ಸೇರಿ ಮಂಜುನಾಥ್ ಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ.

ಜೊತೆಗೆ, ಇತ್ತೀಚೆಗೆ ಮಂಜುನಾಥ್ ಆಕೆಯ ಸಹೋದರಿ ಪುಷ್ಪಲತಾಳ ಬಳಿ ಮನೆ ತೆಗೆದುಕೊಳ್ಳೋದಾಗಿ ಹೇಳಿ ಎರಡೆಳೆ ಚಿನ್ನದ ಸರ, ಒಡವೆಗಳನ್ನು ಸಾಲವಾಗಿ ಪಡೆದು ಹೋಗಿದ್ದನಂತೆ. ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದು, ನನಗೆ ಅವಳ ಜತೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಆ ಮನೆಹಾಳಿ ಕಾಟವನ್ನು ತಾಳಲಾರದೇ ನಾನು ಸಾಯುತ್ತಿದ್ದೇನೆ.

ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್​​ ಆಡಿಯೋ ಮೆಸೇಜ್​ ಕಳುಹಿಸಿ, ಬಳಿಕ ಕುಂದೂರು ಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಮನೆ ತೆಗೆದುಕೊಳ್ಳಲು ಇತ್ತೀಚೆಗೆ ಅಕ್ಕ ಪುಷ್ಪ ಬಳಿ ಎರಡೆಳೆ ಸರ ಸೇರಿದಂತೆ ಒಡವೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದನಂತೆ, ತಮ್ಮನ ಕಳೆದುಕೊಂಡ ಅಕ್ಕನ ಆಕ್ರಂದನ ಮುಗಿಲುಮುಟ್ಟಿದೆ.

ಸದ್ಯ ಮೃತ ಮಂಜುನಾಥ್ ಪತ್ನಿ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.. ಹೆಂಡತಿಯ ಕಾಟಕ್ಕೆ ಬೇಸತ್ತ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರ್ದೈವವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:32 pm, Thu, 14 September 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ